ಹೈದರಾಬಾದ್:'ಕಲ್ಕಿ 2898 ಎಡಿ' ಕೇವಲ 11 ದಿನಗಳಲ್ಲಿ ಭಾರತದಲ್ಲಿ 500 ಕೋಟಿ ರೂಪಾಯಿಗಳ ಗಡಿ ದಾಟುವ ಮೂಲಕ ಗಲ್ಲಾ ಪೆಟ್ಟಿಗೆಯಲ್ಲಿ ಹೊಸ ದಾಖಲೆ ಬರೆಯಲು ಹೊರಟಿದೆ.
ನಾಗ್ ಅಶ್ವಿನ್ ಅವರ ನಿರ್ದೇಶನದ ಕಲ್ಕಿ ಸಿನಿಮಾವು ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಜೊತೆ, ಬಹುಬೇಡಿಕೆ ತಾರೆಯರಾದ ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಮತ್ತು ದಿಶಾ ಪಟಾನಿ, ವಿಜಯ್ ದೇವರಕೊಂಡ, ದುಲ್ಕರ್ ಸಲ್ಮಾನ್, ರಾಮ್ ಗೋಪಾಲ್ ವರ್ಮಾ, ಮಾಳವಿಕಾ ನಾಯರ್, ಮೃಣಾಲ್ ಠಾಕೂರ್ ಮತ್ತು ಅನ್ನಾ ಬೆನ್ ಅವರನ್ನು ಒಳಗೊಂಡಿದೆ.
ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, ಭಾರತದಲ್ಲಿ ಕಲ್ಕಿ ಬಾಕ್ಸ್ ಆಫೀಸ್ ಕಲೆಕ್ಷನ್ 11ನೇ ದಿನಕ್ಕೆ 506.87 ಕೋಟಿ ರೂ. ಆಗಿದ್ದು, ಅಭಿಮಾನಿಗಳು 1000 ಕೋಟಿ ರೂ. ಕಲೆಕ್ಷನ್ ನಿರೀಕ್ಷೆ ಇಟ್ಟಿದ್ದು, ಜಾಗತಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಅಪ್ಡೇಟ್ಗಾಗಿ ಕಾಯುತ್ತಿದ್ದಾರೆ. ಜೂನ್ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದ ಕಲ್ಕಿ ತನ್ನ ಭರ್ಜರಿ ಪ್ರದರ್ಶನವನ್ನು ಮುಂದುವರೆಸಿದೆ. ವರದಿಗಳ ಪ್ರಕಾರ, 'ಕಲ್ಕಿ 2898 AD' ತನ್ನ 11 ನೇ ದಿನದಂದು ಎಲ್ಲ ಭಾಷೆಗಳಲ್ಲಿ ಭಾರತದಾದ್ಯಂತ ಸರಿ ಸುಮಾರು 41.17 ಕೋಟಿಗಳಿಸಿದೆ. ದಿನ 1ರಿಂದ ಇಂದಿನವರೆಗಿನ ಒಟ್ಟು ದೇಶೀಯ ಆದಾಯ 506.87 ಕೋಟಿ ರೂ. ಆಗಿದೆ.