ವಿಭಿನ್ನ ಪೋಸ್ಟರ್ ಮೂಲಕ ಸಖತ್ ಸುದ್ದಿ ಮಾಡಿದ್ದ 'ಮಿಸ್ಟರ್ ರಾಣಿ' ಚಿತ್ರದ ಟೀಸರ್ ಇತ್ತೀಚೆಗೆ ರಿಲೀಸ್ ಆಗಿದೆ. ಸದ್ಯದ ಕ್ರೈಮ್, ಥ್ರಿಲ್ಲರ್, ಹಾರರ್, ಲವ್ ಸ್ಟೋರಿ ಎಲ್ಲವನ್ನೂ ಬದಿಗಿಟ್ಟು ವಿನೂತನ ಶೈಲಿಯ ಕಾಮಿಡಿ ಎಂಟರ್ಟೈನರ್ ಚಿತ್ರವನ್ನು 'ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ' ಖ್ಯಾತಿಯ ನಿರ್ದೇಶಕ ಮಧುಚಂದ್ರ ಮಾಡಿದ್ದಾರೆ.
ಲಕ್ಷ್ಮಿ ನಿವಾಸ ಸೀರಿಯಲ್ನಲ್ಲಿ ಜಯಂತ್ ಪಾತ್ರ ಮಾಡಿ ಸಿಕ್ಕಾಪಟ್ಟೆ ಫೇಮಸ್ ಆಗಿರುವ ದೀಪಕ್ ಸುಬ್ರಹ್ಮಣ್ಯ ಈ ಚಿತ್ರದ ಹೀರೋ(ಯಿನ್). ರಾಣಿ ರೋಲ್ ಮಾಡಿರೋದು ದೀಪಕ್ ಸುಬ್ರಹ್ಮಣ್ಯ ಅಂತ ಗೊತ್ತಾದಾಗ ತುಂಬಾ ಜನ ಶಾಕ್ ಆಗಿದ್ದಾರೆ. ಒಬ್ಬ ಹೊಸ ಹುಡುಗ ಈ ಲೆವೆಲ್ನಲ್ಲಿ ಹುಡುಗಿ ಥರ ಚೇಂಜ್ ಓವರ್ ಮಾಡೋಕೆ ಸಾಧ್ಯನಾ ಅಂತ ಎಲ್ಲರೂ ಅಚ್ಚರಿಪಟ್ಟಿದ್ದಾರೆ. ರಾಣಿ ಪೋಸ್ಟರ್ ನೋಡಿ ನಮಗೆ ಇನ್ನೊಬ್ಬಳು ಹೀರೋಯಿನ್ ಕಾಂಪಿಟೇಷನ್ ಮಾಡೋಕೆ ಬಂದಳಲ್ಲ ಅಂತ ತುಂಬಾ ಜನ ಹೀರೋಯಿನ್‌ಗಳು ಕೂಡ ಹೊಟ್ಟೆಯುರಿ ಪಟ್ಟುಕೊಂಡಿದ್ದರಂತೆ. ಆದರೆ ಟೀಸರ್ ನೋಡಿ ಅಯ್ಯೋ ರಾಣಿ ಹುಡುಗಿ ಅಲ್ಲ. ಹುಡುಗ ಅಂತ ಗೊತ್ತಾಗಿ ಬೆಸ್ತು ಬಿದ್ದಿದ್ದಾರೆ ಅಂತ ಗಾಸಿಪ್ ಇದೆ.