ಕರ್ನಾಟಕ

karnataka

ETV Bharat / entertainment

ಪುಲ್ಕಿತ್​​​ ಕೈ ಹಿಡಿಯಲಿರುವ 'ಗೂಗ್ಲಿ' ಬೆಡಗಿ: ಮದುವೆ ಸ್ಥಳಕ್ಕೆ ತೆರಳಿದ ಕೃತಿ ಖರಬಂದ - ವಿಡಿಯೋ

ನಾಳೆ ಹಸೆಮಣೆ ಏರಲಿರುವ ಪುಲ್ಕಿತ್ ಸಾಮ್ರಾಟ್ ಸೋಮವಾರ ಮುಂಬೈ ಏರ್​ಪೋರ್ಟ್​​​ನಲ್ಲಿ ಕಾಣಿಸಿಕೊಂಡಿದ್ದರು. ಇಂದು ವಧು ಕೃತಿ ಖರಬಂದ ಮದುವೆ ಸ್ಥಳಕ್ಕೆ ತೆರಳಿದ್ದು, ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.

By ETV Bharat Karnataka Team

Published : Mar 12, 2024, 3:51 PM IST

Updated : Mar 12, 2024, 4:28 PM IST

Kriti Kharbanda
ಕೃತಿ ಖರಬಂದ

ಸಿನಿಮಾ ಎಂಬ ಬಣ್ಣದ ಲೋಕದ ಪ್ರೇಮಪಕ್ಷಿಗಳಾದ ಕೃತಿ ಖರಬಂದ ಹಾಗೂ ಪುಲ್ಕಿತ್ ಸಾಮ್ರಾಟ್​​​ ಮದುವೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಈ ಜೋಡಿ ಮನೇಸರ್​ನ ಐಟಿಸಿ ಗ್ರ್ಯಾಂಡ್ ಭಾರತ್‌ನಲ್ಲಿ ಮದುವೆ ಆಗಲಿದ್ದು, ಇಂದು ನಟಿ ಕೃತಿ ಖರಬಂದ ಮುಂಬೈನಿಂದ ಮದುವೆ ಸ್ಥಳಕ್ಕೆ ತೆರಳಿದ್ದಾರೆ.

ಇಂದು ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ವಧು ಕಾಣಿಸಿಕೊಂಡಿದ್ದಾರೆ. ಮುಂಬೈ ಮೂಲದ ಪಾಪರಾಜಿಗಳು ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿರೋ ವಿಡಿಯೋಗಳಲ್ಲಿ, ನಟಿ ವಿಮಾನ ನಿಲ್ದಾಣದೊಳಗೆ ಹೋಗುತ್ತಿರುವುದು ಕಂಡು ಬಂದಿದೆ. ಬ್ಲ್ಯೂ ಸ್ಟ್ರಾಪಿ ಡ್ರೆಸ್‌ನಲ್ಲಿ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಮಿನಿಮಮ್ ಮೇಕ್​ ಅಪ್​​ ಹಾಗೂ ಹ್ಯಾಂಡ್​ ಬ್ಯಾಗ್​​​ ಹಿಡಿದು ತಮ್ಮ ಏರ್​ಪೋರ್ಟ್​​ ಲುಕ್​ ಅನ್ನು ಪೂರ್ಣಗೊಳಿಸಿಕೊಂಡಿದ್ದು, ಪಾಪರಾಜಿಗಳ ಕ್ಯಾಮರಾಗಳಿಗೆ ಪೋಸ್​ ನೀಡುವಾಗ ನಾಚಿ ನೀರಾಗಿದ್ದಾರೆ.

ಕೃತಿ ಖರಬಂದ ಮತ್ತು ಪುಲ್ಕಿತ್ ಸಾಮ್ರಾಟ್ ಕಳೆದ ಒಂದೆರಡು ವರ್ಷಗಳಿಂದ ಡೇಟಿಂಗ್​​​ನಲ್ಲಿದ್ದಾರೆ. ತಾವು ಜೊತೆಯಾಗಿ ನಟಿಸಿದ ಸಿನಿಮಾದ ಪ್ರಮೋಶನ್​​ ಈವೆಂಟ್​ ಒಂದರಲ್ಲಿ ತಮ್ಮ ಪ್ರೀತಿಯನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದರು. ಇದೀಗ ಹರಿಯಾಣದ ಮನೇಸರ್‌ನಲ್ಲಿರುವ ಐಟಿಸಿ ಗ್ರ್ಯಾಂಡ್ ಭಾರತ್‌ನಲ್ಲಿ ಅದ್ಧೂರಿ ಮದುವೆಗೆ ಸಿದ್ಧತೆ ನಡೆದಿದೆ. ಪುಲ್ಕಿತ್ ಮತ್ತು ಕೃತಿ ಇಬ್ಬರೂ ದೆಹಲಿ ಮೂಲದವರು.

ಪ್ರೇಮಿಗಳ ದಿನದಂದು ಇಬ್ಬರೂ ತಮ್ಮ ರೊಮ್ಯಾಂಟಿಕ್​​ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನಂತರ, ವಿವಾಹದ ಊಹಾಪೋಹಗಳೆದ್ದವು. ಅಂದು ಈ ಪ್ರೇಮಪಕ್ಷಿಗಳು ಕೊಟ್ಟ ಫೋಟೋ ಕ್ಯಾಪ್ಷನ್​​, ಮಾರ್ಚ್‌ನಲ್ಲಿ ಮದುವೆಯಾಗುವ ಸುಳಿವು ನೀಡಿತ್ತು. ಇದೀಗ ಮದುವೆಗೆ ತಯಾರಿ ನಡೆದಿದ್ದು, ನಾಳೆ ಮದುವೆ ಎಂದು ಹೇಳಲಾಗುತ್ತಿದೆ. ಒಂದೆರಡು ದಿನ ಮದುವೆ ಮುನ್ನದ ಶಾಸ್ತ್ರಗಳು ಜರುಗಿ, ಮಾರ್ಚ್ 15ರಂದು ಮದುವೆ ನಡೆಯುವ ಸಾಧ್ಯತೆಗಳೂ ಇವೆ. ಸದ್ಯ ವಧು-ವರರು ದೆಹಲಿ ತಲುಪಿದ್ದಾರೆ.

ಇದನ್ನೂ ಓದಿ:'ಗೂಗ್ಲಿ' ನಟಿ ಕೃತಿ ಖರಬಂದ ಮದುವೆ: ವಿದ್ಯುತ್ ದೀಪಾಲಂಕಾರದಿಂದ ಶೃಂಗಾರಗೊಂಡ ವರನ ಮನೆ-ವಿಡಿಯೋ

ಜೋಡಿಯ ಸಿನಿಮಾ ವಿಚಾರ ಗಮನಿಸೋದಾದರೆ, ಪುಲ್ಕಿತ್ ಇತ್ತೀಚೆಗೆ ಫುಕ್ರೆ 3ರಲ್ಲಿ ಕಾಣಿಸಿಕೊಂಡರು. ಅಲ್ಲದೇ, ಜೋಯಾ ಅಖ್ತರ್ ಅವರ ವೆಬ್ ಶೋ ಮೇಡ್ ಇನ್ ಹೆವನ್ ಸೀಸನ್ 2ನಲ್ಲಿಯೂ ನಟಿಸಿದ್ದರು. ಮತ್ತೊಂದೆಡೆ ಕೃತಿ ಖರಬಂದ ಅವರ ರಿಸ್ಕಿ ರೋಮಿಯೋ ಬಿಡುಗಡೆಗೆ ಸಜ್ಜಾಗುತ್ತಿದೆ. ಕೃತಿ ಹಾಗೂ ಪುಲ್ಕಿತ್ ವೀರೇ ಕಿ ವೆಡ್ಡಿಂಗ್, ತೈಶ್ ಮತ್ತು ಪಾಗಲ್ಪಂತಿಯಂತಹ ಹಲವು ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಪುಲ್ಕಿತ್ ಈ ಹಿಂದೆ ಶ್ವೇತಾ ರೋಹಿರಾ ಅವರನ್ನು ಮದುವೆಯಾಗಿದ್ದರು. ಅವರಿಗಿದು ಎರಡನೇ ಮದುವೆ.

ಇದನ್ನೂ ಓದಿ:ಗಜಿನಿ ಖ್ಯಾತಿಯ ಮುರುಗಾದಾಸ್ ನಿರ್ದೇಶನದಲ್ಲಿ ಸಲ್ಮಾನ್​ ಖಾನ್​​ ಸಿನಿಮಾ

Last Updated : Mar 12, 2024, 4:28 PM IST

ABOUT THE AUTHOR

...view details