ಹೈದರಾಬಾದ್: ಟಾಲಿವುಡ್ ಸೂಪರ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಹಾಗೂ ಕೊರಟಾಲ ಶಿವ ಕಾಂಬಿನೇಶನ್ನ ಆ್ಯಕ್ಷನ್ ಡ್ರಾಮಾ 'ದೇವರ: ಭಾಗ 1' ಇಂದು ಜಾಗತಿಕ ಮಟ್ಟದಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಿದೆ. 2022ರ ಮಾರ್ಚ್ನಲ್ಲಿ ಬಿಡುಗಡೆ ಆದ ಬ್ಲಾಕ್‌ಬಸ್ಟರ್ ಆರ್ಆರ್ಆರ್ ನಂತರ ತೆರೆಕಂಡ ಜೂನಿಯರ್ ಎನ್‌ಟಿಆರ್ ಮುಖ್ಯಭೂಮಿಕೆಯ ಮೊದಲ ಚಿತ್ರವಿದು. ಹಾಗಾಗಿ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ.
ದೇವರ ಬಾಕ್ಸ್ ಆಫೀಸ್ ಕಲೆಕ್ಷನ್ (ಸಾಧ್ಯತೆ): ದೇವರ: ಭಾಗ 1 ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹಳ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಸಿನಿಪಂಡಿತರ ಅಂದಾಜಿನ ಪ್ರಕಾರ, ಅಡ್ವಾನ್ಸ್ ಟಿಕೆಟ್ ಬುಕಿಂಗ್‌ನಲ್ಲಿ ಪ್ರೇಕ್ಷಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆನ್ಲೈನ್, ಆಫ್ಲೈನ್ ಟಿಕೆಟ್ ಮಾರಾಟ ವ್ಯವಹಾರದಲ್ಲಿ 'ದೇವರ' ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನವೇ ಸರಿ ಸುಮಾರು 125 ಕೋಟಿ ರೂಪಾಯಿ ಗಳಿಸುವ ನಿರೀಕ್ಷೆಯಿದೆ.
ಆನ್ಲೈನ್ ವ್ಯವಹಾರ: ದೇವರ ಅಡ್ವಾನ್ಸ್ ಟಿಕೆಟ್ ಬುಕಿಂಗ್ ವ್ಯವಹಾರ ಅತ್ಯುತ್ತಮವಾಗಿ ನಡೆದಿದೆ. ಭಾರತದಲ್ಲಿ (ಬ್ಲಾಕ್ ಸೀಟ್‌ಗಳನ್ನು ಒಳಗೊಂಡಂತೆ) 40 ಕೋಟಿ ರೂಪಾಯಿಗೂ ಅಧಿಕ ವ್ಯವಹಾರ ನಡೆದಿದೆ. ಜಾಗತಿಕವಾಗಿ 75 ಕೋಟಿ ರೂಪಾಯಿಗಳನ್ನು ಮೀರಿದೆ ಎಂದು ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಹೇಳಿದೆ.
ಅಮೆರಿಕಕ್ಕೆ ಹಾರಿದ ಜಪಾನ್ ಫ್ಯಾನ್:ಇನ್ನೂ ಜಪಾನ್ ಮೂಲದ ಅಭಿಮಾನಿಯೊಬ್ಬರು ದೇವರ ವೀಕ್ಷಿಸುವ ಸಲುವಾಗಿ ಲಾಸ್ ಏಂಜಲೀಸ್‌ಗೆ ಪ್ರಯಾಣ ಕೈಗೊಂಡಿದ್ದಾರೆ. ಜೂನಿಯರ್ ಎನ್‌ಟಿಆರ್ ನಟನೆಯ ಸಿನಿಮಾ ಇಂದು ಬಹು ಭಾಷೆಗಳಲ್ಲಿ ತೆರೆಗಪ್ಪಳಿಸಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆ ನಾಯಕ ನಟ ಅಭಿಮಾನಿಗಳು ಮತ್ತು ದೇವರ ತಂಡಕ್ಕೆ ತಮ್ಮ ಕೃತಜ್ಞತೆ ಅರ್ಪಿಸಿದ್ದಾರೆ.