ಕರ್ನಾಟಕ

karnataka

ETV Bharat / entertainment

ನ್ಯಾಚುರಲ್​​ ಸ್ಟಾರ್ ನಾನಿ ಜೊತೆ ಜಾಹ್ನವಿ ಸ್ಕ್ರೀನ್​ ಶೇರ್: ತೆಲುಗಿನಲ್ಲಿ ಬ್ಯುಸಿಯಾದ ಬಾಲಿವುಡ್​ ಬೆಡಗಿ - Janhvi Kapoor Telugu Movie - JANHVI KAPOOR TELUGU MOVIE

ಬಾಲಿವುಡ್​ ನಟಿ ಜಾಹ್ನವಿ ಕಪೂರ್‌ ಈಗಾಗಲೇ ಎರಡು ತೆಲುಗು ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದು, ಟಾಲಿವುಡ್​ನ ಮತ್ತೊಂದು ಆಫರ್​ ನಟಿಯ ಕೈ ಸೇರಿದೆ ಎಂದು ಹೇಳಲಾಗಿದೆ.

Janhvi Kapoor
ಜಾಹ್ನವಿ ಕಪೂರ್‌ (ANI)

By ETV Bharat Karnataka Team

Published : Jul 17, 2024, 3:37 PM IST

ದಿ. ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್‌ ಬಾಲಿವುಡ್​ನ ಅತ್ಯಂತ ಸುಂದರ ಮತ್ತು ಬಹುಬೇಡಿಕೆಯ ನಟಿಯರಲ್ಲೋರ್ವರು. ಹಿಂದಿ ಚಿತ್ರರಂಗದಲ್ಲಿ ಕೆಲ ಸಿನಿಮಾಗಳನ್ನು ಮಾಡಿರುವ ಈ ಚೆಂದುಳ್ಳಿ ಚೆಲುವೆಯೀಗ ಟಾಲಿವುಡ್​ನಲ್ಲಿ ಸಖತ್​​ ಬ್ಯುಸಿಯಾಗಿದ್ದಾರೆ. ತೆಲುಗು ಚಿತ್ರರಂಗದಿಂದ ನಟಿಮಣಿಗೆ ಅವಕಾಶಗಳು ಹರಿದು ಬರುತ್ತಿವೆ.

ಟಾಲಿವುಡ್​ನ ಎರಡು ಬಹುನಿರೀಕ್ಷಿತ ಪ್ರಾಜೆಕ್ಟ್​​ಗಳು ಜಾಹ್ನವಿ ಕಪೂರ್‌ ಬಳಿ ಇವೆ. ಆರ್​ಆರ್​ಆರ್​ ಖ್ಯಾತಿಯ ಜೂನಿಯರ್ ಎನ್‌ಟಿಆರ್‌ಗೆ ಜೋಡಿಯಾಗಿ​​ 'ದೇವರ' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಬ್ಲಾಕ್​ಬಸ್ಟರ್ ಆರ್​ಆರ್​ಆರ್ ಸಿನಿಮಾದ ಮತ್ತೋರ್ವ ನಟ, ಸೂಪರ್ ಸ್ಟಾರ್ ರಾಮ್​ಚರಣ್​​​ ಜೊತೆಯೂ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಬುಚ್ಚಿಬಾಬು ಸನಾ ನಿರ್ದೇಶನದ ಈ ಚಿತ್ರ ಶೀಘ್ರದಲ್ಲೇ ಸೆಟ್ಟೇರಲಿದ್ದು, ಈಗಾಗಲೇ ಮುಹೂರ್ತ ಸಮಾರಂಭ ನೆರವೇರಿದೆ. ಇದೀಗ ಮತ್ತೋರ್ವ ಸೌತ್​​ ಸೂಪರ್​ ಸ್ಟಾರ್ ಜೊತೆ ಬಾಲಿವುಡ್​ ಬೆಡಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಸಖತ್​ ಸದ್ದು ಮಾಡುತ್ತಿದೆ.

ಈ ಎರಡು ಸಿನಿಮಾಗಳ ಬಿಡುಗಡೆಗೂ ಮುನ್ನವೇ ಮತ್ತೊಂದು ಅವಕಾಶ ನಟಿಯ ಕೈಸೇರಿದೆ. ಈ ಬಾರಿ ನ್ಯಾಚುರಲ್ ಸ್ಟಾರ್ ನಾನಿ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ನಾನಿ ನಾಯಕನಾಗಿ ನಟಿಸಲಿರುವ ಚಿತ್ರಕ್ಕೆ ಶ್ರೀಕಾಂತ್ ಒಡೆಲಾ ನಿರ್ದೇಶನವಿರಲಿದೆ. ಕಳೆದ ವರ್ಷ ಇವರಿಬ್ಬರ ಕಾಂಬಿನೇಶನ್​​ನಲ್ಲಿ 'ದಸರಾ' ಸಿನಿಮಾ ಮೂಡಿಬಂದಿತ್ತು. ಇದೀಗ ಈ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ನಿರ್ಮಾಣವಾಗುತ್ತಿದೆ. ಜಾಹ್ನವಿ ನಾಯಕಿಯಾಗಿ ನಟಿಸಲಿದ್ದಾರೆ. ಸದ್ಯ ಕಾಲ್ ಶೀಟ್ ಹೊಂದಾಣಿಕೆ ಬಗ್ಗೆ ಚರ್ಚೆ ನಡೆಯುತ್ತಿದೆಯಂತೆ. ಎಲ್ಲದಕ್ಕೂ ಚಿತ್ರತಂಡ ಅಧಿಕೃತ ಮಾಹಿತಿ ಒದಗಿಸಬೇಕಿದೆ. ಸದ್ಯ ನಾನಿ 'ಸರಿಪೋದ ಶನಿವಾರಂ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಪ್ರೊಜೆಕ್ಟ್​ ಮುಗಿದ ಕೂಡಲೇ ಜಾಹ್ನವಿ ಜೊತೆಗಿನ ಸಿನಿಮಾ ಕೆಲಸಗಳು ಶುರುವಾಗಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಹಗ್ಗದಲ್ಲಿ ನೇತಾಡುವಾಗ ಮೂರ್ಛೆ ಹೋದ ಸಹನಟನ ರಕ್ಷಿಸಿದ ಅಕ್ಷಯ್​​ ಕುಮಾರ್​: ವಿಡಿಯೋ - Akshay Kumar

ಇನ್ನು ಜಾಹ್ನವಿ ಅವರ ತೆಲುಗು ಸಿನಿಮಾ ಕೆರಿಯರ್​ ಗಮನಿಸಿದರೆ, ಈಗಾಗಲೇ ಎರಡು ಚಿತ್ರಗಳಿಗೆ ಗ್ರೀನ್​ ಸಿಗ್ನಲ್​​ ಕೊಟ್ಟಿದ್ದು, ಒಂದರ ಶೂಟಿಂಗ್​​ ಬಹುತೇಕ ಅಂತಿಮ ಹಂತದಲ್ಲಿದೆ. ಇದೇ ಮೊದಲ ಬಾರಿಗೆ ಸೌತ್ ಸೂಪರ್ ಸ್ಟಾರ್ ಜೂನಿಯರ್ ಎನ್​ಟಿಆರ್​​ ಜೊತೆ ತೆರೆ ಹಂಚಿಕೊಂಡಿದ್ದಾರೆ. ಬಾಲಿವುಡ್​ ಬೆಡಗಿಗಿದು ತೆಲುಗಿನ ಚೊಚ್ಚಲ ಚಿತ್ರ ಕೂಡಾ ಹೌದು. ಕೊರಟಾಲ ಶಿವ ನಿರ್ದೇಶನದ ಈ ಸಿನಿಮಾದಲ್ಲಿ ನಾಯಕಿಯ ಪಾತ್ರ ವಹಿಸಿದ್ದಾರೆ. ಬಹುನಿರೀಕ್ಷಿತ ಚಿತ್ರ ಎರಡು ಭಾಗಗಳಲ್ಲಿ ಮೂಡಿ ಬರುತ್ತಿದ್ದು, ಬಾಲಿವುಡ್​ ನಟ ಸೈಫ್​ ಆಲಿ ಖಾನ್​ ವಿಲನ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಕಾಶ್​ ರೈ ಕೂಡ ಪ್ರಮುಖ ಪಾತ್ರವೊಂದರಲ್ಲಿದ್ದಾರೆ. ಖ್ಯಾತ ಗಾಯಕ ಅನಿರುದ್ಧ್ ರವಿಚಂದರ್ ಜೊತೆ ಸಂತೋಷ್ ವೆಂಕಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಮೊದಲ ಭಾಗ ಸೆಪ್ಟೆಂಬರ್ 27ಕ್ಕೆ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ:'ಮೊನಾಲಿಸಾ' ಚಿತ್ರಕ್ಕೆ 20 ವರ್ಷ: ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಗೌರಿ' ಈವೆಂಟ್​ನಲ್ಲಿ ಹಂಸಲೇಖ - Gowri

ABOUT THE AUTHOR

...view details