ರೆಬೆಲ್ ಸ್ಟಾರ್ ಜನಪ್ರಿಯತೆಯ ಪ್ರಭಾಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ 'ಸಲಾರ್' ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಇದರ ಜೊತೆಗೆ ಇಂಟರೆಸ್ಟಿಂಗ್ ಫೋಟೋ ಶೇರ್ ಮಾಡಿದ್ದಾರೆ.
'ಸಲಾರ್' ಸೆಟ್‌ನಲ್ಲಿ ಇಬ್ಬರು ಮಾತನಾಡುತ್ತಿರುವ ತೆರೆಮರೆಯ ಸ್ಟಿಲ್ ಹಂಚಿಕೊಂಡಿರುವ ಪ್ರಭಾಸ್, 'ಲವ್ ಯೂ ಸರ್. ಎ ಬ್ಯೂಟಿಫುಲ್ ಹ್ಯಾಪಿ ಬರ್ತ್ಡೇ' ಎಂದು ಬರೆದಿದ್ದಾರೆ. ಈ ಫೋಟೋ ಟ್ರೆಂಡಿಂಗ್ ಆಗಿದೆ. ಇದನ್ನು ಗಮಿನಿಸಿದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ನೀಲ್‌ಗೆ ಶುಭ ಕೋರುತ್ತಿದ್ದಾರೆ.
'ಸಲಾರ್' ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಕಾಲಿವುಡ್ ನಟಿ ಶ್ರೀಯಾ ರೆಡ್ಡಿ ಕೂಡ ಪ್ರಶಾಂತ್ ನೀಲ್‌ಗೆ ವಿಶ್ ಮಾಡಿದ್ದಾರೆ. ನೀಲ್ ಜೊತೆ ಸೆಟ್‌ನಲ್ಲಿ ತೆಗೆಸಿಕೊಂಡಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
'NTR 31' ಚಿತ್ರತಂಡ ವಿಶೇಷ ಪೋಸ್ಟ್ ಹಂಚಿಕೊಂಡಿದ್ದು, ನೀಲ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದೆ. 'NTR 31'ರ ನಿರ್ಮಾಣ ಸಂಸ್ಥೆಯಾದ Mythri Makers ಕೂಡ ಟ್ವಿಟರ್ ವೇದಿಕೆಯಲ್ಲಿ 'ಮಾಸ್ ಸಿನಿಮಾಗಳನ್ನು ರೀ ಡಿಫೈನ್ ಮಾಡಿ ಹೀರೋಯಿಸಂಗೆ ಹೊಸ ಬೆಂಚ್ಮಾರ್ಕ್ ಸೆಟ್ ಮಾಡಿದ ಡೈರೆಕ್ಟರ್. ಮ್ಯಾನ್ ಆಫ್ ಮಾಸ್ಗಾಗಿ ಅವರ ವಿಶನ್ ಬಾಕ್ಸ್ ಆಫೀಸ್ ಸೆನ್ಸೇಶನ್‌ಗಿಂತ ಕಡಿಮೆಯೇನೂ ಇಲ್ಲ' ಎಂದು ಬರೆದಿದ್ದಾರೆ.
ಸಿನಿಮಾ ವಲಯದ ಮಾಹಿತಿಯ ಪ್ರಕಾರ, ಪ್ರಶಾಂತ್ ನೀಲ್ ಪ್ರಸ್ತುತ ಈ ಚಿತ್ರದ ಸ್ಕ್ರಿಪ್ಟ್‌ಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಇದರ ಭಾಗವಾಗಿ ಸಂಪೂರ್ಣ ಪ್ರಿ-ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಲು ಸಿದ್ಧತೆಗಳೂ ನಡೆಯುತ್ತಿವೆ. ಸದ್ಯ ತಾರಕ್ ಸರಣಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಕಾರಣ, ನಂತರವೇ ಎನ್‌ಟಿಆರ್ 31ರ ಸೆಟ್‌ಗೆ ಹೋಗಲಿದ್ದಾರೆ ಎಂಬ ಮಾತುಗಳಿವೆ. ಅದೂ ಅಲ್ಲದೇ ಈ ಸಿನಿಮಾದ ಶೂಟಿಂಗ್ ಈ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಆರಂಭವಾಗಲಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಇದು ನನ್ನ ಕರಿಯರ್ನ ಬೆಸ್ಟ್ ಸಿನಿಮಾ, ಖಂಡಿತಾ ಹಿಟ್ ಆಗುತ್ತದೆ: ವಿನೋದ್ ಪ್ರಭಾಕರ್ - Madeva Cinema