ಕರ್ನಾಟಕ

karnataka

ETV Bharat / entertainment

ಸೇನಾ ಸಮವಸ್ತ್ರ ಧರಿಸಿ ಕಿಸ್ಸಿಂಗ್ ಸೀನ್: 'ಫೈಟರ್​​'ಗೆ ವಾಯುಪಡೆ ಅಧಿಕಾರಿಯಿಂದ ನೋಟಿಸ್

'ಫೈಟರ್' ಸಿನಿಮಾದಲ್ಲಿ ಪ್ರಮುಖ ಪಾತ್ರಧಾರಿಗಳು ವಾಯುಪಡೆಯ ಸಮವಸ್ತ್ರ ಧರಿಸಿ ಚುಂಬಿಸಿದ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಯ ಅಧಿಕಾರಿ ಚಿತ್ರತಂಡಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.

Fighter Movie
ಫೈಟರ್​ ಸಿನಿಮಾ

By ETV Bharat Karnataka Team

Published : Feb 6, 2024, 5:13 PM IST

ಸಿದ್ಧಾರ್ಥ್ ಆನಂದ್ ನಿರ್ದೇಶನದ ಇತ್ತೀಚಿನ 'ಫೈಟರ್' ಸಿನಿಮಾ ಪ್ರೇಕ್ಷಕರನ್ನು ರಂಜಿಸುವ ಜೊತೆಗೆ, ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುವಲ್ಲಿ ಯಶಸ್ಸು ಕಂಡಿದೆ. ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿ ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. 'ಪಠಾಣ್​' ನಿರ್ದೇಶಕರ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿಗಳು ವಾಯುಪಡೆಯ ಸಮವಸ್ತ್ರ ಧರಿಸಿ ಚುಂಬಿಸುವ ದೃಶ್ಯದಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಇದೀಗ ಸಂಕಷ್ಟದಲ್ಲಿ ಸಿಲುಕಿದೆ. ಈ ದೃಶ್ಯ ಭಾರತೀಯ ವಾಯುಪಡೆಯ ಅಧಿಕಾರಿಯಿಂದ ಟೀಕೆಗೊಳಗಾಗಿದ್ದು, ಲೀಗಲ್ ನೋಟಿಸ್ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.

'ಫೈಟರ್​​'ನಲ್ಲಿ ದೀಪಿಕಾ ಪಡುಕೋಣೆ ಸ್ಕ್ವಾಡ್ರನ್ ಲೀಡರ್ ಮಿನಿ ರಾಥೋರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹೃತಿಕ್ ರೋಷನ್ ಸ್ಕ್ವಾಡ್ರನ್ ಲೀಡರ್ ಶಂಶೇರ್ ಪಠಾನಿಯಾ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಿನಿಮಾದುದ್ದಕ್ಕೂ ಈ ಜೋಡಿ ವೈಯಕ್ತಿಕ ಮತ್ತು ವೃತ್ತಿಪರ ಸವಾಲುಗಳನ್ನು ಎದುರಿಸುತ್ತಾರೆ. ಕ್ಲೈಮ್ಯಾಕ್ಸ್​ನಲ್ಲಿ ಚುಂಬನದ ದೃಶ್ಯವಿದೆ. ಮಿಲಿಟರಿ ಉಡುಗೆ ಧರಿಸಿದ್ದ ಸಂದರ್ಭ ಈ ಸೀನ್​ ಬಂದಿದೆ. ಇದು ಆಕ್ರೋಶಕ್ಕೆ ಗುರಿಯಾಗಿದೆ. ಈ ಕಿಸ್ಸಿಂಗ್​​ ಸೀನ್​​ ಸಮವಸ್ತ್ರದ ಘನತೆಗೆ ತೋರಿದ ಅಗೌರವ ಎಂದು ಪರಿಗಣಿಸಿ, ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

'ಫೈಟರ್' ಭಾರತದ ಮೊದಲ ವೈಮಾನಿಕ-ಆ್ಯಕ್ಷನ್ ಆಧಾರಿತ ಚಿತ್ರವಾದ ಹಿನ್ನೆಲೆಯಲ್ಲಿ ಹೆಚ್ಚು ನಿರೀಕ್ಷೆಗಳಿತ್ತು. ಅದರಂತೆ ಸಿನಿಮಾ ಬಹುತೇಕ ಸಕಾರಾತ್ಮಕ ಪ್ರತಿಕ್ರಿಯೆ ಪಡೆದಿದ್ದು, ಬಾಕ್ಸ್​​ ಆಫೀಸ್‌​ಲ್ಲೂ ಉತ್ತಮ ಗಳಿಕೆ ಮಾಡಿದೆ. ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ವಾಯುಪಡೆಯಲ್ಲಿ ಫೈಟರ್ ಪೈಲಟ್‌ಗಳಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಬಿಡುಗಡೆಯಾದ 12 ದಿನಗಳಲ್ಲಿ 178 ಕೋಟಿ ರೂ. ಗಳಿಸಿದೆ. ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್ ಮತ್ತು ಅಕ್ಷಯ್ ಒಬೆರಾಯ್ ಚಿತ್ರದಲ್ಲಿ ನಟಿಸಿದ್ದಾರೆ.

ಸಿದ್ಧಾರ್ಥ್ ಆನಂದ್ ಮತ್ತು ರಾಮನ್ ಚಿಬ್ ಬರೆದಿರುವ 'ಫೈಟರ್' ಅನ್ನು ವಯಾಕಾಮ್ 18 ಸ್ಟುಡಿಯೋಸ್ ಮತ್ತು ಮಾರ್ಫ್ಲಿಕ್ಸ್ ಪಿಕ್ಚರ್ಸ್ ನಿರ್ಮಿಸಿದೆ. ತಮ್ಮದೇ ಚಲನಚಿತ್ರ ನಿರ್ಮಾಣ ಬ್ಯಾನರ್ ಮಾರ್ಫ್ಲಿಕ್ಸ್ ಪಿಕ್ಚರ್ಸ್ ಅಡಿಯಲ್ಲಿ ಸಿದ್ಧಾರ್ಥ್ ಆನಂದ್​ ನಿರ್ಮಿಸಿದ ಮೊದಲ ಪ್ರಾಜೆಕ್ಟ್ ಇದಾಗಿದೆ​​.

ಇದನ್ನೂ ಓದಿ:ಕುಗ್ಗಿದ ಗಳಿಕೆ: 'ಫೈಟರ್'​ ಚಿತ್ರ 12 ದಿನದ ಕಲೆಕ್ಷನ್​ ಹೀಗಿದೆ!

ದೀಪಿಕಾ ಪಡುಕೋಣೆ ಮತ್ತು ಹೃತಿಕ್​ ರೋಷನ್​ ಇದೇ ಮೊದಲ ಬಾರಿ ಸ್ಕ್ರೀನ್​ ಶೇರ್ ಮಾಡಿರುವ ಸಿನಿಮಾ ಕೂಡಾ ಹೌದು. ಹೃತಿಕ್​ ಮತ್ತು ಸಿದ್ಧಾರ್ಥ್​ ಆನಂದ್​ ಕಾಂಬಿನೇಶನ್​ನ ಮೂರನೇ ಸಿನಿಮಾ ಫೈಟರ್​. ಇದಕ್ಕೂ ಮುನ್ನ 'ಬ್ಯಾಂಗ್​ ಬ್ಯಾಂಗ್'​ ಮತ್ತು 'ವಾರ್'​ಗಳಲ್ಲಿ ಈ ನಟ-ನಿರ್ದೇಶಕರ ಜೋಡಿ ಕೆಲಸ ಮಾಡಿತ್ತು. ದೀಪಿಕಾ ಪಡುಕೋಣೆಯ 'ಬಚ್ನಾ ಎ ಹಸೀನೋ' ಮತ್ತು 'ಪಠಾಣ್'​​ ಚಿತ್ರಗಳಿಗೆ ಸಿದ್ಧಾರ್ಥ್ ಆ್ಯಕ್ಷನ್​ ಕಟ್​ ಹೇಳಿದ್ದರು.

ಇದನ್ನೂ ಓದಿ:'Poacher' ಪ್ರಾಜೆಕ್ಟ್​ಗೆ ನಿರ್ಮಾಪಕಿಯಾದ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಆಲಿಯಾ ಭಟ್

ABOUT THE AUTHOR

...view details