ಕರ್ನಾಟಕ

karnataka

ETV Bharat / entertainment

ರಾಜೀವ್ ಹನು ಅಭಿನಯದ 'ಉಸಿರೇ ಉಸಿರೇ' ಬಿಡುಗಡೆ ದಿನಾಂಕ ಘೋಷಣೆ - Usire Usire Movie - USIRE USIRE MOVIE

ಬಿಗ್ ಬಾಸ್ ಖ್ಯಾತಿಯ ರಾಜೀವ್ ಹನು ಅಭಿನಯದ 'ಉಸಿರೇ ಉಸಿರೇ' ಸಿನಿಮಾ ಬಿಡುಗಡೆ ದಿನಾಂಕ ರಿವೀಲ್​ ಆಗಿದೆ.

rajeev-hanu-starrer-usire-usere-movie-release-date-announced
ರಾಜೀವ್ ಹನು ಅಭಿನಯದ 'ಉಸಿರೇ ಉಸಿರೇ' ಬಿಡುಗಡೆ ದಿನಾಂಕ ಘೋಷಣೆ

By ETV Bharat Karnataka Team

Published : Apr 18, 2024, 1:05 PM IST

ಬಿಗ್ ಬಾಸ್ ಖ್ಯಾತಿಯ ರಾಜೀವ್ ಹನು ಬಹಳ ವರ್ಷಗಳ ನಂತರ ಅಭಿನಯಿಸುತ್ತಿರುವ ಚಿತ್ರ 'ಉಸಿರೇ ಉಸಿರೇ'. ಚಿತ್ರರಂಗದಲ್ಲಿ ಒಂದಿಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಿರುವ 'ಉಸಿರೇ ಉಸಿರೇ' ಚಿತ್ರೀಕರಣ ಮುಗಿಸಿ, ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಶೇಷಪಾತ್ರದಲ್ಲಿ ಕಾಣಸಿಕೊಂಡಿರುವ ಚಿತ್ರವು, ಈಗಾಗಲೇ ಟ್ರೇಲರ್ ಹಾಗೂ ಹಾಡುಗಳ ಮೂಲಕ ಜನ ಮನ ಗೆದ್ದಿದೆ. ಸಿನಿಮಾ ಬಿಡುಗಡೆ ದಿನಾಂಕ ಕೂಡ ಪ್ರಕಟವಾಗಿದೆ.

ಚಿತ್ರದ ಬಗ್ಗೆ ಮಾತನಾಡಿರುವ ನಟ ರಾಜೀವ್ ಹನು, ''ನಾನು ಚಿತ್ರಕ್ಕಾಗಿ ಐದು ವರ್ಷಗಳ ಕಾಲ ಶ್ರಮಪಟ್ಟಿದ್ದೇನೆ. ಈ ಸಮಯದಲ್ಲಿ ಬೇರೆ ಯಾವ ಚಿತ್ರಗಳನ್ನೂ ಒಪ್ಪಿಕೊಂಡಿಲ್ಲ. ಈಗ ಬಿಡುಗಡೆ ದಿನಾಂಕ ನಿಗದಿಯಾಗಿದೆ. ನನ್ನ ಅಣ್ಣನ ಸ್ಥಾನದಲ್ಲಿರುವ ಕಿಚ್ಚ ಸುದೀಪ್ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ನಮಗೆ ಪ್ರೋತ್ಸಾಹ ನೀಡಿದ್ದಾರೆ. ಅವರಿಗೆ ವಿಶೇಷ ಧನ್ಯವಾದಗಳು. ಇದೊಂದು ನೈಜ ಘಟನೆ ಆಧಾರಿತ ಚಿತ್ರವಾಗಿದ್ದು, ಚೆನ್ನಾಗಿ ಮೂಡಿಬಂದಿದೆ. ಬಂಡವಾಳ ಹೂಡಿರುವ ನಿರ್ಮಾಪಕ ಪ್ರದೀಪ್ ಯಾದವ್ ಅವರಿಗೆ ಒಳ್ಳೆಯದಾಗಲಿ'' ಎಂದರು.

'ಉಸಿರೇ ಉಸಿರೇ'

ನಿರ್ದೇಶಕ ವಿಜಯ್ ಮಾತನಾಡಿ, ''ನನಗೆ ಚಿತ್ರರಂಗ ಹೊಸತು. ಅವರು ಈ ಚಿತ್ರದ ಕಥೆ ಹೇಳಿ ನಿರ್ಮಾಣಕ್ಕೆ ಕರೆತಂದರು. ಕಿಚ್ಚ ಸುದೀಪ್ ಆರಂಭದಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ನಾಯಕ ರಾಜೀವ್ ಹಾಗೂ ಚಿತ್ರತಂಡದ ಸಹಕಾರವನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳುತ್ತೇನೆ. ಚಂದನ್ ಫಿಲಂಸ್ ಅವರು ಚಿತ್ರದ ವಿತರಕರಾಗಿದ್ದು, ಪ್ರದೀಪ್ ಯಾದವ್ ನಿರ್ಮಾಪಕರಾಗಿದ್ದಾರೆ'' ಎಂದು ತಿಳಿಸಿದರು.

''ಇನ್ನೊಂದು ವಿಷಯವೆಂದರೆ, ನಮ್ಮ ಚಿತ್ರದ ನಿರ್ದೇಶಕ ಸಿ.ಎಂ. ವಿಜಯ್ ಕೆಲವು ತಿಂಗಳುಗಳಿಂದ ನಮ್ಮ ಸಂಪರ್ಕದಲ್ಲಿಲ್ಲ. ಫೋನ್ ಕರೆ ಸ್ವೀಕರಿಸುತ್ತಿಲ್ಲ. ಅವರಿಂದ ನನಗೆ ಬಹಳ ನಷ್ಟವಾಗಿದೆ. ಚಿತ್ರ ಬಿಡುಗಡೆಯ ಸಮಯದಲ್ಲಿ ನಮ್ಮ ಜೊತೆ ಅವರು ನಿಂತಿಲ್ಲ. ಹೇಳಿದ ದುಡ್ಡಿಗಿಂತಲೂ ಹೆಚ್ಚು ಖರ್ಚು ಮಾಡಿಸಿದ್ದಾರೆ. ಅದರಿಂದ ನನಗೆ ತುಂಬಾ ಅನಾನುಕೂಲವಾಗಿದೆ. ಯಾವ ಹೊಸ ನಿರ್ಮಾಪಕರಿಗೂ ಈ ರೀತಿ ಆಗಬಾರದು, ಎಚ್ಚರವಹಿಸಿ. ನನ್ನ ತಾಯಿ ಹಾಗೂ ನನ್ನ ಅನೇಕ ಸ್ನೇಹಿತರ ಸಹಾಯದಿಂದ ಚಿತ್ರವನ್ನು ಮೇ 3ರಂದು ಬಿಡುಗಡೆ ಮಾಡುತ್ತಿದ್ದೇನೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಎಲ್ಲರೂ ನೋಡಿ, ಪ್ರೋತ್ಸಾಹಿಸಿ'' ಎಂದು ಮನವಿ ಮಾಡಿದರು.

'ಉಸಿರೇ ಉಸಿರೇ'

ರಾಜೀವ್ ಜೋಡಿಯಾಗಿ ಶ್ರೀಜಿತಾ ಘೋಷ್​ ಅಭಿನಯಿಸಿದ್ದಾರೆ. ಡೈನಾಮಿಕ್ ಸ್ಟಾರ್ ದೇವರಾಜ್, ತಾರಾ, ಸುಚೇಂದ್ರ ಪ್ರಸಾದ್, ಬ್ರಹ್ಮಾನಂದಂ, ಅಲಿ, ಸಾಧುಕೋಕಿಲ, ಮಂಜು ಪಾವಗಡ, ಶೈನಿಂಗ್ ಸೀತಾರಾಮ್, ಪ್ರೀತಿ ಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ. ಎನ್. ಗೊಂಬೆ ಲಾಂಛನದಲ್ಲಿ ಪ್ರದೀಪ್ ಯಾದವ್ ನಿರ್ಮಾಣ ಹಾಗೂ ಸಿ.ಎಂ.ವಿಜಯ್ ನಿರ್ದೇಶನ ಚಿತ್ರಕ್ಕಿದೆ. ಮೇ 3ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ 'ಉಸಿರೇ ಉಸಿರೇ' ಚಿತ್ರವು ನಟ‌ ರಾಜೀವ್ ಹನುಗೆ ಒಳ್ಳೆಯ ಬ್ರೇಕ್ ನೀಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಕನ್ನಡದಲ್ಲಿ ಬರಲಿದೆ ಅಯೋಧ್ಯೆ ರಾಮ ಮಂದಿರ ಕುರಿತ ಬಯೋಪಿಕ್ - ayodhya ram mandir biopic

ABOUT THE AUTHOR

...view details