ಕರ್ನಾಟಕ

karnataka

ETV Bharat / entertainment

'ವಿಜಯ್​​ ದೇವರಕೊಂಡ ನನ್ನ ಮೆಚ್ಚಿನ ನಟ': ನಾಚಿ ನೀರಾದ ರಶ್ಮಿಕಾ ಮಂದಣ್ಣ- ವಿಡಿಯೋ ನೋಡಿ - Rashmika Vijay - RASHMIKA VIJAY

'ಗಮ್ ಗಮ್ ಗಣೇಶ'ನ ಪ್ರೀ-ರಿಲೀಸ್ ಈವೆಂಟ್​ನಲ್ಲಿ ರಶ್ಮಿಕಾ ಮಂದಣ್ಣ ತಮ್ಮ ಮೆಚ್ಚಿನ ಸಹನಟ ವಿಜಯ್ ದೇವರಕೊಂಡ ಎಂದು ಹೇಳಿಕೊಂಡಿದ್ದಾರೆ.

Vijay Deverakonda, Rashmika Mandanna
ವಿಜಯ್​​ ದೇವರಕೊಂಡ, ರಶ್ಮಿಕಾ ಮಂದಣ್ಣ (ANI)

By ETV Bharat Karnataka Team

Published : May 28, 2024, 1:57 PM IST

ಸೌತ್ ಸ್ಟಾರ್ ನಟ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಅಭಿನಯದ ತೆಲುಗು ಆ್ಯಕ್ಷನ್ ಕಾಮಿಡಿ ಸಿನಿಮಾ 'ಗಮ್ ಗಮ್ ಗಣೇಶ'ನ ಪ್ರೀ-ರಿಲೀಸ್ ಈವೆಂಟ್​ನಲ್ಲಿ ಬಹುಭಾಷಾ ಅಭಿನೇತ್ರಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡರು. ಇದೇ ಮೇ 31ರಂದು ಬಿಡುಗಡೆ ಆಗಲಿರುವ ಚಿತ್ರದ ಈವೆಂಟ್​ ಮೇ 27ರಂದು ಜರುಗಿತು. ಟೈಟ್​ ಶೂಟಿಂಗ್ ಶೆಡ್ಯೂಲ್​​ ನಡುವೆಯೂ,​ ಆನಂದ್ ದೇವರಕೊಂಡ ಅವರ ಮುಂದಿನ ಚಿತ್ರಕ್ಕೆ ತಮ್ಮ ಬೆಂಬಲ ಸೂಚಿಸಲು ರಶ್ಮಿಕಾ ಕಾರ್ಯಕ್ರಮದಲ್ಲಿ ಹಾಜರಿದ್ದರು. ಆ್ಯಂಕರ್ ಆಗಿದ್ದ ಆನಂದ್, ತಮ್ಮ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು. ರಶ್ಮಿಕಾಗೆ ಕೆಲ ಪ್ರಶ್ನೆಗಳನ್ನು ಕೇಳುವ ಮೂಲಕ ಸದ್ಯ ಇರುವ ಅಂತೆಕಂತೆಗಳಿಗೆ ಮತ್ತಷ್ಟು ತುಪ್ಪ ಸುರಿದರು.

ಸೀರೆಯಲ್ಲಿ ಬಹಳ ಸುಂದರವಾಗಿ ಕಾಣಿಸಿಕೊಂಡಿರುವ ರಶ್ಮಿಕಾ ಬಳಿ, "ನಿಮ್ಮ ಮೆಚ್ಚಿನ ಸಹನಟ ಯಾರು?" ಎಂದು ಆನಂದ್ ಪ್ರಶ್ನಿಸಿದರು. ಪ್ರಶ್ನೆ ಎದುರಾಗುತ್ತಿದ್ದಂತೆ ರಶ್ಮಿಕಾ ನಾಚಿ ನೀರಾದರು. ಪ್ರೇಕ್ಷಕರು ಕೂಡ ಜೋರಾಗಿ ಸದ್ದು ಮಾಡತೊಡಗಿದರು. "ಆನಂದ್, ನೀವು ನನ್ನ ಫ್ಯಾಮಿಲಿ. ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಬೇಡಿ" ಎಂದು ನಟಿ ನಾಚುತ್ತಲೇ ತಿಳಿಸಿದರು. ಅದಾಗ್ಯೂ, "ರೌಡಿ ಬಾಯ್" ಎಂದು ಅಭಿಮಾನಿಗಳು ಕೂಗತೊಡಗಿದರು. ಇದರ ನಡುವೆ, ರಶ್ಮಿಕಾ "ರೌಡಿ ಬಾಯ್" ನನ್ನ ಮೆಚ್ಚಿನ ಸಹನಟ ಎಂದು ಒಪ್ಪಿಕೊಂಡರು. ವಿಜಯ್ ದೇವರಕೊಂಡ "ರೌಡಿ ಬಾಯ್" ಎಂದು ಜನಪ್ರಿಯರಾಗಿದ್ದು, ಬಹಳ ದಿನಗಳಿಂದ ರಶ್ಮಿಕಾ ವಿಜಯ್​ ಡೇಟಿಂಗ್​ ವದಂತಿ ಇರೋದು ಗೊತ್ತಿರುವ ವಿಚಾರವೇ. ಅದಾಗ್ಯೂ, ಇಬ್ಬರೂ ತಮ್ಮ ಪ್ರೀತಿಯನ್ನು ಸಾರ್ವಜನಿಕವಾಗಿ ಖಚಿತಪಡಿಸಿಲ್ಲ. ಸದ್ಯ ನಟಿ ಕೊಟ್ಟಿರುವ ಹೇಳಿಕೆ, ನಾಚಿ ನೀರಾಗಿರುವ ವಿಡಿಯೋ ಸೋಷಿಯಲ್​​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​​ ಆಗಿದೆ.

ಈವೆಂಟ್‌ನಲ್ಲಿ, ನಿರ್ದೇಶಕ ಸಾಯಿ ರಾಜೇಶ್ ನೀಲಂ ಅವರೊಂದಿಗೆ ಕೆಲಸ ಮಾಡುವ ತಮ್ಮ ಆಸೆಯನ್ನೂ ವ್ಯಕ್ತಪಡಿಸಿದರು. ಅವರ ಕೊನೆಯ ಚಿತ್ರ 'ಬೇಬಿ'ಬಗ್ಗೆ ಮಾತನಾಡಿ ಭಾವುಕರಾದರು. ಅವರೊಂದಿಗೆ ಕೆಲಸ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದರು. ಅವರ ಮಾರ್ಗದರ್ಶನದಲ್ಲಿ ಚಾಲೆಂಜಿಂಗ್​​ ಪಾತ್ರಗಳನ್ನು ಚಿತ್ರಿಸುವ ತಮ್ಮ ಬಲವಾದ ಬಯಕೆಯನ್ನು ವ್ಯಕ್ತಪಡಿಸಿದರು. ಸಾಯಿ ರಾಜೇಶ್ ನೀಲಂ ನಟಿಯ ಆಸೆಯನ್ನು ಈಡೇರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ದೀಕ್ಷಿತ್ ಶೆಟ್ಟಿ ನಟನೆಯ 'ಬ್ಯಾಂಕ್ ಆಫ್​ ಭಾಗ್ಯಲಕ್ಷ್ಮೀ' ಅನಿಮೇಷನ್‌ ಟೀಸರ್​ಗೆ ಮೆಚ್ಚುಗೆ - Bank Of Bhagyalakshmi

ಇನ್ನು ರಶ್ಮಿಕಾರ ಸಿನಿಮಾ ಬಗ್ಗೆ ನೋಡೋದಾದ್ರೆ, ಮಹಿಳಾ ಕೇಂದ್ರಿತ ಸಿನಿಮಾ, ಪೀರಿಯಾಡಿಕಲ್​​ ಡ್ರಾಮಾ ಸೇರಿದಂತೆ ಬಹುನಿರೀಕ್ಷಿತ ಪ್ಯಾನ್-ಇಂಡಿಯನ್ ಪ್ರೋಜೆಕ್ಟ್​ಗಳನ್ನು ಹೊಂದಿದ್ದಾರೆ. 'ಪುಷ್ಪ 2: ದಿ ರೂಲ್' ಆಗಸ್ಟ್ 15 ರಂದು ತೆರೆಕಾಣಲಿದೆ. ಅಲ್ಲದೇ 'ರೈನ್​ಬೋ', 'ದಿ ಗರ್ಲ್‌ಫ್ರೆಂಡ್' ಮತ್ತು 'ಛಾವಾ' ಚಿತ್ರಗಳ ಚಿತ್ರೀಕರಣವನ್ನು ಸಹ ಪೂರ್ಣಗೊಳಿಸಿದ್ದಾರೆ. ಅಲ್ಲದೇ 'ಕುಬೇರ' ಚಿತ್ರದಲ್ಲಿ ಸೌತ್ ಸೂಪರ್ ಸ್ಟಾರ್ ಧನುಷ್‌ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಬಾಲಿವುಡ್​ ಸೂಪರ್ ಸ್ಟಾರ್ ಸಲ್ಮಾನ್ ಖಾನ್‌ ಜೊತೆಗಿನ 'ಸಿಖಂದರ್' ಸಿನಿಮಾವನ್ನು ಘೋಷಿಸಿದ್ದಾರೆ.

ಇದನ್ನೂ ಓದಿ:ಜನಮನ ಗೆದ್ದ ಕನ್ನಡ ಸಿನಿಮಾ: 50 ದಿನದ ಸಂಭ್ರಮದಲ್ಲಿ 'ಕೆರೆಬೇಟೆ' - Kerebete Success Celebration

ABOUT THE AUTHOR

...view details