ಹೈದರಾಬಾದ್: ಬಾಲಿವುಡ್ ನಟಿ ಜಾಹ್ನವಿ ಕಪೂರ್ ತಮ್ಮ ವೈಯಕ್ತಿಕ ಜೀವನದಿಂದ ಆಗಾಗ್ಗೆ ಚರ್ಚೆಯಲ್ಲಿರುತ್ತಾರೆ. ಇತ್ತೀಚೆಗೆ ನಟಿಯ ವಿಡಿಯೋವೊಂದು ಹೊರಬಿದ್ದಿದ್ದು, ಅದರಲ್ಲಿ ತನ್ನ ವದಂತಿಯ ಗೆಳೆಯ ಶಿಖರ್ ಪಹಾಡಿಯಾ ಜೊತೆ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾ ಸ್ಟಾರ್ ಓರಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಜಾಹ್ನವಿ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿರುವ ವಿಡಿಯೋ ಹಂಚಿಕೊಳ್ಳಲಾಗಿದೆ. ಅಚ್ಚರಿಯ ವಿಷಯವೆಂದರೆ ವಿಡಿಯೋದಲ್ಲಿ ನಟಿ ದೇವಸ್ಥಾನದ ಮೆಟ್ಟಿಲುಗಳನ್ನು ಮಂಡಿಯೂರಿ ಹತ್ತುತ್ತಿದ್ದಾರೆ. ಇದನ್ನು ನೋಡಿದ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಜಾಹ್ನವಿ ಕಪೂರ್ ಪ್ರತಿಬಾರಿ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಏತನ್ಮಧ್ಯೆ, ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಇದರಲ್ಲಿ ಅವರು ಮೆಟ್ಟಿಲುಗಳ ಮೂಲಕ ತಿರುಮಲಕ್ಕೆ ಭೇಟಿ ನೀಡಿರುವುದು ಕಾಣಬಹುದಾಗಿದೆ. ಜೊತೆಗೆ ದಕ್ಷಿಣ ಭಾರತದ ಆಹಾರ ಸವಿಯುವುದನ್ನು ಸಹ ಇದರಲ್ಲಿದೆ. ಈ ಸಂದರ್ಭದಲ್ಲಿ ನಟಿ, 'ದೇವರ ದರ್ಶನದ ಹಕ್ಕನ್ನು ಸಂಪಾದಿಸಬೇಕಾಗುತ್ತದೆ' ಅದಕ್ಕೇ ನನಗೆ ಶ್ರೀವಾರಿ ಮೆಟ್ಟಿಲು ಹತ್ತುವುದು ಇಷ್ಟ ಎಂದು ವಿಡಿಯೋದಲ್ಲಿ ಹೇಳುತ್ತಾರೆ. ಜಾಹ್ನವಿ ಅವರ ಸರಳತೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.