ರಾಜ್ಯಸಭೆಯಲ್ಲಿ ಜಯಾ ಬಚ್ಚನ್ ಅವರು ಪತಿ ಅಮಿತಾಭ್ ಹೆಸರಿನ ಉಲ್ಲೇಖಕ್ಕೆ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ. ಉಪ ಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಅವರು ರಾಜ್ಯಸಭೆ ಸದಸ್ಯರೂ ಆಗಿರುವ ಹಿರಿಯ ನಟಿ ಜಯಾ ಅವರನ್ನು 'ಜಯಾ ಅಮಿತಾಭ್ ಬಚ್ಚನ್' ಎಂದು ಕರೆದಿದ್ದೇ, ಅವರ ಅಸಮಧಾನಕ್ಕೆ ಕಾರಣವಾಯಿತು. ತಮಗೊಂದು ಐಡೆಂಟಿಟಿ ಇದೆ ಎಂಬುದನ್ನು ಇಲ್ಲಿ ಜಯಾ ಬಚ್ಚನ್ ಒತ್ತಿ ಹೇಳಿದರು.
ಹರಿವಂಶ್ ನಾರಾಯಣ್ ಸಿಂಗ್ ಅವರು ಸೋಮವಾರ ಸಂಸತ್ತಿನ ಅಧಿವೇಶನದ ಸಂದರ್ಭ, "ಶ್ರೀಮತಿ ಜಯಾ ಅಮಿತಾಭ್ ಬಚ್ಚನ್ ಜೀ, ದಯವಿಟ್ಟು" ಎಂದು ಹೇಳಿದ ನಂತರ ಜಯಾ ಅವರು ಗರಂ ಆದರು. ಇದಕ್ಕೆ ಪ್ರತಿಕ್ರಿಯಿಸಿದ ಹಿರಿಯ ಬಾಲಿವುಡ್ ತಾರೆ, "ಸಿರ್ಫ್ ಜಯಾ ಬಚ್ಚನ್ ಬೋಲ್ತೆ ತೋ ಕಾಫಿ ಹೋಜಾತಾ (ನನ್ನನ್ನು ಜಯಾ ಬಚ್ಚನ್ ಎಂದು ಕರೆದಿದ್ದರೆ ಸಾಕಿತ್ತು)" ಎಂದು ತಿಳಿಸಿದರು. ಆ ಕೂಡಲೇ, ಹರಿವಂಶ್ ಅವರು ಫೈಲ್‌ನಲ್ಲಿರುವಂತೆಯೇ ಕರೆದಿರುವುದಾಗಿ ಸ್ಪಷ್ಟಪಡಿಸಿದರು.
ಉಪಸಭಾಪತಿಯ ಸ್ಪಷ್ಟೀಕರಣದ ಹೊರತಾಗಿಯೂ, ಜಯಾ ತಮ್ಮ ಮಾತಿನಿಂದ ಹಿಂದೆ ಸರಿಯಲಿಲ್ಲ. ಮಾತು ಮುಂದುವರಿಸಿದ ಅವರು, "ಯೇ ಜೋ ಹೈ ಕುಚ್ ನಯಾ ತರಿಕಾ ಹೈ ಕಿ ಮಹಿಳಾಯೇನ್ ಅಪ್ನಿ ಪತಿ ಕೆ ನಾಮ್ ಸೇ ಜಾನಿ ಜಾಯೇ, ಉನ್ಕಾ ಕೋಯಿ ಅಸ್ತಿತ್ವ ನಹೀ. ಉನ್ಕಿ ಕೋಯಿ ಉಪಲಬ್ಧ್ ಹೈ ನಹೀ, ಅಪ್ನೇ ಮೇ ಔರ್ ಅಸ್ತಿತ್ವ ನಹೀ. ಯೇ ಜೋ ನಯಾ ಶುರು ಹುವಾ ಹೈ, (ಮಹಿಳೆಯರು ತಮ್ಮ ಪತಿಯ ಹೆಸರಿನ ಮೂಲಕ ಗುರುತಿಸಿಕೊಳ್ಳುವ ಹೊಸ ಪ್ರವೃತ್ತಿ ಇದೆ. ಮಹಿಳೆಯರಿಗೆ ಗುರುತುಗಳಿಲ್ಲವೇ?). ಎಂದು ಹೇಳುವ ಮೂಲಕ ತಮ್ಮ ಅಸಮಧಾನ ಹೊರಹಾಕಿದರು.
ಇದನ್ನೂ ಓದಿ:ದುನಿಯಾ ವಿಜಯ್ ಮುಖ್ಯಭೂಮಿಕೆಯ 'ಭೀಮ' ಟ್ರೇಲರ್ ಅನಾವರಣಕ್ಕೆ ಮುಹೂರ್ತ ಫಿಕ್ಸ್ - Bheema Trailer
ಜಯಾ ಬಚ್ಚನ್ 1973ರಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರೊಂದಿಗೆ ದಾಂಪತ್ಯ ಜೀವನ ಆರಂಭಿಸಿದರು. ಸ್ಟಾರ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗ ಅಭಿಷೇಕ್ ಬಚ್ಚನ್ ಮತ್ತು ಮಗಳು ಶ್ವೇತಾ ಬಚ್ಚನ್ ನಂದಾ. ಮೊಮ್ಮಕ್ಕಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಬಚ್ಚನ್ ಕುಟುಂಬ ತನ್ನದೇ ಆದ ಗುರುತು ಹೊಂದಿದ್ದು, ಇದೀಗ ಪತಿಯ ಹೆಸರಿನೊಂದಿಗೆ ಕರೆದದ್ದು ಮಾತ್ರ ಜಯಾ ಬಚ್ಚನ್ ಅವರ ಅಸಮಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ:ರಾಮೋಜಿ ಫಿಲ್ಮ್ ಸಿಟಿಯಲ್ಲಿ ಪುಷ್ಪ 2 ಶೂಟಿಂಗ್ ಪುನಾರಂಭ; ಶೀಘ್ರ ಶೆಟ್ಗೆ ಅಲ್ಲು ಅರ್ಜುನ್ - Pushpa 2
ಅಮಿತಾಭ್ ಬಚ್ಚನ್ ತಮ್ಮ 81ರ ಹರೆಯದಲ್ಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಬಿಗ್ ಬಜೆಟ್ ಚಿತ್ರಗಳ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಕೈಯಲ್ಲಿ ಸರಣಿ ಪ್ರಾಜೆಕ್ಟ್ಗಳನ್ನು ಹೊಂದಿರುವ ಬಿಗ್ ಬಿ ಕೊನೆಯದಾಗಿ ದಕ್ಷಿಣದ ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 ಎಡಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ತಿಂಗಳ ಹಿಂದೆ ತೆರೆಕಂಡ ಈ ಚಿತ್ರದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್, ಬಾಲಿವುಡ್ ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ, ಸೌತ್ ಸೂಪರ್ ಸ್ಟಾರ್ ಕಮಲ್ ಹಾಸನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.