ಕರ್ನಾಟಕ

karnataka

ETV Bharat / entertainment

ಅಭಿದಾಸ್ ನಟನೆಯ​​ 'ನಗುವಿನ ಹೂಗಳ ಮೇಲೆ' ಚಿತ್ರಕ್ಕೆ ನಿರ್ದೇಶಕ ಹರ್ಷ ಸಾಥ್​ - New Movies Trailer

ಯುವ ತಾರೆಗಳಾದ ಅಭಿದಾಸ್ ಹಾಗೂ ಶರಣ್ಯಾ ಶೆಟ್ಟಿ ನಟನೆಯ​ '​ನಗುವಿನ ಹೂಗಳ ಮೇಲೆ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಖ್ಯಾತ ನಿರ್ದೇಶಕ ಎ ಹರ್ಷ ಚಿತ್ರದ ಟ್ರೈಲರ್​​​ ಇತ್ತೀಚೆಗೆ ಬಿಡುಗಡೆಗೊಳಿಸುವ ಮೂಲಕ ಯುವ ಮನಸುಗಳಿಗೆ ಸಾಥ್ ನೀಡಿದ್ದಾರೆ.

ಅಭಿದಾಸ್ ನಟನೆಯ​​ 'ನಗುವಿನ ಹೂಗಳ ಮೇಲೆ' ಚಿತ್ರಕ್ಕೆ ನಿರ್ದೇಶಕ ಹರ್ಷ ಸಾಥ್​
ಅಭಿದಾಸ್ ನಟನೆಯ​​ 'ನಗುವಿನ ಹೂಗಳ ಮೇಲೆ' ಚಿತ್ರಕ್ಕೆ ನಿರ್ದೇಶಕ ಹರ್ಷ ಸಾಥ್​

By ETV Bharat Karnataka Team

Published : Jan 29, 2024, 8:52 PM IST

ಕಿರುತೆರೆ ಲೋಕದಿಂದ ಹಿರಿತೆರೆಗೆ ಕಾಲಿಟ್ಟಿರುವ ಅಭಿದಾಸ್ ಹಾಗೂ ಶರಣ್ಯಾ ಶೆಟ್ಟಿ ಮುಖ್ಯ ಭೂಮಿಕೆಯ 'ನಗುವಿನ ಹೂಗಳ ಮೇಲೆ' ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ. ಚಿತ್ರ ತೆರೆ ಕಾಣಲೂ ಸಹ ಸಜ್ಜಾಗಿದೆ. ಬಿಡುಗಡೆ ಹೊಸ್ತಿಲಿನಲ್ಲಿರುವ ಚಿತ್ರದ ಟ್ರೈಲರ್ ಅನ್ನು ಅವರ ಆತ್ಮೀಯ ಗೆಳೆಯ ನಿರ್ದೇಶಕ ಎ. ಹರ್ಷ ಇತ್ತೀಚೆಗೆ ಬಿಡುಗಡೆಗೊಳಿಸಿದ್ದಾರೆ.

ಎ ಹರ್ಷ ಅನಾವರಣಗೊಳಿಸಿರುವ ಈ ಟ್ರೈಲರ್ ಜೀ ಮ್ಯೂಸಿಕ್ ಮೂಲಕ ಪ್ರೇಕ್ಷಕರನ್ನು ತಲುಪಿದೆ. ಈಗಾಗಲೇ ಒಂದಷ್ಟು ವಿಭಿನ್ನ ಸಿನಿಮಾಗಳ ಮೂಲಕ ನಿರ್ದೇಶಕರಾಗಿ ನೆಲೆ ಕಂಡುಕೊಂಡಿರುವವರು ವೆಂಕಟ್ ಭಾರದ್ವಾಜ್, ಇದೀಗ 'ನಗುವಿನ ಹೂಗಳ ಮೇಲೆ' ಚಿತ್ರದ ಮೂಲಕ ಪರಿಶುದ್ಧವಾದ ಪ್ರೇಮ ಕಥಾನಕದೊಂದಿಗೆ ಮತ್ತೊಮ್ಮೆ ಪ್ರೇಕ್ಷಕರನ್ನು ತಲುಪಲು ಹೊರಟಿದ್ದಾರೆ. ಪ್ರೇಮ ಕಥನದ ಚಿತ್ರಗಳು ಎಂದರೇನೇ ಯಾವತ್ತಿಗೂ ಮುಸುಕಾಗದಂಥ ಮೋಹವೊಂದು ಪ್ರೇಕ್ಷಕರಲ್ಲಿರುತ್ತದೆ. ಅದನ್ನು ಮತ್ತಷ್ಟು ಮುದಗೊಳಿಸುವ ಲಕ್ಷಣಗಳಿರೋ ಈ ಸಿನಿಮಾ ಟ್ರೈಲರ್, ಒಂದಿಡೀ ಚಿತ್ರದ ಸಾರವನ್ನು ಪ್ರೇಕ್ಷಕರ ಮುಂದಿಟ್ಟಿದೆ. 2 ನಿಮಿಷ 06 ಸೆಕೆಂಡ್​ ಇರುವ ಚಿತ್ರದ ಟ್ರೈಲರ್ ಜಾಲತಾಣಿಗರ ಗಮನ ಸೆಳೆಯುತ್ತಿದೆ.

ಕಿರುತೆರೆಯಲ್ಲಿ ಒಂದಷ್ಟು ಹೆಸರು ಮಾಡಿರುವ ಅಭಿದಾಸ್, ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಶರಣ್ಯಾ ಶೆಟ್ಟಿ ನಾಯಕಿಯಾಗಿ ಜೊತೆಯಾಗಿದ್ದಾರೆ. ಇದರ‌ ಜೊತೆಗೆ ಬಲ ರಾಜವಾಡಿ, ಆಶಾ ಸುಜಯ್, ಗಿರೀಶ್ ನಂಜಪ್ಪ, ಹರ್ಷಿತ್ ಗೌಡ, ಅಭಿಷೇಕ್ ಐಯಂಗಾರ್, ಹರೀಶ್ ಚೌಹಾಣ್, ಹರ್ಷ ಭಟ್ ಮುಂತಾದವರ ತಾರಾಗಣವಿದೆ.

ಅಭಿಷೇಕ್ ಐಯಂಗಾರ್ ಸಂಭಾಷಣೆ, ಲವ್ ಫ್ರಾನ್ ಮೆಹತಾ ಸಂಗೀತ ನಿರ್ದೇಶನ, ಪ್ರಮೋದ್ ಭಾರತೀಯ ಛಾಯಾಗ್ರಹಣ, ಟೈಗರ್ ಶಿವು ಸಾಹಸ ನಿರ್ದೇಶನ ಮತ್ತು ಚಂದನ್ ಪಿ ಸಂಕಲನ ಈ ಚಿತ್ರಕ್ಕಿದೆ. ಎಲ್ಲ ವಯೋಮಾನದವರನ್ನೂ ಒಂದೇ ವೇದಿಕೆಯಲ್ಲಿ ಸೇರಿಸುವ ಗುಣ ಹೊಂದಿರುವ ಈ ಚಿತ್ರವನ್ನು ತೆಲುಗಿನ ಖ್ಯಾತ ನಿರ್ಮಾಪಕರಾದ ಕೆಕೆ ರಾಧಾ ಮೋಹನ್ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಹಾಡುಗಳ ಮೂಲಕ, ಒಟ್ಟಾರೆ ಕಥೆಯ ಒಂದಷ್ಟು ಸುಳಿವುಗಳ ಮೂಲಕ ಈ ಸಿನಿಮಾ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ವೆಂಕಟ್ ಭಾರದ್ವಾಜ್ ನಿರ್ದೇಶನದ 'ನಗುವಿನ ಹೂಗಳ ಮೇಲೆ' ಚಿತ್ರ ಬಹುತೇಕ ಚಿತ್ರೀಕರಣ ಮುಗಿಸಿದ್ದು,ಇದೇ ಫೆಬ್ರವರಿ ತಿಂಗಳ 9ರಂದು ತೆರೆ ಕಾಣಲಿದೆ.

ಶೀರ್ಷಿಕೆಯಿಂದಲೇ ಪ್ರೇಕ್ಷಕರ ಗಮನ ಸೆಳೆಯುತ್ತಿರುವ 'ನಗುವಿನ ಹೂಗಳ ಮೇಲೆ' ಚಿತ್ರತಂಡ ಇತ್ತೀಚೆಗಷ್ಟೇ ಚಿತ್ರದ ಎರಡನೇ ಹಾಡು ಅನಾವರಣ ಮಾಡಿತ್ತು. ಶರಣ್ಯ ಶೆಟ್ಟಿ- ಅಭಿದಾಸ್ ಕಾಂಬಿನೇಷನ್ ಸಿನಿ ರಸಿಕರಿಗೆ ತುಂಬಾ ಹಿಡಿಸಿದ್ದು ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ:ನಗುವಿನ ಹೂಗಳ ಮೇಲೆ ಚಿತ್ರದ ಪ್ರೇಮಗೀತೆ ಅನಾವರಣ: ಲವ್​ಸ್ಟೋರಿ ಹೇಳಲು ಅಭಿದಾಸ್, ಶರಣ್ಯ ಶೆಟ್ಟಿ ರೆಡಿ

ABOUT THE AUTHOR

...view details