ಕರ್ನಾಟಕ

karnataka

ETV Bharat / entertainment

ಜೂ.ಎನ್​​ಟಿಆರ್ ಅಭಿನಯದ 'ದೇವರ' ಟ್ರೇಲರ್​​ ಬಿಡುಗಡೆಗೆ ಮುಹೂರ್ತ ಫಿಕ್ಸ್: ಪೋಸ್ಟರ್ ರಿಲೀಸ್ - Devara Trailer - DEVARA TRAILER

ಬಹುನಿರೀಕ್ಷಿತ 'ದೇವರ ಭಾಗ 1' ಚಿತ್ರ ಇದೇ ಸೆಪ್ಟೆಂಬರ್ 27ರಂದು ತೆರೆಗಪ್ಪಳಿಸಲಿದೆ. ಕೊರಟಾಲ ಶಿವ ಆ್ಯಕ್ಷನ್​ ಕಟ್​ ಹೇಳಿರುವ ಈ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್, ಸೈಫ್ ಅಲಿ ಖಾನ್ ಮತ್ತು ಜಾಹ್ನವಿ ಕಪೂರ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದು, ಇಂದು ಟ್ರೇಲರ್​​ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಜೊತೆಗೆ ಪೋಸ್ಟರ್ ಸಹ ರಿಲೀಸ್ ಆಗಿದೆ.

Devara Poster
ಜೂ.ಎನ್​​ಟಿಆರ್ ದೇವರ ಪೋಸ್ಟರ್ (Film Poster)

By ETV Bharat Karnataka Team

Published : Sep 7, 2024, 4:45 PM IST

ದಕ್ಷಿಣ ಚಿತ್ರರಂಗದ ಜನಪ್ರಿಯ ನಟ ಜೂನಿಯರ್ ಎನ್​​ಟಿಆರ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ 'ದೇವರ'. ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಸಿನಿಮಾ ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದಾರೆ. 'ದೇವರ' ದರ್ಶನಕ್ಕೆ ಪ್ರೇಕ್ಷಕರು ಹಾತೊರೆಯುತ್ತಿದ್ದಾರೆ. ಸಿನಿಮಾ ಈಗಾಗಲೇ ಪ್ರಚಾರ ಪ್ರಾರಂಭಿಸಿದ್ದು, ಟ್ರೇಲರ್​​ ಬಿಡುಗಡೆಗೆ ಚಿತ್ರತಂಡ ಎದುರು ನೋಡುತ್ತಿದೆ.

ಗಣೇಶ ಚತುರ್ಥಿಯ ಈ ವಿಶೇಷ ದಿನದಂದು 'ದೇವರ' ಚಿತ್ರ ನಿರ್ಮಾಪಕರು ಹೊಸ ಪೋಸ್ಟರ್ ಅನಾವರಣಗೊಳಿಸುವ ಮುಖೇನ ಬಹುನಿರೀಕ್ಷಿತ ಚಿತ್ರದ ಟ್ರೇಲರ್ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಇದೇ ಸೆಪ್ಟೆಂಬರ್ 10 ರಂದು ಚಿತ್ರದ ಪ್ರೋಮೋ ಬಿಡುಗಡೆ ಆಗಲಿದೆ. ಜೂ.ಎನ್​​ಟಿಆರ್ ಅವರನ್ನೊಳಗೊಂಡಿರುವ ಚಿತ್ರದ ಹೊಸ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ.

ಇಂದು ಅನಾವರಣಗೊಂಡಿರುವ ಹೊಸ ಪೋಸ್ಟರ್‌ನಲ್ಲಿ ನಾಯಕ ನಟ ಜೂನಿಯರ್ ಎನ್‌ಟಿಆರ್ ಸಂಪೂರ್ಣ ಕಪ್ಪು ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ನಟನ ನೋಟ ಖಡಕ್​​ ಆಗಿದೆ. ಗಂಭೀರ ಭಂಗಿಯಲ್ಲಿ ನಿಂತಿರುವ ನಟನ ಸುತ್ತ ಸಮುದ್ರದಲೆಗಳು ಎದ್ದಿವೆ. ಪೋಸ್ಟರ್ ಹಂಚಿಕೊಂಡಿರುವ ಚಿತ್ರತಂಡ ''ಇಂದು ಆಚರಿಸಿ, ಒಂದೆರಡು ದಿನಗಳಲ್ಲಿ ಜಯಿಸಿ. ಸೆಪ್ಟೆಂಬರ್ 10 ರಂದು ದೇವರ ಟ್ರೇಲರ್​​ ಬಿಡುಗಡೆ ಆಗಲಿದೆ'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಸಮುದ್ರದ 82 ಅಡಿ ಆಳದಲ್ಲಿ ಪ್ರೇಮ್ ಪುತ್ರಿಯ ಸಿನಿಮಾ ಟೈಟಲ್​ ಅನೌನ್ಸ್: ಮಹೇಶ್ ಬಾಬು ಸಿನಿಮಾದಲ್ಲಿ ಸ್ಮೈಲ್ ಗುರು ರಕ್ಷಿತ್ - Ammu Movie

ಪೋಸ್ಟರ್​, ಪೋಸ್ಟ್​ ಶೇರ್​​ ಆಗುತ್ತಿದ್ದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು, ಸಿನಿಪ್ರಿಯರು ತಮ್ಮ ಪ್ರತಿಕ್ರಿಯೆ ಕೊಡಲು ಶುರುಹಚ್ಚಿಕೊಂಡಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಓರ್ವರು ಆಲ್ ದಿ ಬೆಸ್ಟ್ ಎನ್​ಟಿಆರ್​​​ ಎಂದು ಬರೆದಿದ್ದಾರೆ. ಹೆಚ್ಚಿನವರು ಫೈಯರ್​ ಮತ್ತು ಹಾರ್ಟ್ ಎಮೋಜಿಗಳೊಂದಿಗೆ ತಮ್ಮ ಕಾತರ, ಉತ್ಸಾಹ, ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:ಸುದೀಪ್ ಶಿಷ್ಯ ಆಶು ಈಗ 'ಟಾಮಿ' ಸಿನಿಮಾ ಹೀರೋ: ಕುತೂಹಲ ಹೆಚ್ಚಿಸಿದ ಪೋಸ್ಟರ್ - Tommy movie

ಕೊರಟಾಲ ಶಿವ ಆ್ಯಕ್ಷನ್​ ಕಟ್​ ಹೇಳಿರುವ ಈ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್, ಸೈಫ್ ಅಲಿ ಖಾನ್ ಮತ್ತು ಜಾಹ್ನವಿ ಕಪೂರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆರ್​ಆರ್​ಆರ್​ ಸ್ಟಾರ್ ಜೂನಿಯರ್ ಎನ್​​ಟಿಆರ್ ಮತ್ತು ಬಾಲಿವುಡ್​ ಸೂಪರ್​​ ಸ್ಟಾರ್ ಸೈಫ್ ಅಲಿ ಖಾನ್ ಮುಖಾಮುಖಿಯಾಗುತ್ತಿರುವುದು ಇದೇ ಮೊದಲು. ಆರ್‌ಆರ್‌ಆರ್ (2022) ಚಿತ್ರದ ನಂತರ ಜೂನಿಯರ್ ಎನ್‌ಟಿಆರ್ ದೇವರ ಭಾಗ 1 ಚಿತ್ರದ ಮೂಲಕ ಬಿಗ್​ ಸ್ಕ್ರೀನ್​ಗೆ ಮರಳುತ್ತಿದ್ದಾರೆ. ಹಾಗಾಗಿ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಇದೇ ಸೆಪ್ಟೆಂಬರ್ 27ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರವನ್ನು ಯುವಸುಧಾ ಆರ್ಟ್ಸ್ ಮತ್ತು ಎನ್​ಟಿಆರ್ ಆರ್ಟ್ಸ್ ನಿರ್ಮಾಣ ಮಾಡಿದೆ. ಮಂಗಳವಾರ ಟ್ರೇಲರ್​ ಅನಾವರಣಗೊಳ್ಳಲಿದ್ದು ಅಭಿಮಾನಿಗಳು ಉತ್ಸುಕರಾಗಿದ್ದಾರೆ.

ABOUT THE AUTHOR

...view details