ಕರ್ನಾಟಕ

karnataka

ETV Bharat / entertainment

ಜಿಮ್ ತರಬೇತುದಾರನ ಮೇಲೆ ಹಲ್ಲೆ ಆರೋಪ ಕೇಸ್​: ನಟ ಧ್ರುವ ಸರ್ಜಾ ಮ್ಯಾನೇಜರ್ ಬಂಧನ - assault case - ASSAULT CASE

ನಟ ಧ್ರುವ ಸರ್ಜಾರ ಜಿಮ್​ ತರಬೇತುದಾರನ ಮೇಲಿನ ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಟ ಧ್ರುವ ಸರ್ಜಾರ ಮ್ಯಾನೇಜರ್ ಬಂಧನ
ನಟ ಧ್ರುವ ಸರ್ಜಾರ ಮ್ಯಾನೇಜರ್ ಬಂಧನ (ETV Bharat)

By ETV Bharat Karnataka Team

Published : Sep 10, 2024, 9:24 PM IST

Updated : Sep 10, 2024, 10:52 PM IST

ಬೆಂಗಳೂರು:ನಟ ಧ್ರುವ ಸರ್ಜಾ ಅವರ ಜಿಮ್ ತರಬೇತುದಾರ ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟನ ಮ್ಯಾನೇಜರ್ ಹಾಗೂ ಆಪ್ತ ಅಶ್ವಿನ್ ಎಂಬಾತನನ್ನ ಬನಶಂಕರಿ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಈ ಬಗ್ಗೆ ಬೆಂಗಳೂರು ಪೊಲೀಸ್​ ಕಮಿಷನರ್​ ಬಿ ದಯಾನಂದ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮೇ ತಿಂಗಳ 26ರ ರಾತ್ರಿ ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆ ನಡೆಸಲಾಗಿತ್ತು. ವೈಯಕ್ತಿಕ ದ್ವೇಷದ ಕಾರಣಕ್ಕೆ ಧ್ರುವ ಸರ್ಜಾರ ಕಾರು ಚಾಲಕ ನಾಗೇಂದ್ರನ ಸೂಚನೆ ಅನ್ವಯ ಹರ್ಷ ಮತ್ತು ಸುಭಾಷ್ ಎನ್ನುವವರು ಹಲ್ಲೆ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಪ್ರಶಾಂತ್ ಪೂಜಾರಿ ನೀಡಿದ ದೂರಿನನ್ವಯ ಪ್ರಕರಣ ದಾಖಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

ಪೊಲೀಸರ ಹೇಳಿಕೆ ಪ್ರಕಾರ:ಹೆಚ್ಚಿನ ವಿಚಾರಣೆಯ ವೇಳೆ ಕಾರು ಚಾಲಕ ನಾಗೇಂದ್ರನ ಪಾತ್ರವನ್ನು ಪೊಲೀಸರು ಪತ್ತೆ ಮಾಡಿದ್ದರು. ಬಳಿಕ ಆತನನ್ನೂ ವಿಚಾರಣೆ ನಡೆಸಲಾಗಿತ್ತು. ತನಿಖೆಯ ವೇಳೆ ನಟನ ಮ್ಯಾನೇಜರ್​ ಅಶ್ವಿನ್ ಪಾತ್ರವೂ ಕಂಡು ಬಂದ ಹಿನ್ನೆಲೆಯಲ್ಲಿ ಇದೀಗ ಆತನನ್ನೂ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:'ರೇಣುಕಾಸ್ವಾಮಿಯಿಂದ ಯಾವುದೇ ಮೆಸೇಜ್ ಬಂದಿಲ್ಲ': ರಾಗಿಣಿ ದ್ವಿವೇದಿ, ಶುಭಾ ಪೂಂಜಾ ಸ್ಪಷ್ಟನೆ - Renukaswamy Messages to Actress

Last Updated : Sep 10, 2024, 10:52 PM IST

ABOUT THE AUTHOR

...view details