ಕರ್ನಾಟಕ

karnataka

ETV Bharat / entertainment

ವ್ಯಾಲಂಟೈನ್​ ಡೇಗೆ ವಿಶೇಷ ಸಂದೇಶ ಹಂಚಿಕೊಂಡ ನಟಿ ಸಮಂತಾ ರುತ್​ ಪ್ರಭು - ವ್ಯಾಲಂಟೈನ್​ ಡೇಗೆ ವಿಶೇಷ

ಜೀವನದಲ್ಲಿ ಪ್ರೀತಿಯ ಕುರಿತು ಆಳವಾದ ಭಾವನೆಗಳ ಕುರಿತು ನಟಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ.

on-valentines-day-samantha-ruth-prabhu-shares-message-on-growing-in-wisdom
on-valentines-day-samantha-ruth-prabhu-shares-message-on-growing-in-wisdom

By ETV Bharat Karnataka Team

Published : Feb 14, 2024, 2:09 PM IST

ಹೈದರಾಬಾದ್​:ಸಾಮಾಜಿಕ ಜಾಲತಾಣಗಳ ಮೂಲಕ ನಟಿ ಸಮಂತಾ ರುತ್​ ಪ್ರಭು ತಮ್ಮ ಅಭಿಮಾನಿಗಳನ್ನು ಪ್ರೇರಿಪಿಸುವ ಕೆಲಸ ಮಾಡುತ್ತಿರುತ್ತಾರೆ. ಸಾಮಾಜಿಕ ಜಾಲತಾಣಗಳ ಪೋಸ್ಟ್​ ಮೂಲಕ ಸದಾ ಸಕಾರಾತ್ಮಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ನಟಿ ಹಂಚಿಕೊಂಡ ಫೋಸ್ಟ್​

ಇದೀಗ ಪ್ರೇಮಿಗಳ ದಿನದಂದು ಕೂಡ ಅಭಿಮಾನಿಗಳನ್ನು ಉತ್ಸಾಹಗೊಳಿಸುವ ಸಂದೇಶದ ಜೊತೆಗೆ ತಮ್ಮ ವೈಯಕ್ತಿಕ ಬೆಳವಣಿಗೆ ಮತ್ತು ಸ್ವೀಕಾರ್ಹತೆ ಕುರಿತು ಪೋಸ್ಟ್​ ವೊಂದನ್ನು ನಟಿ ಹಂಚಿಕೊಂಡಿದ್ದಾರೆ. ಅರ್ಥಗರ್ಭಿತ ರೀಲ್​​ ಅನ್ನು ಹಂಚಿಕೊಂಡಿರುವ ನಟಿ, ವರ್ಷಗಳ ಕಾಲ ಬೇರೆಯವರ ಅಭಿಪ್ರಾಯಗಳ ಕುರಿತು ಚಿಂತಿತರಾಗುತ್ತೇವೆ. ಆದರೆ ನಾವು ಪ್ರಬುದ್ಧರಾಗಿದ್ದು, ನಿಜವಾದ ಕಾಳಜಿ ವಿಷಯವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಸೂಪ್ತವಾಗಿ ತಿಳಿಸಿದ್ದಾರೆ.

ಇನ್​​ಸ್ಟಾಗ್ರಾಂನಲ್ಲಿ ಈ ಸಂಬಂಧ ವಿಡಿಯೋ ಹಂಚಿಕೊಂಡಿರುವ ನಟಿ, ಯಾವುದೇ ಬಾಹ್ಯ ತೀರ್ಮಾನಗಳಿಲ್ಲದೇ, ನಿಮ್ಮ ವಿಶಿಷ್ಟ ಗುರುತಿನ ಮೂಲಕ ಪರಿಚಯಿಸಿಕೊಳ್ಳಿ ಎಂದಿದ್ದಾರೆ. ಅಷ್ಟೇ ಅಲ್ಲದೆ ಜೀವನದ ಪ್ರಯಾಣದ ರೂಪಾಂತರ ಕುರಿತು ಅದ್ಬುತ ಸಂದೇಶವನ್ನು ಈ ವಿಡಿಯೋ ಹೊಂದಿದೆ. ಅಲ್ಲದೇ ಪ್ರಬುದ್ಧತೆಯೆಂಬುದು ನೈಜತೆಯನ್ನು ಸ್ವೀಕರಿಸುವುದಾಗಿದ್ದು, ಇದಕ್ಕೆ ಬೇರೆಯವರ ಮೌಲ್ಯ ನಿರ್ಣಯದ ಅಗತ್ಯವಿಲ್ಲ. ಸ್ವಯಂ ಭರವಸೆಗೆ ಸ್ವಾತಂತ್ರ್ಯವೂ ಇದಕ್ಕೆ ಬೇಕು ಎಂದಿದ್ದಾರೆ.

ತಮ್ಮ ಅನಾರೋಗ್ಯದ ಹಿನ್ನೆಲೆ ಹಲವು ಸವಾಲುಗಳನ್ನು ದಾಟಿರುವ ನಟಿ, ಇದೀಗ ಮತ್ತೆ ನಟನೆಗೆ ಮರಳಿದ್ದಾರೆ. ಮೈಯೋಸಿಟಿಸ್​​ ಎಂಬ ಸಮಸ್ಯೆಯಿಂದ ಬಳಲುತ್ತಿದ್ದ ನಟಿ, ಚಿಕಿತ್ಸೆ ಹಿನ್ನೆಲೆಯಲ್ಲಿ ಕೆಲಕಾಲ ನಟನೆಯಿಂದ ವಿರಾಮ ಪಡೆದಿದ್ದರು. ಇದಾದ ಬಳಿಕ ಆತಂರಿಕವಾಗಿ ಬಹಳಷ್ಟು ಗಟ್ಟಿಯಾಗಲು ನಿರ್ಧರಿಸಿದ್ದು, ಈ ಸಂಬಂಧ ಸಕಾರಾತ್ಮಕತೆ ಮತ್ತು ಬದುಕಿನ ಹೊಸ ಮಜಲುಗಳ ಕುರಿತು ಅವರು ಆಗ್ಗಿಂದಾಗ್ಗೆ ಅಭಿಮಾನಿಗಳ ಜೊತೆಗೆ ಮಾತನಾಡುತ್ತಾರೆ. ಆರೋಗ್ಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇದೀಗ ಆರೋಗ್ಯ ಸಂಬಂಧಿತ ಪೋಡೋಕಾಸ್ಟ್​ ಅನ್ನು ಕೂಡ ಆರಂಭಿಸಲು ನಟಿ ನಿರ್ಧರಿಸಿದ್ದು, ಈ ಕುರಿತು ಶೀಘ್ರದಲ್ಲೇ ಪ್ರಕಟಿಸಲಿದ್ದಾರೆ.

ನಾಗಚೈತನ್ಯರಿಂದ 2021ರಲ್ಲಿ ವಿಚ್ಛೇದನ ಪಡೆದ ಬಳಿಕ ನಟಿ ತಮ್ಮ ವೃತ್ತಿ ಜೀವನದಲ್ಲಿ ಹೊಸ ಪ್ರಯೋಗಗಳನ್ನು ಅನ್ವೇಷಣೆ ಮಾಡುತ್ತಿದ್ದಾರೆ. ಫ್ಯಾಮಿಲಿ 2 ವೆಬ್​ ಸಿರೀಸ್​ ಮೂಲಕ ಓಟಿಟಿಗೆ ಪ್ರವೇಶಿಸಿದ ನಟಿ ಇದೀಗ ಸಿಟೆಡಾಲ್​ ಸೀರಿಸ್​ ನಟಿಸಲು ಸಜ್ಜಾಗಿದ್ದು, ಅದರ ತಯಾರಿಯಲ್ಲಿದ್ದಾರೆ.

ನಟನೆ ಹೊರತಾಗಿ ಪ್ರೊಡಕ್ಷನ್​ ಬ್ಯಾನರ್​ ಕೂಡ ನಿರ್ಮಿಸಿರುವ ನಟಿ, ಈ ಕುರಿತು ಕಳೆದ ಡಿಸೆಂಬರ್​ನಲ್ಲಿ ತಿಳಿಸಿದರು. ಟ್ರಾ-ಲಾ-ಲಾ ಮೂವಿಂಗ್​ ಪಿಕ್ಚರ್​ ಮೂಲಕ ನಿರ್ಮಾಣಕ್ಕೂ ಅವರು ಸಜ್ಜಾಗಿದ್ದಾರೆ.

ಇದನ್ನೂ ಓದಿ :ನಿಮ್ಮ ವ್ಯಾಲೆಂಟೈನ್ಸ್​ ಡೇ ಪ್ಲಾನ್​​ ಏನು?: ಕ್ಷಮೆ ಕೇಳಿದ ರಶ್ಮಿಕಾ - ಕಾರಣ?

ABOUT THE AUTHOR

...view details