ಕರ್ನಾಟಕ

karnataka

ETV Bharat / entertainment

ಯಶ್ 'ಟಾಕ್ಸಿಕ್​' ಚಿತ್ರದಲ್ಲಿ ಕರೀನಾ ನಾಯಕಿಯಲ್ಲ; ವಿಶೇಷ ಪಾತ್ರ? ಬೆಂಗಳೂರಿನಲ್ಲೇ ಶೂಟಿಂಗ್​ - Kareena In Toxic - KAREENA IN TOXIC

'ಟಾಕ್ಸಿಕ್​' ಚಿತ್ರದಲ್ಲಿ ಕರೀನಾ ಕಪೂರ್​ ಖಾನ್​​ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬೆಂಗಳೂರು ಹಾಗೂ ಮುಂಬೈನಲ್ಲಿ ಶೂಟಿಂಗ್​ ನಡೆಯಲಿದೆ ಎಂಬ ಮಾಹಿತಿ ಇದೆ.

Kareena in Toxic
ಯಶ್ 'ಟಾಕ್ಸಿಕ್​' ಚಿತ್ರದಲ್ಲಿ ಕರೀನಾ

By ETV Bharat Karnataka Team

Published : Apr 2, 2024, 7:05 PM IST

Updated : Apr 2, 2024, 8:01 PM IST

ಕೆಲವು ನಟರ ಸಿನಿಮಾಗಳೇ ಹಂಗೆ. ಚಿತ್ರ ಸೆಟ್ಟೇರಿದ ದಿನದಿಂದ ಹಿಡಿದು ತೆರೆ ಕಾಣುವವರೆಗೂ ಸಿನಿಪ್ರೇಮಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿರುತ್ತವೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ವಿಚಾರದಲ್ಲಿಯೂ ಇಂಥದ್ದೇ ಒಂದು ಹೈಪ್ ಕ್ರಿಯೇಟ್ ಆಗಿದೆ. ಈ ಚಿತ್ರ ಆರಂಭವಾದಾಗಿನಿಂದ ಹಲವು ಅಂತೆಕಂತೆಗಳು ಆನ್​​​ಲೈನ್​ನಲ್ಲಿ ಹರಿದಾಡುತ್ತಿವೆ. ಚಿತ್ರದ ನಾಯಕಿ ಯಾರೆಂಬುದು ಯಶ್​ ಅವರ ಗಾಲ್ಫ್ ರಸ್ತೆಯಲ್ಲಿರುವ ಪ್ರೆಸ್ಟೀಜ್ ಅಪಾರ್ಟ್​ಮೆಂಟ್​ನಿಂದ ಹಿಡಿದು ಬಾಲಿವುಡ್​ವರೆಗೂ ಚರ್ಚೆಯಾಗುತ್ತಿದೆ. ಕರೀನಾ ಕಪೂರ್ ಖಾನ್​, ಶೃತಿ ಹಾಸನ್ ಹಾಗೂ ಸಾಯಿ ಪಲ್ಲವಿ ಹೆಸರುಗಳು ಜೋರಾಗಿ ಕೇಳಿ ಬರುತ್ತಿವೆ.

ಕೆಲವು ದಿನಗಳ ಹಿಂದೆ ಅಭಿಮಾನಿಗಳ ಜತೆ ಆನ್​ಲೈನ್​ನಲ್ಲಿ ಮಾತನಾಡಿದ್ದ ಕರೀನಾ ಕಪೂರ್ ಖಾನ್, ಸೌತ್ ಸಿನಿಮಾ ಮಾಡುವ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದರು. ನಿಮ್ಮ ಕ್ರ್ಯೂ ಚಿತ್ರದ ಪ್ರಚಾರಕ್ಕೆ ಹೈದರಾಬಾದ್​ಗೆ ಬರುವುದೇ ಎಂಬ ಅಭಿಮಾನಿ ಪ್ರಶ್ನೆಗೆ ಉತ್ತರಿಸಿರುವ ನಟಿ, ನಾನು ದೊಡ್ಡ ಸೌತ್ ಸಿನಿಮಾ ಮಾಡುತ್ತಿದ್ದೇನೆ. ಇದು ಪ್ಯಾನ್ ಇಂಡಿಯಾ ಕಾಲ. ಹೀಗಾಗಿ ಈ ಚಿತ್ರದ ಚಿತ್ರೀಕರಣ ಎಲ್ಲಿ ನಡೆಯುತ್ತದೆ ಎನ್ನುವ ವಿಚಾರ ನನಗಿನ್ನೂ ಗೊತ್ತಿಲ್ಲ. ಆದರೆ ನಾನು ಈ ಸಿನಿಮಾ ಬಗ್ಗೆ ಸಾಕಷ್ಟು ಉತ್ಸುಕಳಾಗಿದ್ದೇನೆಂದು ತಿಳಿಸಿದ್ದರು.

ಈ ಹಿಂದೆ ಕಾಫಿ ವಿತ್ ಕರಣ್ ಶೋನಲ್ಲಿ ಕರೀನಾ ಭಾಗಿಯಾಗಿದ್ದರು. ಪ್ರಭಾಸ್, ರಾಮ್‌ ಚರಣ್, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ ಹಾಗೂ ಯಶ್ ಈ ಸೌತ್ ಸ್ಟಾರ್​ಗಳಲ್ಲಿ ಯಾರೊಟ್ಟಿಗೆ ಸ್ಕ್ರೀನ್​ ಶೇರ್ ಮಾಡಲು ಇಷ್ಟಪಡುತ್ತಿರೆಂದು ನಿರೂಪಕ ಕರಣ್​​ ಜೋಹರ್ ಪ್ರಶ್ನಿಸಿದ್ದರು. ಅದಕ್ಕೆ ಯಶ್ ಹೆಸರು ತೆಗೆದುಕೊಂಡಿದ್ದರು. ನೀವು ಹೇಳಿದ ಎಲ್ಲಾ ಸ್ಟಾರ್​ಗಳೂ ಸೂಪರ್​. ಆದ್ರೆ ನಾನು ಕೆ.ಜಿ.ಎಫ್ ಗರ್ಲ್. ಹೀಗಾಗಿ ಯಶ್ ಜೊತೆ ನಟಿಸೋಕೆ ಇಷ್ಟ ಎಂದಿದ್ದರು. ತಾವು ಈ ಚಿತ್ರವನ್ನು ನೋಡಿರುವುದಾಗಿಯೂ ತಿಳಿಸಿದ್ದರು. ಅಂದಿನಿಂದ ಯಶ್ ಜತೆ ನಟಿಸಲಿದ್ದಾರಾ ಎಂಬ ಮಾತುಗಳು ಕೇಳಿಬಂದವು.

ಇದನ್ನೂ ಓದಿ:ಯಶ್​​ ಜೊತೆ ಸ್ಕ್ರೀನ್​ ಶೇರ್: 'ಟಾಕ್ಸಿಕ್​'ನಲ್ಲಿ ಕಾಣಿಸಿಕೊಳ್ಳುವ ಸುಳಿವು ಬಿಟ್ಟುಕೊಟ್ಟ ಕರೀನಾ

ಈ ಬಗ್ಗೆ ಟಾಕ್ಸಿಕ್ ಸಿನಿಮಾ ಹಿಂದಿರುವ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಕೆವಿಎನ್‌ನ ಆಪ್ತರೊಬ್ಬರ ಮಾಹಿತಿ ಪ್ರಕಾರ, ನಾವು ಶೃತಿ ಹಾಸನ್ ಆಗಲಿ ಅಥವಾ ಸಾಯಿ ಪಲ್ಲವಿ ಆಗಲಿ ಯಾರನ್ನೂ ಆಪ್ರೋಚ್ ಮಾಡಿಲ್ಲ. ಆದರೂ ಟಿವಿ, ಪತ್ರಿಕೆಗಳಲ್ಲಿ ಸುದ್ದಿಯಾಗಿದೆ. ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್​ ಜತೆ ಮಾತುಕತೆ ಆಗಿದೆ. ಅದೂ ಕೂಡ ನಾಯಕಿ ಪಾತ್ರ ಅಲ್ಲ. ಈ ಚಿತ್ರದಲ್ಲಿ ಯಶ್ ಜತೆಗೆ ಕರೀನಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಂದು ಕೆವಿನ್ ಸಂಸ್ಥೆಯ ಆಪ್ತರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ:ಏ.8ಕ್ಕೆ 'ಪುಷ್ಪ 2' ಟೀಸರ್: ಕುತೂಹಲ ಕೆರಳಿಸಿದ ಗೆಜ್ಜೆ ತೊಟ್ಟ ಅಲ್ಲು ಅರ್ಜುನ್ ಪೋಸ್ಟರ್ - Pushpa 2 Teaser

ರಾಕಿಂಗ್ ಸ್ಟಾರ್ ಯಶ್ ಜೋಡಿಯಾಗಿ ಯಾರು ನಟಿಸಲಿದ್ದಾರೆ ಎಂಬ ಕುತೂಹಲ ಹೆಚ್ಚಿದೆ. ಸದ್ಯದಲ್ಲೇ ಈ ವಿಚಾರವನ್ನು ನಿರ್ಮಾಣ ಸಂಸ್ಥೆ ತಿಳಿಸಲಿದೆ ಎಂದು ತಿಳಿಸಿದ್ದಾರೆ. ಇನ್ನೂ ಶ್ರೀಲಂಕಾ ಹಾಗೂ ಲಂಡನ್​ನಲ್ಲಿ ಚಿತ್ರೀಕರಣ ನಡೆಸಲಾಗುತ್ತದೆ ಎಂದು ಹೇಳಲಾಗಿತ್ತು. ಆದ್ರೀಗ ಬೆಂಗಳೂರು ಹಾಗು ಮುಂಬೈನಲ್ಲಿ ಅದ್ಧೂರಿ ಸೆಟ್ ಹಾಕಿ ಚಿತ್ರಕ್ಕೆ ನಿರ್ದೇಶಕಿ ಗೀತು ಮೋಹನ್‌ದಾಸ್ ಹಾಗು ಕೆವಿಎನ್ ಪ್ರೊಡಕ್ಷನ್ಸ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಎಲ್ಲಾ ವಿಚಾರಗಳಿಗೂ ಚಿತ್ರತಂಡವೇ ಅಧಿಕೃತ ಮಾಹಿತಿ ಕೊಡಬೇಕಿದೆ.

Last Updated : Apr 2, 2024, 8:01 PM IST

ABOUT THE AUTHOR

...view details