ಹೈದರಾಬಾದ್ :ಕಿಚ್ಚ ಸುದೀಪ್ ಹೈದರಾಬಾದ್ ಹೈದರಾಬಾದ್ನ ಮೆಟ್ರೋದಲ್ಲಿ ಪ್ರಯಾಣ ಮಾಡಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL)ಗಾಗಿ ಹೈದರಾಬಾದ್ಗೆ ತೆರಳಿದ ಅವರು ತಮ್ಮ ತಂಡದ ಸದಸ್ಯರೊಂದಿಗೆ ಉಪ್ಪಾಳ್ ಸ್ಟೇಡಿಯಂಗೆ ಮೆಟ್ರೋದಲ್ಲಿ ಬುಧವಾರ ಸಂಜೆ ಪ್ರಯಾಣಿಸಿದರು. ಈ ವೇಳೆ ತಮ್ಮ ನೆಚ್ಚಿನ ನಟನನ್ನು ಕಂಡ ಅನೇಕ ಅಭಿಮಾನಿಗಳು ಮತ್ತು ಮೆಟ್ರೋ ಸಿಬ್ಬಂದಿಗಳು ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾದರು. ಸಾಮಾನ್ಯ ಜನರಂತೆ ಮೆಟ್ರೋದಲ್ಲಿ ಪ್ರಯಾಣಿಸಿದ ಸುದೀಪ್ ಅವರ ನಡೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.
11ನೇ ಆವೃತ್ತಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಡೆಯುತ್ತಿದ್ದು, ಕರ್ನಾಟಕ ಬುಲ್ಡೋಜರ್ ತಂಡದ ನಾಯಕನಾಗಿ ಸುದೀಪ್ ಇದ್ದಾರೆ. ನಾಳೆ (ಫೆಬ್ರವರಿ 14) ಕರ್ನಾಟಕ ತಂಡ ಚೆನ್ನೈನ ರೈನೊಸ್ ತಂಡವನ್ನು ಎದುರಿಸಲಿದೆ. ಜೊತೆಗೆ ಫೆಬ್ರವರ 15ರಂದು ತೆಲುಗು ವಾರಿಯರ್ಸ್ ಮತ್ತು ಚೆನ್ನೈ ರೈನೋಸ್ ತಂಡ ಕೂಡ ಸೆಣಸಲಿದ್ದು, ಇದಕ್ಕಾಗಿ ಸ್ಟೇಡಿಯಂ ಮುಂದೆ ಬಿಗಿ ಪೊಲೀಸ್ ಭದ್ರತೆ ಕೂಡ ಮಾಡಲಾಗಿದೆ.
ಸಿಸಿಎಲ್ಗೆ ಬಿಗಿ ಭದ್ರತೆ: ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಮ್ಯಾಚ್ಗೆ ಜನರು ತಮ್ಮ ನೆಚ್ಚಿನ ನಟರನ್ನು ಕಣ್ತುಂಬಿಕೊಳ್ಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಉಪ್ಪಾಳ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಮ್ಯಾಚ್ಗಳು ನಡೆಯಲಿದೆ. ಈ ನಿಟ್ಟಿನಲ್ಲಿ ಬಿಗಿ ಭದ್ರತೆ ನಡೆಸಲಾಗಿದೆ. ಈ ಕುರಿತು ಮಾತನಾಡಿರುವ ಪೊಲೀಸ್ ಆಯುಕ್ತರು ಸಿಸಿಎಲ್ ಮ್ಯಾಚ್ಗೆ ಯಾವುದೇ ಅಡ್ಡಿಯಾಗದಂತೆ ಕ್ರಮ ನಡೆಸಲು ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ಮ್ಯಾಚ್ನಲ್ಲಿ ಪ್ರತಿಯೊಬ್ಬರ ಚಲನವನದ ಮೇಲೂ ಕಣ್ಣಿಡಲಾಗಿದೆ. ಹಾಗೇ ವಾಹನ ಪಾರ್ಕಿಂಗ್ಗೆ ವ್ಯವಸ್ಥೆ ನಡೆಸಲಾಗಿದೆ ಎಂದರು.