ಬಾಲಿವುಡ್ ಅಂಗಳದಲ್ಲಿರುವ ಪ್ರೇಮಪಕ್ಷಿಗಳಾದ ಕೃತಿ ಖರಬಂದ ಹಾಗೂ ಪುಲ್ಕಿತ್ ಸಾಮ್ರಾಟ್ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹಲವು ವರ್ಷಗಳಿಂದ ರಿಲೇಶನ್ಶಿಪ್ನಲ್ಲಿರೋ ಈ ಜೋಡಿ ತಮ್ಮ ಸಂಬಂಧವನ್ನು 'ಮದುವೆ' ಕಾನ್ಸೆಪ್ಟ್ ಮೂಲಕ ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಜ್ಜಾಗಿರುವಂತೆ ತೋರುತ್ತಿದೆ. ಪ್ರೇಮಿಗಳ ದಿನದಂದು ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ತಮ್ಮ ಮ್ಯಾರೇಜ್ ಪ್ಲ್ಯಾನ್ಸ್ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.
ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ನಟ ಪುಲ್ಕಿತ್ ಸಾಮ್ರಾಟ್ ಅವರು ಕೃತಿ ಖರಬಂದ ಜೊತೆಗಿನ ರೊಮ್ಯಾಂಟಿಕ್ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ, "ಡ್ಯಾನ್ಸಿಂಗ್ ಆನ್ ದಿ ಎಡ್ಜ್ ಆಫ್ ಲೀಪ್, ಐ ಡು, ಐ ಲವ್ ಯೂ'' ಎಂದು ಬರೆದುಕೊಂಡು, ಹಾರ್ಟ್ ಎಮೋಜಿ ಹಾಕಿದ್ದಾರೆ.
ಮತ್ತೊಂದೆಡೆ ಪುಲ್ಕಿತ್ ಸಾಮ್ರಾಟ್ ಜೊತೆಗಿನ ಸುಂದರ ಫೋಟೋವನ್ನು ಕೃತಿ ಖರಬಂದ ಕೂಡ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ, ಜೋಡಿಯು ಪರಸ್ಪರರ ಕೈಗಳನ್ನು ಬಿಗಿಯಾಗಿ ಹಿಡಿದಿರುವುದನ್ನು ಕಾಣಬಹುದು. ನಟಿ ಗೆಳೆಯನನ್ನು ಬಹಳ ಪ್ರೀತಿಯಿಂದ ನೋಡುತ್ತಿದ್ದು, ಫೋಟೋಗಳಿಗೆ ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ. ಬ್ಯೂಟಿಫುಲ್ ಫೋಟೋ ಶೇರ್ ಮಾಡಿದ ನಟಿ, "ಲೆಟ್ಸ್ ಮಾರ್ಚ್ ಟುಗೆದರ್, ಹ್ಯಾಂಡ್ ಇನ್ ಹ್ಯಾಂಡ್'' ಎಂದು ಲವ್ ಸಿಂಬಲ್ನೊಂದಿಗೆ ಕ್ಯಾಪ್ಸನ್ ಕೊಟ್ಟಿದ್ದಾರೆ.
ಇದರರ್ಥ, ಜೋಡಿ ಇದೇ ಸಾಲಿನ ಮಾರ್ಚ್‌ನಲ್ಲಿ ದಾಂಪತ್ಯ ಜೀವನ ಆರಂಭಿಸಲಿದ್ದಾರೆ ಎಂದರ್ಥವೇ?. ಇಬ್ಬರ ಪೋಸ್ಟ್‌ಗಳ ಕಾಮೆಂಟ್ ಸೆಕ್ಷನ್ ಅವರ ಅಭಿಮಾನಿಗಳ ಲವೆಬಲ್ ಕಾಮೆಂಟ್‌ಗಳಿಂದ ತುಂಬಿ ತುಳುಕುತ್ತಿದೆ. ಈ ಹಿಂದೆ 'ಹೌಸ್‌ಫುಲ್ 4' ಮತ್ತು 'ಯಮ್ಲಾ ಪಗ್ಲಾ ದೀವಾನಾ: ಫಿರ್ ಸೆ' ಸಿನಿಮಾಗಳಲ್ಲಿ ನಟಿ ಜೊತೆ ಕೆಲಸ ಮಾಡಿರುವ ಬಾಬಿ ಡಿಯೋಲ್, ಈ ಕ್ಯೂಟ್ ಕಪಲ್ಗೆ ವಿಶ್ ಮಾಡಿ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ.