ಕರ್ನಾಟಕ

karnataka

ETV Bharat / entertainment

ಗೆಳೆಯ ಕಬೀರ್ ಜೊತೆಗಿನ ವಿಡಿಯೋ ವೈರಲ್​​ ಬೆನ್ನಲ್ಲೇ ಸ್ವದೇಶಕ್ಕೆ ಮರಳಿದ ಕೃತಿ ಸನೋನ್​​- ವಿಡಿಯೋ - Kriti Sanon - KRITI SANON

ಗ್ರೀಸ್ ಪ್ರವಾಸ ಮುಗಿಸಿ ಬಾಲಿವುಡ್ ನಟಿ ಕೃತಿ ಸನೋನ್​​​ ದೇಶಕ್ಕೆ ವಾಪಸಾಗಿದ್ದಾರೆ.

Kriti Sanon
ನಟಿ ಕೃತಿ ಸನೋನ್​​​ (ANI)

By ETV Bharat Entertainment Team

Published : Aug 6, 2024, 8:17 PM IST

ನಟಿ ಕೃತಿ ಸನೋನ್​​​ (Screen grab from ANI video)

ಹೈದರಾಬಾದ್: ಬಾಲಿವುಡ್ ಬೆಡಗಿ ಕೃತಿ ಸನೋನ್​​​ ಗ್ರೀಸ್ ಪ್ರವಾಸದ ಸಲುವಾಗಿ ಗಮನ ಸೆಳೆದಿದ್ದಾರೆ. ಜುಲೈ 27ರಂದು ಗ್ರೀಸ್‌ನಲ್ಲಿ ತಮ್ಮ ಪ್ರೀತಿಪಾತ್ರರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡು, ಗುಣಮಟ್ಟದ ಸಮಯ ಕಳೆದಿದ್ದಾರೆ.

ತಮ್ಮ ವದಂತಿಯ ಗೆಳೆಯ ಕಬೀರ್ ಬಹಿಯಾ, ಸಹೋದರಿ ನೂಪುರ್ ಸನೋನ್ ಮತ್ತು ಇತರೆ ಕೆಲವು ಆಪ್ತ ಸ್ನೇಹಿತರೊಂದಿಗೆ ನಟಿ ಕಾಣಿಸಿಕೊಂಡಿದ್ದರು. ಕಬೀರ್ ಜೊತೆ ಇವರ ಸ್ಮೋಕಿಂಗ್​​​​ ವಿಡಿಯೋ ವೈರಲ್​​ ಆಗಿತ್ತು.

ರಾಷ್ಟ್ರಪ್ರಶಸ್ತಿ ವಿಜೇತ ನಟಿ ಗ್ರೀಕ್ ವೆಕೇಶನ್​ ಮುಗಿಸಿ, ಇದೀಗ ಮುಂಬೈಗೆ ಮರಳಿದ್ದಾರೆ. ಇಂದು ಬೆಳಿಗ್ಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಬ್ಲ್ಯಾಕ್​ ಶಾರ್ಟ್​ ಡ್ರೆಸ್​ನಲ್ಲಿ ಬಹಳ ಸುಂದರವಾಗಿ ಕಂಗೊಳಿಸಿದ ನಟಿ ನಗೆ ಬೀರಿದರು. ಪಾಪರಾಜಿಗಳು ವಿಡಿಯೋ ಶೇರ್ ಮಾಡಿದ್ದಾರೆ. ಇದೇ ವೇಳೆ ಮಾಧ್ಯಮಗಳೊಂದಿಗೆ ನಗುತ್ತಾ ಮಾತನಾಡಿದರು. ಅಭಿಮಾನಿಗಳೊಂದಿಗೆ ಸೆಲ್ಫಿ ಕೂಡಾ ಕ್ಲಿಕ್ಕಿಸಿಕೊಂಡರು. ಈ ಕುರಿತು ವಿಡಿಯೋಗಳು ವೈರಲ್​ ಆಗಿವೆ.

ಇದನ್ನೂ ಓದಿ:'ಟಾಕ್ಸಿಕ್' ನಿರ್ಮಾಪಕರ ಜೊತೆ ಕರಾವಳಿಯಲ್ಲಿ ನಟ ಯಶ್‌ ಟೆಂಪಲ್ ರನ್ - Yash Temple Run

ABOUT THE AUTHOR

...view details