ಕರ್ನಾಟಕ

karnataka

ETV Bharat / entertainment

ಆಟೋ ಓಡಿಸಿ 'ಭೈರಾದೇವಿ' ರಿಲೀಸ್​​ ಡೇಟ್ ಘೋಷಿಸಿದ ರಾಧಿಕಾ ಕುಮಾರಸ್ವಾಮಿ - Bhairadevi Release Date Announced - BHAIRADEVI RELEASE DATE ANNOUNCED

ನಟಿ ರಾಧಿಕಾ ಕುಮಾರಸ್ವಾಮಿ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ಭೈರಾದೇವಿ'. ಅಕ್ಟೋಬರ್ 3 ರಂದು ಅದ್ಧೂರಿಯಾಗಿ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿರುವ ಚಿತ್ರದ ಪ್ರಚಾರ ಶುರುವಾಗಿದೆ.

Radhika Kumaraswamy drove the auto
ಆಟೋ ಓಡಿಸಿದ ರಾಧಿಕಾ ಕುಮಾರಸ್ವಾಮಿ (ETV Bharat)

By ETV Bharat Entertainment Team

Published : Sep 16, 2024, 5:50 PM IST

ಬೆಂಗಳೂರು: ಸ್ಯಾಂಡಲ್​ವುಡ್​ನ ಸ್ವೀಟಿಯಾಗಿ ತನ್ನದೇ ಬೇಡಿಕೆ ಹೊಂದಿರುವ ನಟಿ ರಾಧಿಕಾ ಕುಮಾರಸ್ವಾಮಿ. ನಟನೆ ಜೊತೆಗೆ ನಿರ್ಮಾಣದಲ್ಲೂ ಗುರುತಿಸಿಕೊಂಡಿರುವ ರಾಧಿಕಾ ಕುಮಾರಸ್ವಾಮಿ ಅವರು ಶಮಿಕಾ ಎಂಟರ್​ಪ್ರೈಸಸ್ ಮೂಲಕ ಮೂರು ಸಿನಿಮಾಗಳನ್ನು ನಿರ್ಮಾಣ ಮಾಡಿರೋದು ತಿಳಿದಿರುವ ವಿಚಾರ. 'ದಮಯಂತಿ' ಸಿನಿಮಾ ಆದ್ಮೇಲೆ ರಾಧಿಕಾ 'ಭೈರಾದೇವಿ' ಸಿನಿಮಾ ಮಾಡುತ್ತಿದ್ದು, ಈ ಚಿತ್ರ ಕೆಲವೊಂದು ವಿಚಾರಗಳಿಗೆ ಸದ್ದು ಮಾಡುತ್ತಿದೆ.

ಆಟೋ ಓಡಿಸಿ 'ಭೈರಾದೇವಿ' ರಿಲೀಸ್​​ ಡೇಟ್ ಅನೌನ್ಸ್​​ ಮಾಡಿದ ರಾಧಿಕಾ ಕುಮಾರಸ್ವಾಮಿ (ETV Bharat)

ಸಣ್ಣ ಟೀಸರ್ ಮೂಲಕವೇ ಅಭಿಮಾನಿ ಬಳಗದಲ್ಲಿ ಕುತೂಹಲ ಹುಟ್ಟಿಸಿದ್ದ 'ಭೈರಾದೇವಿ' ಬಿಡುಗಡೆ ಯಾವಾಗ? ಎಂದು ಸಿನಿಪ್ರಿಯರು ಕುತೂಹಲಕಾರರಾಗಿದ್ದರು. ಫೈನಲಿ ಸಿನಿಮಾ ರಿಲೀಸ್​ ಡೇಟ್ ಅನೌನ್ಸ್ ಆಗಿದೆ‌. ತಮ್ಮ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸದ ಬಳಿ 'ಭೈರಾದೇವಿ' ಚಿತ್ರದ ಪ್ರಚಾರಕ್ಕೆ ಮೊದಲ ಹೆಜ್ಜೆ ಇಟ್ಟಿದ್ದಾರೆ.

ಹೌದು, ನಟಿ ರಾಧಿಕಾ ಕುಮಾರಸ್ವಾಮಿ ಸ್ವತಃ ತಾವೇ ಆಟೋ ಓಡಿಸುವ ಮೂಲಕ ಗಮನ ಸೆಳೆದಿದ್ದಾರೆ‌. ಈ ಸಂದರ್ಭ ಮಹಿಳಾ ಮತ್ತು ಪುರುಷ ಆಟೋ ಚಾಲಕರು ಉಪಸ್ಥಿತರಿದ್ದರು. ಭೈರಾದೇವಿ ಚಿತ್ರದ ಪೋಸ್ಟರ್​​​ವುಳ್ಳ ಆಟೋಗಳು ಎಲ್ಲಾ ಕಡೆ ಸಂಚರಿಸಲಿವೆ.

'ಭೈರಾದೇವಿ' ಪೋಸ್ಟರ್ (ETV Bharat)

ಇದನ್ನೂ ಓದಿ:ಶಿವಣ್ಣನಿಗೆ ಎದ್ದು ನಿಂತು ಚಪ್ಪಾಳೆ ಹೊಡೆದ ದಕ್ಷಿಣ ಚಿತ್ರರಂಗದ ಗಣ್ಯರು: ವಿಡಿಯೋ ನೋಡಿ - Standing Ovation to Shivarajkumar

ಭೈರಾದೇವಿ ಸಿನಿಮಾ ಮೂಲಕ ರಾಧಿಕಾ ಅವರು ಇದೇ ಮೊದಲ ಬಾರಿಗೆ ಮಹಿಳಾ ಅಘೋರಿಯಾಗಿ ಅಭಿನಯಿಸಿದ್ದಾರೆ. ಚಿತ್ರದ ಟೀಸರ್ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಸಿನಿಮಾದಲ್ಲಿ ರಮೇಶ್ ಅರವಿಂದ್, ರಂಗಾಯಣ ರಘು, ರವಿಶಂಕರ್, ಸ್ಕಂದ, ಅಚ್ಯುತ್ ಕುಮಾರ್ ಸೇರಿದಂತೆ ದೊಡ್ಡ ತಾರಗಣ‌ ಇದೆ. ಈ ಹಿಂದೆ 'ಆರ್ ಎಕ್ಸ್ ಸೂರಿ' ಸಿನಿಮಾ ನಿರ್ದೇಶನ ಮಾಡಿ ಗಮನ ಸೆಳೆದಿದ್ದ ಶ್ರೀಜೈ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಇದನ್ನೂ ಓದಿ:ದೇವಸ್ಥಾನದಲ್ಲಿ ಹಸೆಮಣೆಯೇರಿದ ನಟಿ ಅದಿತಿ ರಾವ್ ಹೈದರಿ - ನಟ ಸಿದ್ಧಾರ್ಥ್: ಮದುವೆಯ ಸುಂದರ ಫೋಟೋಗಳಿಲ್ಲಿವೆ - Siddharth Aditi Rao Hydari Marriage

ಶ್ರೀಜೈ ಅವರು ನಿರ್ದೇಶಿಸಿರುವ ಈ ಚಿತ್ರವನ್ನು ರವಿರಾಜ್ ನಿರ್ಮಾಣ ಮಾಡಿದ್ದು, ಯಾದವ್ ಅವರ ಸಹ ನಿರ್ಮಾಣ ಇದೆ. ಜೆ.ಎಸ್. ವಾಲಿ ಅವರ ಕ್ಯಾಮರಾ ಕೈಚಳಕವನ್ನು ಈ ಚಿತ್ರದಲ್ಲಿ ನೋಡಬಹುದಾಗಿದೆ. ಕೆ.ಕೆ. ಸೆಂಥಿಲ್ ಪ್ರಸಾದ್ ಸಂಗೀತ ನಿರ್ದೇಶನ ಹಾಗೂ ರವಿಚಂದ್ರನ್ ಅವರ ಸಂಕಲನ ಈ ಚಿತ್ರಕ್ಕಿದೆ. ಶಮಿಕಾ ಎಂಟರ್​ಪ್ರೈಸಸ್ ಬ್ಯಾನರ್ ಅಡಿ ಭೈರಾದೇವಿ, ಅಜಾಗ್ರತ ಚಿತ್ರಗಳು ನಿರ್ಮಾಣ ಆಗಿವೆ. ಬಹುನಿರೀಕ್ಷಿತ "ಭೈರಾದೇವಿ" ಅಕ್ಟೋಬರ್ 3 ರಂದು ಅದ್ಧೂರಿಯಾಗಿ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ನಾಡಹಬ್ಬ ನವರಾತ್ರಿಯ ಮೊದಲ ದಿನವೇ ಈ ಚಿತ್ರ ಬಿಡುಗಡೆ ಆಗುತ್ತಿರುವುದು ವಿಶೇಷ. ಈ ಚಿತ್ರ ಎಷ್ಟರ ಮಟ್ಟಿಗೆ ಗೆಲುವು ಕಾಣಲಿದೆ ಅನ್ನೋದು ಶೀಘ್ರದಲ್ಲೇ ಗೊತ್ತಾಗಲಿದೆ.

ABOUT THE AUTHOR

...view details