ಅಮರಾವತಿ:ಸನಾತನ ಧರ್ಮ ಪರಿರಕ್ಷಣಾ ಯೋಜನೆ ಭಾಗವಾಗಿ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಮತ್ತು ಜನಾಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಮೂರು ದಿನದ ಟೆಂಪಲ್ ರನ್ಗೆ ಮುಂದಾಗಿದ್ದಾರೆ. ಬುಧವಾರದಿಂದ ಅವರ ಕೇರಳ ಮತ್ತು ತಮಿಳುನಾಡಿನ ವಿವಿಧ ದೇಗುಲಕ್ಕೆ ಭೇಟಿ ನೀಡಲಿದ್ದಾರೆ.
ಮೊದಲ ದಿನದಂದು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರು ಶ್ರೀ ಅಗಸ್ತ್ಯ ಮಹರ್ಷಿ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಇದಾದ ಬಳಿಕ ತಮಿಳುನಾಡಿನ ಮಧುರೈಗೆ ಭೇಟಿ ನೀಡಲಿದ್ದು, ಮೀನಾಕ್ಷಿ ಸುಂದರೇಶ್ವರ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಗುರುವಾರ ಮತ್ತು ಶುಕ್ತವಾರ ತಮಿಳುನಾಡಿನ ವಿವಿಧ ದೇಗುಲಕ್ಕೆ ಭೇಟಿ ನೀಡಲಿದ್ದಾರೆ. ಇದರಲ್ಲಿ ಶ್ರೀ ಪರಶುರಾಮ ಸ್ವಾಮಿ ದೇವಸ್ಥಾನ, ಅಗಸ್ತ್ಯ ಜೀವ ಸಮಾಧಿ, ಕುಂಭೇಶ್ವರ ದೇಗುಲ, ಸ್ವಾಮಿಮಲೈ ಮತ್ತು ತಿರುಥನಿ ಸುಬ್ರಹ್ಮಣ್ಯ ಸ್ವಾಮಿ ದೇಗುಲಕ್ಕೆ ಭೇಟಿ ನೀಡಲಿದ್ದಾರೆ.
ತೀವ್ರ ಜ್ವರದಿಂದ ಚೇತರಿಸಿಕೊಳ್ಳುತ್ತಿರುವ ಪವನ್ ಕಲ್ಯಾಣ್:ಪವನ್ ಕಲ್ಯಾಣ್ ಇತ್ತೀಚಿಗೆ ತೀವ್ರ ಜ್ವರ ಮತ್ತು ಸ್ಪಾಂಡಿಲೋಸಿಸ್ಗೆ ತುತ್ತಾಗಿದ್ದು, ಚೇತರಿಕೆ ಕಂಡ ಬಳಿಕ ದೇಗುಲ ದರ್ಶನಕ್ಕೆ ಮುಂದಾಗಿದ್ದಾರೆ.
ಆರಂಭದಲ್ಲಿ ಅವರು ಐದು ದಿನಗಳ ಕಾಲ ಕೇರಳ ಮತ್ತು ತಮಿಳುನಾಡು ಪ್ರವಾಸವನ್ನು ಹಮ್ಮಿಕೊಂಡಿದ್ದರು. ಆದರೆ, ಅವರ ಆರೋಗ್ಯ ಪರಿಸ್ಥಿತಿ ಹಿನ್ನಲೆ ಮೂರು ದಿನಗಳ ಪ್ರವಾಸಕ್ಕಷ್ಟೇ ಮುಂದಾಗಿದ್ದಾರೆ.