ಕರ್ನಾಟಕ

karnataka

ETV Bharat / entertainment

ಕೃಷ್ಣಂ ಪ್ರಣಯ ಸಖಿ: 9 ವಧು ಜೊತೆ ವರನ ಗೆಟಪ್​ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ - Krishnam Pranaya Sakhi - KRISHNAM PRANAYA SAKHI

'ಕೃಷ್ಣಂ ಪ್ರಣಯ ಸಖಿ' ಚಿತ್ರದ ಕುತೂಹಲಕಾರಿ ಪೋಸ್ಟರ್ ಅನಾವರಣಗೊಂಡಿದೆ.

Krishnam Pranaya Sakhi poster
ಕೃಷ್ಣಂ ಪ್ರಣಯ ಸಖಿ ಪೋಸ್ಟರ್

By ETV Bharat Karnataka Team

Published : Apr 9, 2024, 2:49 PM IST

'ಕೃಷ್ಣಂ ಪ್ರಣಯ ಸಖಿ' ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮುಂದಿನ ಬಹುನಿರೀಕ್ಷಿತ ಸಿನಿಮಾ. ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿರೋ 'ಕೃಷ್ಣಂ ಪ್ರಣಯ ಸಖಿ' ವಿಯೆಟ್ನಾಂನಲ್ಲಿ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

ಕೃಷ್ಣಂ ಪ್ರಣಯ ಸಖಿ ಪೋಸ್ಟರ್:ಇಂದು ನಾಡಿನೆಲ್ಲಡೆ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಂ ಪ್ರಣಯ ಸಖಿ ಚಿತ್ರದ ಹೊಸ ಪೋಸ್ಟರ್ ಅನ್ನು ಅನಾವರಣಗೊಳಿಸಲಾಗಿದೆ. ವಧು ಅವತಾರದಲ್ಲಿರುವ ಒಂಭತ್ತು ಚೆಲುವೆಯೊಂದಿಗೆ ಗಣೇಶ್ ವರನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ಸಿನಿಪ್ರಿಯರ ಗಮನ ಸೆಳೆದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.

ಗಣೇಶ್ 41ನೇ ಚಿತ್ರ:​​ 'ಕೃಷ್ಣಂ ಪ್ರಣಯ ಸಖಿ' ಗಣಿ ಅಭಿನಯಿಸುತ್ತಿರುವ 41ನೇ ಚಿತ್ರ. ಗಣೇಶ್ ಜೋಡಿಯಾಗಿ ಮಾಳವಿಕಾ ನಾಯರ್ ನಟಿಸಿದ್ದಾರೆ. ಶರಣ್ಯ ಶೆಟ್ಟಿ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನ, ಅಶೋಕ್, ರಾಮಕೃಷ್ಣ, ಶಿವಧ್ವಜ್, ರಘುರಾಮ್, ಮಾನಸಿ ಸುಧೀರ್, ಅಂಬುಜ, ಗಿರಿ ಶಿವಣ್ಣ ಸೇರಿದಂತೆ ಹಲವರು ಚಿತ್ರದ ತಾರಾ ಬಳಗದಲ್ಲಿದ್ದಾರೆ. ಬಹುತಾರಾಗಣ ಇರುವ ಹಿನ್ನೆಲೆ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

ಚಿತ್ರದಲ್ಲಿ ಐದು ಸುಮಧುರ ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ವೆಂಕಟ್ ಪ್ರಸಾದ್ ಛಾಯಾಗ್ರಹಣ ಹಾಗೂ ಕೆ.ಎಂ ಪ್ರಕಾಶ್ ಸಂಕಲನ ನಿರ್ವಹಿಸಿದ್ದಾರೆ. ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರವನ್ನು ತ್ರಿಶೂಲ್ ಎಂಟರ್​ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣ ಮಾಡುತ್ತಿದ್ದಾರೆ. ಈ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ 3ನೇ ಚಿತ್ರವಿದು. ಕನ್ನಡದ ಹಲವು ಯಶಸ್ವಿ ಚಿತ್ರಗಳ ನಿರ್ದೇಶಕ ಶ್ರೀನಿವಾಸರಾಜು ನಿರ್ದೇಶನವಿದೆ. ಟೈಟಲ್​ನಿಂದಲೇ ಟಾಕ್ ಆಗುತ್ತಿರುವ ಕೃಷ್ಣಂ ಪ್ರಣಯ ಸಖಿ ಶೀಘ್ರದಲ್ಲೇ ತೆರೆ ಅಪ್ಪಳಿಸಲಿದೆ.

ಇದನ್ನೂ ಓದಿ:ಯುಗಾದಿ ಹಬ್ಬಕ್ಕೆ ಡಾಲಿ ಸಿನಿಮಾ ಘೋಷಣೆ: ಶನಿವಾರ 'ಕೋಟಿ' ಟೀಸರ್ ರಿಲೀಸ್ - Koti Movie Teaser

ಗೋಲ್ಡನ್ ಸ್ಟಾರ್ ಗಣೇಶ್ ಸ್ಯಾಂಡಲ್​​ವುಡ್​ನಲ್ಲಿ ತಮ್ಮದೇ ಬೇಡಿಕೆ ಹೊಂದಿದ್ದಾರೆ. ಇವರ ಬಹುತೇಕ ಚಿತ್ರಗಳು ಹಿಟ್​ ಲಿಸ್ಟ್​​​ನಲ್ಲಿದೆ. ನಟ ಬಣ್ಣ ಹಚ್ಚಿರೋ ಬಹುತೇಕ ಚಿತ್ರಗಳು ಸಂಪೂರ್ಣ ಪ್ರೇಮಕಥೆಯೇ ಆಗಿದೆ. ಈ 'ಕೃಷ್ಣಂ ಪ್ರಣಯ ಸಖಿ' ಕೂಡ ರೊಮ್ಯಾಂಟಿಕ್ ಆಗಿರಲಿದೆ ಎಂಬುದು ಅಭಿಮಾನಿಗಳ ಅಭಿಪ್ರಾಯ. ಕಿರುತೆರೆ ಕಾರ್ಯಕ್ರಮಗಳ ಮೂಲಕ ಕಾಮಿಡಿ ಮಾಡುತ್ತಾ ಸ್ಟಾರ್ ಪಟ್ಟ ಅಲಂಕರಿಸಿರುವ ಗಣೇಶ ಅವರ ಮತ್ತಷ್ಟು ಸಿನಿಮಾಗಳು ಬರಲಿ ಅನ್ನೋದು ಕನ್ನಡಿಗರ ಹಾರೈಕೆ. ಸದ್ಯ 'ಕೃಷ್ಣಂ ಪ್ರಣಯ ಸಖಿ' ಸಿನಿಮಾದ ಜಪ ಮಾಡುತ್ತಿದ್ದು, ಎಷ್ಟರ ಮಟ್ಟಿಗೆ ಗೆಲ್ಲಲಿದೆ ಅನ್ನೋದು ಶೀಘ್ರದಲ್ಲೇ ಗೊತ್ತಾಗಲಿದೆ.

ಇದನ್ನೂ ಓದಿ:ಯಶಸ್ವಿ 25 ದಿನ ಪೂರೈಸಿದ 'ಬ್ಲಿಂಕ್': ನನ್ನ ಪಾಲಿಗೆ ಲಕ್ಕಿ ಸಿನಿಮಾ ಎಂದ ನಟಿ‌ ಚೈತ್ರಾ ಆಚಾರ್ - Blink Movie

ABOUT THE AUTHOR

...view details