ಮಾರ್ಟಿನ್ ಸಿನಿಮಾ ಕುರಿತು ಚಿತ್ರತಂಡದ ಮಾತು (ETV Bharat) ಕೆಜಿಎಫ್, ವಿಕ್ರಾಂತ್ ರೋಣ ಹಾಗೂ ಕಾಂತಾರ ಸಿನಿಮಾಗಳಿಂದ ಕನ್ನಡ ಚಿತ್ರರಂಗ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದು, ಸಿನಿ ಪ್ರಿಯರನ್ನು ತನ್ನತ್ತ ಸೆಳೆದಿದೆ. ಇದೀಗ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ, ಎ.ಪಿ ಅರ್ಜುನ್ ನಿರ್ದೇಶನದ 'ಮಾರ್ಟಿನ್' ಸಿನಿಮಾ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿದೆ. ಮಾರ್ಟಿನ್ ಚಿತ್ರತಂಡ ಆಗಸ್ಟ್ 5ರಂದು ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಪ್ರಮೋಷನ್ ಮಾಡುವುದರ ಜೊತೆಗೆ ಚಿತ್ರದ ಟ್ರೈಲರ್ ಅನ್ನು ಬಿಡಗಡೆ ಸಿದ್ಧತೆ ನಡೆಸಿದೆ.
ಈ ಬಗ್ಗೆ ನಿರ್ಮಾಪಕ ಉದಯ್ ಕೆ ಮೆಹ್ತಾ ಮಾತನಾಡಿ, ನಮ್ಮ ಸಿನಿಮಾ ಪ್ರಮೋಷನ್ ಫಸ್ಟ್ ಟೈಮ್ ಇಂಟರ್ ನ್ಯಾಷನಲ್ ಲೆವೆಲ್ನಲ್ಲಿ ಮುಂಬೈಯಲ್ಲಿ ಆ. 5ರಂದು ನಡೆಯಲಿದೆ. ದೇಶದ ಎಲ್ಲ ಭಾಗದ ಸಿನಿಮಾ ಪತ್ರಕರ್ತರು ಭಾಗವಹಿಸಲಿದ್ದು, ಆ ದಿನ ಮಾರ್ಟಿನ್ ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡುತ್ತೆವೆ ಎಂದರು.
ಮಾರ್ಟಿನ್ ಚಿತ್ರದ ವಿಎಫ್ಎಕ್ಸ್ ಕೆಲಸಕ್ಕಾಗಿ ಕಮಿಷನ್ ವಿಚಾರವಾಗಿ ಮಾತನಾಡಿ, ನಮ್ಮ ಸಿನಿಮಾ ತಡವಾಗುವುದಕ್ಕೆ ಇದು ಒಂದು ಕಾರಣ. ಮಾರ್ಟಿನ್ ಸಿನಿಮಾವನ್ನು ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಅಲ್ಲದೇ ಬೆಂಗಾಳಿ ಭಾಷೆಯಲ್ಲಿ ಬಿಡುಗಡೆ ಆಗುತ್ತದೆ ಎಂದು ತಿಳಿಸಿದರು. ಮಾರ್ಟಿನ್ ಚಿತ್ರದ ವಿಎಫ್ಎಕ್ಸ್ ವಿಚಾರದಲ್ಲಿ ಕಮಿಷನ್ ಆರೋಪ ಸಂಬಂಧ ನಿರ್ದೇಶಕ ಎ.ಪಿ ಅರ್ಜುನ್ ಮಾತನಾಡಿ, ಈ ಚಿತ್ರದಲ್ಲಿ ಯಾವುದೇ ಹಣ ಪಡೆದಿಲ್ಲ, ಅದು ಸುಳ್ಳು ಸುದ್ದಿ. ನಾನು, ನಿರ್ಮಾಪಕರು ಚೆನ್ನಾಗಿ ಇದ್ದೇವೆ ಎಂದು ಸ್ಪಷ್ಟನೆ ನೀಡಿದರು.
ನಟ ಧ್ರುವ ಸರ್ಜಾ ಮಾತನಾಡಿ, ಇದೇ ಆಗಸ್ಟ್ 5ರಂದು ಮುಂಬೈಯಲ್ಲಿ ಫಸ್ಟ್ ಟೈಮ್ ಕನ್ನಡ ಸಿನಿಮಾವೊಂದು ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಪ್ರಮೋಷನ್ ಮಾಡುತ್ತಿದೆ. ಮಾರ್ಟಿನ್ ಚಿತ್ರ ಯಾಕೇ ಮೂರು ವರ್ಷ ಆಯಿತ್ತು ಅನ್ನೋದಿಕ್ಕೆ ಉತ್ತರ ಸಿಗುತ್ತೆ. ಈ ಚಿತ್ರದಲ್ಲಿ ವಾಹ್ ಅನಿಸುವ ಆ್ಯಕ್ಷನ್ ಸಿಕ್ವೇಲ್ಗಳಿವೆ. ನನಗೆ ಮಾರ್ಟಿನ್ ಚಿತ್ರದ ಕ್ಲೈಮಾಕ್ಸ್ ಮಾಡುಬೇಕಾದರೆ ಚಾಲೆಂಜಿಂಗ್ ಆಗಿತ್ತು. ಮಾರ್ಟಿನ್ ಚಿತ್ರ ನನ್ನ ಫ್ಯಾನ್ಸ್ಗೆ ಸಖತ್ ಎಂಟರ್ಟೈನ್ ಮಾಡುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾರ್ಟಿನ್ ಔಟ್ ಅಂಡ್ ಔಟ್ ಸಾಹಸಮಯ ಚಿತ್ರ. ಇದರಲ್ಲಿ ದೇಶ ಪ್ರೇಮ, ಒಂದು ಮುದ್ದಾದ ಲವ್ ಸ್ಟೋರಿ ಜೊತೆಗೆ ಫ್ಯಾಮಿಲಿ ಸ್ಟೋರಿನೂ ಇರಲಿದೆ. ಧ್ರುವ ಸರ್ಜಾಗೆ ಜೋಡಿಯಾಗಿ ವೈಭವಿ ಶಾಂಡಿಲ್ಯ ನಟಿಸಿದ್ದು, ಅನ್ವೇಶಿ ಜೈನ್, ನಿಕಿತನ್ ಧೀರ್ ಸೇರಿದಂತೆ ದೊಡ್ಡ ತಾರಾ ಬಳಗವಿದೆ. ಬೆಂಗಳೂರು, ಕಾಶ್ಮೀರದ ಸುಂದರ ತಾಣಗಳಲ್ಲಿ ಮಾರ್ಟಿನ್ ಚಿತ್ರೀಕರಣ ಮಾಡಲಾಗಿದೆ. ಕಾಶ್ಮೀರದ ಐಸ್‌ವಾರ್ ಸಾಹಸ ದೃಶ್ಯಗಳ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆ್ಯಕ್ಷನ್ ಸೀನ್‌ಗಳು ಚಿತ್ರದಲ್ಲಿರಲಿದೆ. ಕ್ಲೈಮ್ಯಾಕ್ಸ್ ಸನ್ನಿವೇಶಗಳನ್ನು ಸಾಹಸ ನಿರ್ದೇಶಕರಾದ ರವಿವರ್ಮ ಹಾಗೂ ರಾಮ್ ಲಕ್ಷ್ಮಣ್ ಕಂಪೋಸ್ ಮಾಡಿದ್ದಾರೆ.
ಚಿತ್ರಕ್ಕೆ ತೆಲುಗಿನ ಹೆಸರಾಂತ ಮ್ಯೂಸಿಕ್ ಡೈರೆಕ್ಟರ್ ಮಣಿಶರ್ಮಾ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ರವಿ ಬಸ್ರೂರ್ ಈ ಚಿತ್ರತಂಡದ ಜೊತೆ ಕೈ ಜೋಡಿಸಿದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣ, ಮಹೇಶ್‌ರೆಡ್ಡಿ ಅವರ ಸಂಕಲನ ಈ ಚಿತ್ರಕ್ಕಿದೆ. ಉದಯ್ ಮೆಹ್ತಾ ಮಾರ್ಟಿನ್ ಚಿತ್ರಕ್ಕೆ ಹಣ ಹೂಡಿದ್ದಾರೆ. ಇದೇ ಮೊದಲ ಬಾರಿಗೆ ನಿರ್ಮಾಪಕ ಉದಯ್ ಮೆಹ್ತಾ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣ ಮಾಡಿದ್ದು, ಅಕ್ಟೋಬರ್ 11ಕ್ಕೆ ಮಾರ್ಟಿನ್ ಸಿನಿಮಾ ವಿಶ್ವಾದ್ಯಂತ ತೆರೆ ಕಾಣಲಿದೆ.
ಇದನ್ನೂ ಓದಿ:ಆ.1ಕ್ಕೆ 'ಪೌಡರ್' ಪಾರ್ಟಿ: ದಿಗಂತ್ ಚಿತ್ರತಂಡದಿಂದ ಆಹ್ವಾನ - Powder Party