ಕರ್ನಾಟಕ

karnataka

ETV Bharat / entertainment

ಪುನೀತ್ ರಾಜ್‌ಕುಮಾರ್‌ 'ಜಾಕಿ' ಮರು ಬಿಡುಗಡೆ, ಭರ್ಜರಿ ಪ್ರದರ್ಶನ - Jackie Movie

ಮರು ಬಿಡುಗಡೆಗೊಂಡ ಪುನೀತ್​ ರಾಜ್​ಕುಮಾರ್ ನಟನೆಯ​ 'ಜಾಕಿ' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ.

'ಜಾಕಿ'
'ಜಾಕಿ'

By ETV Bharat Karnataka Team

Published : Mar 17, 2024, 8:44 AM IST

ಪವರ್​ ಸ್ಟಾರ್​ ಪುನೀತ್​ ರಾಜ್‍ಕುಮಾರ್​ ಅಭಿನಯದ 'ಜಾಕಿ' ಸಿನಿಮಾ ಮರು ಬಿಡುಗಡೆಗೊಂಡಿದ್ದು ಉತ್ತಮ ಪ್ರತಿಕ್ರಿಯೆ ಗಳಿಸುತ್ತಿದೆ. ರಾಜ್ಯಾದ್ಯಂತ 100ಕ್ಕೂ ಹೆಚ್ಚು ಸೋಲ್ಡ್ ಔಟ್ ಶೋಗಳು ನಡೆದಿವೆ. ಮರು ಬಿಡುಗಡೆಗೊಂಡ ಮೊದಲನೇ ದಿನ 1 ಕೋಟಿ ರೂಪಾಯಿ ಸಂಪಾದಿಸಿದೆ. ಎರಡನೇ ದಿನದ ಶೋಗಳಿಗೂ ಇದೇ ರೀತಿಯ ಪ್ರತಿಕ್ರಿಯೆ ಸಿಕ್ಕಿದೆ. ಅಪ್ಪು ಹುಟ್ಟುಹಬ್ಬದ ದಿನವಾದ ಇಂದು'ಜಾಕಿ' ಇನ್ನೂ ಹೆಚ್ಚು ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.

'ಜಾಕಿ'

14 ವರ್ಷಗಳ ನಂತರ 'ಜಾಕಿ' ಮಾರ್ಚ್ 15ರಂದು ತೆರೆಗೆ ಮರುಕಳಿಸಿ 175 ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಕಂಡಿದೆ. ಚಿತ್ರವನ್ನು ಕೆ.ಆರ್.ಜಿ ಸ್ಟುಡಿಯೋಸ್, ಪಿ.ಆರ್‌.ಕೆ ವಿತರಿಸಿದೆ.

'ಜಾಕಿ'

ಈ‌‌ ಕುರಿತು ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥಾಪಕ ಕಾರ್ತಿಕ್ ಗೌಡ ಮಾತನಾಡಿ, "ಜಾಕಿ ಒಂದು ಮಾಸ್ ಚಿತ್ರ. ಇದರ ಮರು ಬಿಡುಗಡೆಯ ಮೂಲಕ ನಾವು ಮತ್ತು ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಅವರನ್ನು ಸಂಭ್ರಮಿಸಲು ಇಚ್ಛಿಸುತ್ತೇವೆ. ಇದೇ ರೀತಿ ಪ್ರತೀ ವರ್ಷವೂ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಚಿತ್ರವನ್ನು ಮರು ಬಿಡುಗಡೆ ಮಾಡುತ್ತೇವೆ. ಮುಂದಿನ ವರ್ಷ, ಅವರ 50ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಕೆ.ಆರ್.ಜಿ ಸ್ಟುಡಿಯೋಸ್ ಮತ್ತು ಪಿ.ಆರ್‌.ಕೆ ಪುನೀತ್ ಅವರ ಚೊಚ್ಚಲ ಚಿತ್ರವಾದ 'ಅಪ್ಪು'ವನ್ನು ಮರು ಬಿಡುಗಡೆ ‌ಮಾಡಬೇಕೆಂದು ನಿರ್ಧರಿಸಿದ್ದೇವೆ. ಚಿತ್ರದ ಕಲರ್​ ಗ್ರೇಡಿಂಗ್ ಮತ್ತು ಇನ್ನಿತರ ಕೆಲಸಗಳು ಏಪ್ರಿಲ್​ ತಿಂಗಳಲ್ಲಿ ಆರಂಭಗೊಳಲ್ಲಿವೆ" ಎಂದರು.

ಇದನ್ನೂ ಓದಿ:ಕನ್ನಡಿಗರ 'ಪರಮಾತ್ಮ'ನ ಜನ್ಮದಿನ: ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದ ಅಪ್ಪು

ABOUT THE AUTHOR

...view details