ಮೂರನೇ ಹಂತದ ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ನಟಿ ಹೀನಾ ಖಾನ್ ತಮ್ಮ ಪರಿಸ್ಥಿತಿಯನ್ನು ಗಟ್ಟಿಗಿತ್ತಿಯಾಗಿ ಎದುರಿಸುತ್ತಿದ್ದಾರೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ 2024ರಲ್ಲಿ ತಾವು ಎದುರಿಸಿದ ಸವಾಲುಗಳುಳ್ಳ ಪ್ರಯಾಣ ಪ್ರತಿಬಿಂಬಿಸುವ ಮತ್ತು 2025 ರಿಂದ ದಯೆ ಬಯಸುವ ಪೋಸ್ಟ್ ಅನ್ನು ಅವರು ಹಂಚಿಕೊಂಡಿದ್ದಾರೆ. ಈ ಪೋಸ್ಟ್ನಲ್ಲಿರುವ ಸರಣಿ ಫೋಟೋಗಳು ನಟಿಯ ಕೃತಜ್ಞತೆ ಜೊತೆಗೆ ಉತ್ತಮ ಆರೋಗ್ಯಕ್ಕಾಗಿ ಹೊಂದಿರುವ ಭರವಸೆಯನ್ನು ಸೆರೆಹಿಡಿದಿವೆ.
ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಸರಣಿ ಫೋಟೋಗಳನ್ನು ಹಂಚಿಕೊಂಡ ನಟಿ, "Alhamdullilah.. ಕೃತಜ್ಞತೆ. 2025 ದಯವಿಟ್ಟು ದಯೆಯಿಂದಿರಿ. ಉತ್ತಮ ಆರೋಗ್ಯ, ಉತ್ತಮ ಆರೋಗ್ಯ, ಉತ್ತಮ ಆರೋಗ್ಯ, ದುವಾ" ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ. ಸರಣಿ ಚಿತ್ರಗಳ ಮೊದಲ ಫೋಟೋ ತಟ್ಟೆಯಲ್ಲಿ ಹೃದಯಾಕಾರದ ಅನ್ನವನ್ನು ಕಾಣಬಹುದು. ಬಹುಶಃ ಅವರ ಸೆಲ್ಫ್ ಲವ್ ಮತ್ತು ಚೇತರಿಸಿಕೊಳ್ಳುತ್ತಿರುವ ಪ್ರಯಾಣದ ಸಂಕೇತವಾಗಿರಬಹುದು. ಉಳಿದ ಕೆಲ ಫೋಟೋಗಳು ಅವರ ಕಠಿಣ ಸಮಯದಲ್ಲಿ ಪ್ರೀತಿಪಾತ್ರರಿಂದ ಪಡೆದ ಬೆಂಬಲವನ್ನು ಪ್ರದರ್ಶಿಸಿವೆ.
ಫೋಟೋವೊಂದರಲ್ಲಿ ಹೀನಾ ಖಾನ್ ತನ್ನ ಗೆಳೆಯ ರಾಕಿ ಜೈಸ್ವಾಲ್ ಜೊತೆ ಇರುವುದನ್ನು ಕಾಣಬಹುದು. ಇತರೆ ಫೋಟೋಗಳು ನಟಿಯ ಧೈರ್ಯ, ಶಕ್ತಿಯನ್ನು ಚಿತ್ರಿಸಿವೆ. ದೈಹಿಕ ಆರೋಗ್ಯವನ್ನು ಮರಳಿ ಪಡೆಯುವತ್ತ ಗಮನಹರಿಸಿರೋದನ್ನು ಕಾಣಬಹುದು. ಕುಟುಂಬದ ಫೋಟೋ ತಮ್ಮ ಪ್ರೀತಿಪಾತ್ರರೊಂದಿಗಿನ ಅವರ ಅಮೂಲ್ಯ ಕ್ಷಣಗಳನ್ನು ಪ್ರದರ್ಶಿಸಿವೆ. ಫೋಟೋವೊಂದರಲ್ಲಿ ಕಳೆದ ವರ್ಷ ಫ್ಯಾಷನ್ ಶೋನ ಆಕರ್ಷಕ ರ‍್ಯಾಂಪ್ ವಾಕ್ ಆಗಿದೆ.