ಕರ್ನಾಟಕ

karnataka

ETV Bharat / entertainment

ಕ್ರಿಶ್ಚಿಯನ್​ ಭಾವನೆಗಳಿಗೆ ಧಕ್ಕೆತಂದ ಆರೋಪ; ನಟಿ ಕರೀನಾ ಕಪೂರ್​​ಗೆ ನೋಟಿಸ್​ ಜಾರಿ ಮಾಡಿದ ಮಧ್ಯಪ್ರದೇಶ ಹೈಕೋರ್ಟ್​​ - Case againest Kareena Kapoor - CASE AGAINEST KAREENA KAPOOR

ನಟಿ ಕರೀನಾ ಕಪೂರ್​ ತಮ್ಮ ಗರ್ಭಾವಸ್ಥೆ ಕುರಿತು ಬರೆದ ಪುಸ್ತಕದಲ್ಲಿನ ಬೈಬಲ್​ ಪದ ಬಳಕೆಗೆ ಆಕ್ಷೇಪಿಸಿ ಜಬಲ್​ಪುರ್​ ನಿವಾಸಿ ಕ್ರಿಸ್ಟೋಫರ್​ ಅಂಥೋನಿ ಅರ್ಜಿ ಸಲ್ಲಿಸಿದ್ದಾರೆ.

Kareena Kapoor
ಕರೀನಾ ಕಪೂರ್​​ (ಫೋಟೋ: ಎಎನ್​ಐ)

By ETV Bharat Karnataka Team

Published : May 11, 2024, 12:31 PM IST

Updated : May 11, 2024, 12:39 PM IST

ಜಬಲ್​ಪುರ್​​: ಬಾಲಿವುಡ್​ ನಟಿ ಕರೀನಾ ಕಪೂರ್​ ವಿರುದ್ಧ ಮಧ್ಯ ಪ್ರದೇಶ ಹೈಕೋರ್ಟ್​​​ ನೋಟಿಸ್​ ಜಾರಿ ಮಾಡಿದೆ. ಕ್ರಿಶ್ಚಿಯನ್​ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಿನ್ನೆಲೆ ಈ ನೋಟಿಸ್​ ಜಾರಿಯಾಗಿದೆ.

ನಟಿ ಕರೀನಾ ಕಪೂರ್​ ತಮ್ಮ ಗರ್ಭಾವಸ್ಥೆ ಕುರಿತು ಬರೆದ ಪುಸ್ತಕದಲ್ಲಿನ ಬೈಬಲ್​ ಪದ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿ ಜಬಲ್​ಪುರ್​ ನಿವಾಸಿ ಕ್ರಿಸ್ಟೋಫರ್​ ಅಂಥೋನಿ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣ ಸಂಬಂಧ ನ್ಯಾಯಾಲಯ ಕರೀನಾ ಕಪೂರ್​​ ಪ್ರತಿಕ್ರಿಯೆ ಕೇಳಿದೆ.

ನ್ಯಾ. ಗುರುಪಲ್​ ಸಿಂಗ್​ ಅಹ್ಲುವಾಲಿಯಾ ಅವರಿದ್ದ ಪೀಠ ನಟಿಗೆ ನೋಟಿಸ್​ ಜಾರಿ ಮಾಡಿದೆ. ಕರೀನಾ ಕಪೂರ್​ ತಮ್ಮ ಗರ್ಭಾವಸ್ಥೆಯ ಅನುಭವ ಕುರಿತು 'ಕರೀನಾ ಕಪೂರ್​​ ಖಾನ್​ರ ಪ್ರೆಗ್ನನ್ಸಿ ಬೈಬಲ್​' ಎಂಬ ಪುಸ್ತಕ ಬರೆದಿದ್ದಾರೆ. ಇದರಲ್ಲಿನ ಬೈಬಲ್​ ಪದ ಬಳಕೆಯು ಕ್ರಿಶ್ಚಿಯನ್​ ಸಮುದಾಯದ ಭಾವನೆಗೆ ಧಕ್ಕೆ ತಂದಿದೆ ಎಂದು ಅರ್ಜಿದಾರ ಕ್ರಿಸ್ಟೋಫರ್​​ ಅಂಥೋನಿ ಉಲ್ಲೇಖಿಸಿದ್ದಾರೆ.

ಈ ಕುರಿತು ನಟಿಗೆ ನೋಟಿಸ್​ ಜಾರಿ ಮಾಡಿರುವ ನ್ಯಾಯಾಲಯ ಪ್ರಕ್ರಿಯೆ ಶುಲ್ಕವನ್ನು ಆರ್​ಎಡಿ ಮೋಡ್​ನಲ್ಲಿ ಪಾವತಿಸಲು ನೋಡಿಸ್​ ನೀಡಿದ್ದು, ಇದನ್ನು ಏಳು ದಿನಗಳಲ್ಲಿ ಪಾವತಿಸಬೇಕು ಎಂದು ಮೇ 9ರಂದು ನ್ಯಾಯಾಲಯ ಆದೇಶಿಸಿದೆ. ಇದರ ಜೊತೆಗೆ ನಟಿ ಕರೀನಾ ಕಪೂರ್​ ಮತ್ತು ಅಮೆಜಾನ್​ ಆನ್​ಲೈನ್​ ಶಾಪಿಂಗ್​, ಪುಸ್ತಕದ ಸಹ ಲೇಖಕರಾದ ಜಗ್ಗರ್ನಾಟ್​ ಬುಕ್ಸ್​ ಮೇಲೆ ಎಫ್​ಐಆರ್​ ದಾಖಲಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ಆರಂಭದಲ್ಲಿ ಆಂಥೋನಿ ಜಬಲ್ಪುರದ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ನಟಿ ಕ್ರಿಶ್ಚಿಯನ್​ ಸಮುದಾಯಕ್ಕೆ ಪವಿತ್ರ ಪುಸ್ತಕದ ಹೆಸರನ್ನು ತಮ್ಮ ಗರ್ಭಾವಸ್ಥೆಯ ಪ್ರಯಾಣದ ಕುರಿತ ಪುಸ್ತಕಕಕ್ಕೆ ಇಡುವ ಮೂಲಕ ಸಮುದಾಯದ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ದೂರು ಸಲ್ಲಿಸಿದ್ದರು.

ಆದರೆ, ಪೊಲೀಸ್​ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಲು ನಿರಾಕರಿಸಲಾಗಿತ್ತು. ಇದಾದ ಬಳಿಕ ವಕೀಲರ ಸಲಹೆ ಮೇರೆಗೆ ಅವರು ಮ್ಯಾಜಿಸ್ಟ್ರೇಟ್​ ಕೋರ್ಟ್​ನಲ್ಲಿ ಪ್ರಕರಣ ದಾಖಲಿಸಿದ್ದರು. ಅರ್ಜಿದಾರ ಈ ಪದವು ಹೇಗೆ ಕ್ರಿಶ್ಚಿಯನ್​ ಸಮುದಾಯದ ಭಾವನೆಗೆ ಧಕ್ಕೆ ಆಗುತ್ತದೆ ಎಂಬ ಕುರಿತು ಸಾಬೀತು ಪಡಿಸುವಲ್ಲಿ ವಿಫಲರಾಗಿದ್ದರು. ಈ ಹಿನ್ನೆಲೆ, ಮ್ಯಾಜಿಸ್ಟ್ರೇಟ್​ ಕೋರ್ಟ್​ನಲ್ಲಿ ಈ ಅರ್ಜಿಯನ್ನು ವಜಾ ಮಾಡಲಾಗಿತ್ತು. ಇದಾದ ಬಳಿಕ ಅಂಥೋನಿ ಹೆಚ್ಚುವರಿ ಸೆಷನ್ಸ್​​​ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಇಲ್ಲೂ ಕೂಡ ಪರಿಹಾರ ಕಾಣದ ಹಿನ್ನೆಲೆ ಅವರು ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಅಂಧನ ಪಾತ್ರದಲ್ಲಿ ಸೈಫ್ ಅಲಿ ಖಾನ್: ಬಾಲಿವುಡ್​ ನಟನಿಗೆ ಬಿಗ್ ಬ್ರೇಕ್ ಕೊಡುತ್ತಾ ಸಿನಿಮಾ?

Last Updated : May 11, 2024, 12:39 PM IST

ABOUT THE AUTHOR

...view details