ಕರ್ನಾಟಕ

karnataka

ETV Bharat / entertainment

Watch.. ಆಸ್ಪತ್ರೆ ತಲುಪಿದ ತುಂಬುಗರ್ಭಿಣಿ ದೀಪಿಕಾ ಪಡುಕೋಣೆ: ಹಾಸ್ಪಿಟಲ್​ನಲ್ಲಿದೆ ಕಂಪ್ಲೀಟ್​​ ಫ್ಯಾಮಿಲಿ - Deepika Padukone Reach Hospital - DEEPIKA PADUKONE REACH HOSPITAL

ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಭಾರತೀಯ ಚಿತ್ರರಂಗದ ಹೆಸರಾಂತ ತಾರಾ ದಂಪತಿ ದೀಪಿಕಾ ಪಡುಕೋಣೆ ಹಾಗೂ ರಣ್​ವೀರ್​​ ಸಿಂಗ್ ಇದೀಗ ಆಸ್ಪತ್ರೆ ತಲುಪಿದ್ದಾರೆ. ಪವರ್​ ಕಪಲ್​​ನ ಸಂಪೂರ್ಣ ಕುಟುಂಬ ಮುಂಬೈನ ಹೆಚ್​ ಎನ್​ ರಿಲಯನ್ಸ್ ಆಸ್ಪತ್ರೆಯಲ್ಲಿ ಅವರೊಂದಿಗಿದೆ. ಮಗು ಜನನದ ನಿರೀಕ್ಷೆಯಿದೆ.

Ranveer Singh - Deepika Padukone
ದೀಪಿಕಾ ಪಡುಕೋಣೆ - ರಣ್​ವೀರ್​ ಸಿಂಗ್ (ANI photo)

By ETV Bharat Karnataka Team

Published : Sep 7, 2024, 5:56 PM IST

Updated : Sep 7, 2024, 6:05 PM IST

ಭಾರತೀಯ ಚಿತ್ರರಂಗದ ಹೆಸರಾಂತ ತಾರಾ ದಂಪತಿ​ ರಣ್​​ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಶೀಘ್ರದಲ್ಲೇ ಪೋಷಕರಾಗಲಿದ್ದಾರೆ. ವರದಿಗಳ ಪ್ರಕಾರ ಇದೇ ಸೆಪ್ಟೆಂಬರ್ 28ಕ್ಕೆ ಡೆಲಿವರಿ ಡೇಟ್​ ಕೊಡಲಾಗಿತ್ತು. ಆದ್ರೆ ಇಂದೇ ದಂಪತಿ ಆಸ್ಪತ್ರೆ ತಲುಪಿದ್ದಾರೆ. ಅವರ ಜೊತೆಗೆ ಕುಟುಂಬಸ್ಥರೂ ಕಾಣಿಸಿಕೊಂಡಿದ್ದಾರೆ. ಹೌದು, ಸ್ಟಾರ್ ಕಪಲ್​ ಮತ್ತು ಅವರ ಕುಟುಂಬಸ್ಥರು ಮುಂಬೈನ ಹೆಚ್​.ಎನ್​ ರಿಲಯನ್ಸ್ ಆಸ್ಪತ್ರೆ ಬಳಿ ಕಾಣಿಸಿಕೊಂಡಿದ್ದಾರೆ. ಇದರ ಫೋಟೋ ವಿಡಿಯೋಗಳನ್ನು ಪಾಪರಾಜಿಗಳು ತಮ್ಮ ಅಧಿಕೃತ ಸೋಷಿಯಲ್​​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

ವರದಿಗಳ ಪ್ರಕಾರ, ವೈದ್ಯರು ಸೂಚಿಸಿರುವ ಹೆರಿಗೆ ದಿನಾಂಕ 2024ರ ಸೆಪ್ಟೆಂಬರ್​ 28. ಈ ತಿಂಗಳಾಂತ್ಯ ಮಗುವಿನ ಜನನ ಆಗಲಿದೆ ಎಂದು ಹೇಳಲಾಗಿತ್ತು. ಆದ್ರಿಂದು ತಾರಾ ದಂಪತಿ ತಮ್ಮ ಕುಟುಂಬ ಸಮೇತ ಆಸ್ಪತ್ರೆಗೆ ತೆರಳಿರುವ ಹಿನ್ನೆಲೆ, ಇಂದೇ ಹೆರಿಗೆಯಾಗುವ ಸಾಧ್ಯತೆ ಹೆಚ್ಚಿದೆ. ನಾರ್ಮಲ್​ ಚೆಕ್​ ಅಪ್​ ಆಗಿದ್ದರೆ ಗರ್ಭಿಣಿ ದೀಪಿಕಾ ಪಡುಕೋಣೆ ಅಥವಾ ದಂಪತಿ ಮಾತ್ರ ಬರುತ್ತಿದ್ದರು. ಇಡೀ ಕುಟುಂಬ ಆಗಮಿಸಿರುವ ಹಿನ್ನೆಲೆ ಹೆರಿಗೆಯಾಗುವ ಸಾಧ್ಯತೆಗಳಿವೆ ಎಂದು ಅಭಿಮಾನಿಗಳು ಅಂದಾಜಿಸಿದ್ದಾರೆ. ಯಾವುದಕ್ಕೂ ದಂಪತಿ ಅಧಿಕೃತ ಮಾಹಿತಿ ಹಂಚಿಕೊಂಡ ಬಳಿಕವೇ ಎಲ್ಲವೂ ಸ್ಪಷ್ಟವಾಗಲಿದೆ.

ಹೆರಿಗೆ ದಿನಾಂಕ ಸಮೀಪಿಸಿದ ಹಿನ್ನೆಲೆ ನಿನ್ನೆಯಷ್ಟೇ ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ದೀಪ್​ವೀರ್​​ ಮತ್ತು ತಾರಾ ಕುಟುಂಬ ಭೇಟಿ ಕೊಟ್ಟಿತ್ತು. ನಟ ನಟಿಯ ಜೊತೆಗೆ ಕುಟುಂಬಸ್ಥರು ಸಹ ಇದ್ದರು. ಹೆಸರಾಂತ ಕುಟುಂಬಕ್ಕೆ ಹೊಸ ಅತಿಥಿಯನ್ನು ಸ್ವಾಗತಿಸುವ ಮುನ್ನ ದೇವರ ಆಶೀರ್ವಾದ ಪಡೆದುಕೊಂಡಿದ್ದು, ಇದೀಗ ಆಸ್ಪತ್ರೆಯಲ್ಲಿದ್ದಾರೆ.

ಇದನ್ನೂ ಓದಿ:ಸೀರೆಯುಟ್ಟು ಸಿದ್ದಿವಿನಾಯಕ ದೇವಸ್ಥಾನಕ್ಕೆ ಬಂದ ತುಂಬು ಗರ್ಭಿಣಿ ದೀಪಿಕಾ: ನಟಿಯ ವಿಡಿಯೋ ನೋಡಿ - Deepika Padukone

2018ರಲ್ಲಿ ದಾಂಪತ್ಯ ಜೀವನ ಆರಂಭಿಸಿರುವ ರಣ್​​ವೀರ್​​ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರಿಗಿದು ಮೊದಲ ಮಗು. ಮದುವೆಯಾಗಿ ಆರು ವರ್ಷಗಳ ನಂತರ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆರು ವರ್ಷಗಳ ಕಾಲ ಡೇಟಿಂಗ್​​ ನಡೆಸಿದ್ದ ಪ್ರೇಮಪಕ್ಷಿಗಳು 2018ರಲ್ಲಿ ಇಟಲಿಯ ಲೇಕ್ ಕೋಮೋದಲ್ಲಿ ನಡೆದ ಅದ್ಧೂರಿ ಖಾಸಗಿ ಸಮಾರಂಭದಲ್ಲಿ ಹಾರ ಬದಲಾಯಿಸಿಕೊಂಡಿದ್ದರು. ನಂತರ ಮಾದರಿ ದಂಪತಿಯಾಗಿ ಗುರುತಿಸಿಕೊಂಡಿದ್ದಾರೆ.

2013ರಲ್ಲಿ ತೆರೆಕಂಡು ಸೂಪರ್ ಹಿಟ್​ ಆಗಿದ್ದ ಸಂಜಯ್ ಲೀಲಾ ಬನ್ಸಾಲಿ ಅವರ ಗೋಲಿಯೋನ್ ಕಿ ರಾಸ್ಲೀಲಾ ರಾಮ್-ಲೀಲಾ ಸಿನಿಮಾ ಸೆಟ್‌ನಲ್ಲಿ ಈ ಜೋಡಿ ಪ್ರೀತಿಸತೊಡಗಿತ್ತು. ನಂತರ ಬಾಜಿರಾವ್ ಮಸ್ತಾನಿ, ಪದ್ಮಾವತ್ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಹೀಗೆ ಸಿನಿಮಾಗಳಲ್ಲಿ ಪ್ರೇಮ ವ್ಯಕ್ತಪಡಿಸಿದ್ದ ಜೊಡಿಯೀಗ ನಿಜಜೀವನದಲ್ಲೂ ಫೇಮಸ್​ ಲವ್​ಬರ್ಡ್ಸ್​​​. ಇದೀಗ ಮತ್ತೊಮ್ಮೆ ರೋಹಿತ್ ಶೆಟ್ಟಿ ನಿರ್ದೇಶನದ ಸಿಂಗಂ ಎಗೇನ್​​ನಲ್ಲಿ ಕಾಣಿಸಿಕೊಳ್ಳಲಿದ್ದು, ಸಿನಿಪ್ರಿಯರು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.

ಇದನ್ನೂ ಓದಿ:ಮೊದಲ ದಿನ 126 ಕೊಟಿ ರೂ. ಕಲೆಕ್ಷನ್​ ಮಾಡಿದ್ದ ವಿಜಯ್ ನಟನೆಯ 'ಗೋಟ್'​​ ಎರಡನೇ ದಿನ ಗಳಿಸಿದ್ದೆಷ್ಟು? - Greatest of All Time Collection

ದೀಪಿಕಾ ಪಡುಕೋಣೆ ಪ್ರೆಗ್ನೆನ್ಸಿ ಅನೌನ್ಸ್​​ಮೆಂಟ್​​ ಬಳಿಕ ತಮ್ಮ ಗರ್ಭಾವಸ್ಥೆಯ ಹೆಚ್ಚು ಫೋಟೋಗಳನ್ನು ಹಂಚಿಕೊಂಡಿರಲಿಲ್ಲ. ಸಾರ್ವಜನಿಕವಾಗಿಯೂ ಹೆಚ್ಚು ಕಾಣಿಸಿಕೊಂಡಿರಲಿಲ್ಲ. ಆದ್ರೆ ಕಳೆದ ವಾರವಷ್ಟೇ ಬೋಲ್ಡ್​​ ಬೇಬಿ ಬಂಪ್​ ಫೋಟೋಶೂಟ್ ಅನ್ನು ಶೇರ್ ಮಾಡಿ ಸಖತ್​​ ಸದ್ದು ಮಾಡಿದ್ದರು. ತುಂಬು ಗರ್ಭಿಣಿಯಾಗಿರುವ ನಟಿಯ ಈ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿತ್ತು.

Last Updated : Sep 7, 2024, 6:05 PM IST

ABOUT THE AUTHOR

...view details