ಕರ್ನಾಟಕ

karnataka

ETV Bharat / entertainment

ಗೋಲ್ಡನ್ ಸ್ಟಾರ್ ಗಣೇಶ್ 'ದ್ವಾಪರ' ಸಾಂಗ್​​ ಟ್ರೆಂಡಿಂಗ್​​​ನಲ್ಲಿ: ಸಿನಿಮಾ ನೋಡುವ ಕಾತರ ಹೆಚ್ಚಳ - Dwapara Song - DWAPARA SONG

'ಕೃಷ್ಣಂ ಪ್ರಣಯ ಸಖಿ' ಚಿತ್ರದಿಂದ ಇತ್ತೀಚೆಗಷ್ಟೇ ಅನಾವರಣಗೊಂಡಿರುವ 'ದ್ವಾಪರ' ಸಾಂಗ್ ಸಖತ್​​​​​ ಟ್ರೆಂಡಿಂಗ್​​​ನಲ್ಲಿದೆ.

Ganesh - Malavika Nair
ಗಣೇಶ್ - ಮಾಳವಿಕ ನಾಯರ್ (ETV Bharat)

By ETV Bharat Karnataka Team

Published : Jul 27, 2024, 12:31 PM IST

ಸ್ಯಾಂಡಲ್​ವುಡ್​​ನ ಗೋಲ್ಡನ್ ಸ್ಟಾರ್ ಖ್ಯಾತಿಯ ಗಣೇಶ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ 'ಕೃಷ್ಣಂ ಪ್ರಣಯ ಸಖಿ'. ದಂಡುಪಾಳ್ಯ ಚಿತ್ರ ಖ್ಯಾತಿಯ ಶ್ರೀನಿವಾಸರಾಜು ಆ್ಯಕ್ಷನ್​ ಕಟ್​​ ಹೇಳಿರುವ ಈ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿದೆ. ಶೀಘ್ರದಲ್ಲೇ ರಿಲೀಸ್​ ಆಗಲಿರುವ ಚಿತ್ರದ ಪ್ರಚಾರ ಜೋರಾಗೇ ನಡೆಯುತ್ತಿದೆ. ಅಂದಹಾಗೇ, ಇತ್ತೀಚೆಗಷ್ಟೇ ಅನಾವರಣಗೊಂಡಿರುವ 'ದ್ವಾಪರ' ಸಾಂಗ್​​ ಟ್ರೆಂಡಿಂಗ್​​​ನಲ್ಲಿದೆ.

ಚಿತ್ರವೊಂದರ ಶೀರ್ಷಿಕೆ, ಪೋಸ್ಟರ್, ಗ್ಲಿಂಪ್ಸ್​, ಟೀಸರ್, ಟ್ರೇಲರ್, ಹಾಡುಗಳು ಪ್ರೇಕ್ಷಕರಿಗೆ ಆಮಂತ್ರಣವಿದ್ದಂತೆ. 'ಕೃಷ್ಣಂ ಪ್ರಣಯ ಸಖಿ' ತನ್ನ ಟೈಟಲ್​​ ಮೂಲಕವೇ ಸಖತ್​ ಸದ್ದು ಮಾಡಿದ ಸಿನಿಮಾ. ಹೆಸರೇ ಹೇಳುವಂತೆ ಇದೊಂದು ಪ್ರೇಮಕಥೆ, ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ. ಪ್ರೇಮ್​ಕಹಾನಿ ಸಿನಿಮಾಗಳಿಂದಲೇ ಗುರುತಿಸಿಕೊಂಡಿರುವ ಗಣಿ ಬಣ್ಣ ಹಚ್ಚಿರುವ ಹಿನ್ನೆಲೆ ಸಿನಿಮಾ ಮೇಲೆ ಅಭಿಮಾನಿಗಳು, ಸಿನಿಪ್ರಿಯರು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಬರುವ ತಿಂಗಳು ಬಿಡುಗಡೆ ಆಗಲಿರುವ ಚಿತ್ರದ ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ಸು ಕಂಡಿವೆ. ಅದರಲ್ಲೂ ಇತ್ತೀಚೆಗೆ ಬಿಡುಗಡೆ ಆಗಿರುವ 'ದ್ವಾಪರ' ಸಾಂಗ್​​ ಟ್ರೆಂಡಿಂಗ್​ನಲ್ಲಿದ್ದು, ಸ್ವತಃ ನಾಯಕ ನಟ ಗಣೇಶ್​ ಸಂತಸ ವ್ಯಕ್ತಪಡಿಸಿದ್ದಾರೆ.

'ಮೈ ಮ್ಯಾರೇಜ್ ಇಸ್ ಫಿಕ್ಸ್ಡ್' ಹಾಗೂ 'ಚಿನ್ನಮ್ಮ' ಹಾಡುಗಳು ಕೆಲ ದಿನಗಳ ಹಿಂದೆ ಅನಾವರಣಗೊಂಡಿದ್ದವು. ಇತ್ತೀಚೆಗೆ ಅಂದರೆ ಒಂದು ವಾರದ ಹಿಂದೆ ಬಿಡುಗಡೆ ಆಗಿರುವ 'ದ್ವಾಪರ' ಎಂಬ ಹಾಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹೆಚ್ಚಿನ ಸಂಖ್ಯೆಯ ಜನರ ಸ್ಟೇಟಸ್​, ಸ್ಟೋರಿ, ರೀಲ್ಸ್​ ಎಂದು ಟ್ರೆಂಡಿಂಗ್​ನಲ್ಲಿದೆ. ಹೀಗೆ ಕೆಲ ರೀಲ್ಸ್​​​ಗಳನ್ನು ಸಂಯೋಜಿಸಿ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಗಣಿ, ಹಾರ್ಟ್ ಸಿಂಬಲ್​ ಮೂಲಕ ಅಭಿಮಾನಿಗಳಿಗೆ ತಮ್ಮ ಧನ್ಯವಾದ ಅರ್ಪಿಸಿದ್ದಾರೆ. ಕೆಲ ದಿನಗಳ ಹಿಂದೆ ಹಾಡಿನ ಪ್ರೋಮೋ ಹಂಚಿಕೊಂಡಿದ್ದ ನಟ, ಈ ಸಾಂಗ್​ ಅನ್ನು ಮೆಚ್ಚಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಮಿಲಿಯನ್​​ಗಟ್ಟಲೆ ವೀಕ್ಷಣೆ ಕಂಡಿರುವ ಈ ಗಾಡಿನಲ್ಲಿ ಗಣೇಶ್​ ಜೊತೆ ಮಲಯಾಳಂ ನಟಿ ಮಾಳವಿಕ ನಾಯರ್ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:ರೇಣುಕಾಸ್ವಾಮಿ ಮನೆಗೆ ವಿನೋದ್​​ ರಾಜ್​​ ಭೇಟಿ, ಸಾಂತ್ವನ: 1 ಲಕ್ಷ ರೂ. ಚೆಕ್ ನೀಡಿದ ನಟ - Vinod Raj visits Renukaswamy House

'ಕೃಷ್ಣಂ ಪ್ರಣಯ ಸಖಿ' ಸಿನಿಮಾದಲ್ಲಿ ಒಟ್ಟು 6 ಹಾಡುಗಳಿದ್ದು, ಅರ್ಜುನ್ ಜನ್ಯ ಅವರು ಸಂಗೀತ ಒದಗಿಸಿದ್ದಾರೆ. ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ. ರುದ್ರಪ್ಪ ನಿರ್ಮಿಸಿರುವ ಈ ಚಿತ್ರ ಆಗಸ್ಟ್ 15 ರಂದು ಚಿತ್ರಮಂದಿರ ಪ್ರವೇಶಿಸಲಿದೆ. ಇದು ಗಣೇಶ್ ಅಭಿನಯದ 41ನೇ ಸಿನಿಮಾ ಆಗಿದ್ದು, ಸಾಧುಕೋಕಿಲ, ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಸೇರಿದಂತೆ ಹಲವರು ನಟಿಸಿದ್ದಾರೆ. ಸದ್ಯ 'ದ್ವಾಪರ' ಸಾಂಗ್​​ ಮೂಲಕ ಟ್ರೆಂಡಿಂಗ್​​​ನಲ್ಲಿರುವ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ವಿಕ್ಷಿಸಲು ಹೆಚ್ಚಿನ ಸಂಖ್ಯೆಯ ಸಿನಿಪ್ರಿಯರು ಮತ್ತು ಗಣೇಶ್​ ಅಭಿಮಾನಿಗಳು ಕಾತರರಾಗಿದ್ದಾರೆ.

ಇದನ್ನೂ ಓದಿ:ಮಿಥ್ಯ ಯಾಕಾಗಬಾರದು ಸತ್ಯ! ಕಾಮಿಡಿ ಶೋನಲ್ಲಿ ಪುನೀತ್​​ ಸ್ಮರಣೆ: ಒದ್ದೆಯಾಯ್ತು ಕನ್ನಡಿಗರ ಕಣ್ಣಾಲಿಗಳು - Puneeth Rajkumar

ABOUT THE AUTHOR

...view details