ಕರ್ನಾಟಕ

karnataka

ETV Bharat / entertainment

ಶಿವಣ್ಣನನ್ನು ಮದುವೆಗೆ ಆಹ್ವಾನಿಸಿದ ಡಾಲಿ ಧನಂಜಯ್​​ - ಧನ್ಯತಾ - DAALI DHANANJAY DHANYATA WEDDING

ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿರುವ ಡಾಲಿ ಧನಂಜಯ್​​ ಹಾಗೂ ಧನ್ಯತಾ ಹ್ಯಾಟ್ರಿಕ್​​ ಹೀರೋ ಶಿವರಾಜ್​​​ಕುಮಾರ್​ ಅವರನ್ನು ತಮ್ಮ ಮದುವೆಗೆ ಆಹ್ವಾನಿಸಿದ್ದಾರೆ.

Dhananjay invites Shivarajkumar
ಶಿವಣ್ಣನನ್ನು ಮದುವೆಗೆ ಆಹ್ವಾನಿಸಿದ ಡಾಲಿ ಧನಂಜಯ್​​, ಧನ್ಯತಾ (Photo: ETV Bharat)

By ETV Bharat Entertainment Team

Published : Dec 16, 2024, 3:45 PM IST

Updated : Dec 16, 2024, 5:31 PM IST

ಕನ್ನಡ ಚಿತ್ರರಂಗದ ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್​​ ಹಾಗೂ ಧನ್ಯತಾ ನಿಶ್ಚಿತಾರ್ಥ ಇತ್ತೀಚಿಗಷ್ಟೇ ಸರಳವಾಗಿ ನೆರವೇರಿತ್ತು. ಮದುವೆ ಸಿದ್ಧತೆಯಲ್ಲಿ ಬ್ಯುಸಿಯಾಗಿರೋ ಪ್ರೇಮಪಕ್ಷಿಗಳಿಂದು ಕರುನಾಡ ಚಕ್ರವರ್ತಿ ಖ್ಯಾತಿಯ ಶಿವರಾಜ್​​​ಕುಮಾರ್​ ಅವರನ್ನು ತಮ್ಮ ಮದುವೆಗೆ ಆಹ್ವಾನಿಸಿದ್ದಾರೆ.

ಶಿವಣ್ಣನನ್ನು ಅವರ ನಿವಾಸದಲ್ಲಿ ಭೇಟಿಯಾದ ಜೋಡಿ, ತಮ್ಮ ಮದುವೆಗೆ ಖ್ಯಾತ ನಟನನ್ನು ಆಹ್ಬಾನಿಸಿದ್ದಾರೆ. ಸೆಂಚುರಿ ಸ್ಟಾರ್​ ಜೊತೆ ಉತ್ತಮ ಕ್ಷಣ ಕಳೆದಿದ್ದಾರೆ.

ಡಾಲಿ ಧನಂಜಯ್​​ ಹಾಗೂ ಧನ್ಯತಾ ಮದುವೆ ಆಮಂತ್ರಣ ಪತ್ರಿಕೆ (ETV Bharat)

ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ವಿಶೇಷ ಪೂಜೆ:ಡಾಲಿ ಧನ್ಯತಾ ಇತ್ತೀಚೆಗಷ್ಟೇ ತಮ್ಮ ವಿವಾಹದ ಆಮಂತ್ರಣ ಪತ್ರಿಕೆಯ ಪೂಜೆ ಮಾಡಿಸುವ ಮೂಲಕ ಮದುವೆಗೆ ಸಂಬಂಧಿಸಿದ ಕೆಲಸಗಳನ್ನು ಶುರು ಮಾಡಿದ್ದಾರೆ. ಡಾಲಿ ಯಾವುದೇ ಸಿನಿಮಾ ಕೆಲಸಗಳನ್ನು ಶುರು ಮಾಡುವ ಮೊದಲು ಬಂಡೆ ಮಹಾಕಾಳಿ ದೇವಿಯ ಆಶೀರ್ವಾದ ಪಡೆಯುತ್ತಾರೆ. ಅದರಂತೆ, ತಮ್ಮ ಮದುವೆ ಕಾರ್ಯ ಶುರು ಮಾಡುವ ಮೊದಲು ತಮ್ಮ ಭಾವಿ ಪತ್ನಿ ಧನ್ಯತಾ ಅವರ ಜೊತೆ ದೇವಸ್ಥಾನಕ್ಕೆ ಭೇಟಿ ಕೊಟ್ಟು ಮದುವೆ ಆಮಂತ್ರಣ ಪತ್ರಿಕೆಗೆ ಪೂಜೆ ಮಾಡಿಸಿ, ದೇವಿಯ ಆಶೀರ್ವಾದ ಪಡೆದಿದ್ದಾರೆ.

ಶಿವಣ್ಣನ ನಿವಾಸದಲ್ಲಿ ಭಾವಿ ದಂಪತಿ (Photo: ETV Bharat)

ಅಂಚೆ ಪತ್ರದ ಥೀಮ್​ನಲ್ಲಿ ಇನ್ವಿಟೇಷನ್​​: ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ವಿಭಿನ್ನವಾಗಿ ಡಿಸೈನ್‌ ಮಾಡಿಸಬೇಕು ಅನ್ನೋ ಆಲೋಚನೆಯಲ್ಲಿ ಇರುತ್ತಾರೆ. ಇನ್ನು, ಸಿನಿಮಾ ಸ್ಟಾರ್ಸ್ ಸದಾ ಕ್ರಿಯೇಟಿವ್‌ ಆಗಿಯೇ ಯೋಚನೆ ಮಾಡುತ್ತಾರೆ. ಅದರಂತೆ ಡಾಲಿ ತಮ್ಮ ಮದುವೆ ಇನ್ವಿಟೇಷನ್‌ ಅನ್ನು ಸಖತ್ತಾಗೆ ಪ್ಲಾನ್​​​ ಮಾಡಿದ್ದಾರೆ. ಓಲ್ಡ್‌ ಇಸ್‌ ಗೋಲ್ಡ್‌ ಥೀಮ್​ನಲ್ಲಿ ಅಂದರೆ ಅಂಚೆ ಪತ್ರದಲ್ಲಿ ತಮ್ಮ ಮದುವೆ ಆಮಂತ್ರಣವನ್ನು ತಾವೇ ಖುದ್ದಾಗಿ ಬರೆದು ಪ್ರಿಂಟ್‌ ಮಾಡಿಸಿದ್ದಾರೆ. ಡಾಲಿ ಧನಂಜಯ್‌ ಅವರು ಕವಿತೆ, ಹಾಡುಗಳನ್ನು ಅದ್ಭುತವಾಗಿ ಬರೆಯುತ್ತಾರೆ. ಅದೇ ರೀತಿ ತಮ್ಮ ಮದುವೆ ಆಮಂತ್ರಣ ಪತ್ರವನ್ನು ಸಹ ಬಹಳ ವಿಶೇಷವಾಗಿ ಬರೆದಿದ್ದಾರೆ.

ಸಿಎಂಗೆ ಮೊದಲ ಆಮಂತ್ರಣ: ಪೂಜೆ ಮಾಡಿಸಿದ ನಂತರ ಮದುವೆಯ ಮೊದಲ ಆಮಂತ್ರಣ ಪತ್ರಿಕೆಯನ್ನು ರಾಜ್ಯದ ಸಿಎಂ ಸಿದ್ದರಾಮಯ್ಯ ಅವರಿಗೆ ನೀಡಿ ಡಾಲಿ ಮತ್ತು ಧನ್ಯತಾ ಆಶೀರ್ವಾದ ಪಡೆದಿದ್ದಾರೆ. ಡಾಲಿ ಸಿನಿಮಾ ಕ್ಷೇತ್ರದಲ್ಲಿದ್ದರೂ ರಾಜಕೀಯ ಗಣ್ಯರ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ಸಿಎಂ ಮಾತ್ರವಲ್ಲದೇ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರಿಗೂ ಕೂಡ ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ನೀಡಿ ಆಶೀರ್ವಾದ ಪಡೆದಿದ್ದಾರೆ. ದೇವೇಗೌಡರನ್ನು ಸಹ ಭೇಟಿ ಮಾಡಿ ಪತ್ರಿಕೆ ನೀಡಲಿದ್ದಾರೆ.

ಸಿಎಂ ಟ್ವೀಟ್: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾವಿ ದಂಪತಿ ಜೊತೆಗಿನ ಫೋಟೋ ಹಂಚಿಕೊಂಡು, ''ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ ಅವರು ತಮ್ಮ ಮದುವೆಯ ಕರೆಯೋಲೆ ನೀಡಿ, ಆಹ್ವಾನಿಸಿದರು. ಹೊಸ ಬದುಕಿಗೆ ಮುಂದಡಿಯಿಡುತ್ತಿರುವ ಜೋಡಿಗೆ ಶುಭ ಹಾರೈಸಿದೆ'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:'ದೇಹಕ್ಕೆ ಆರೋಗ್ಯ ಇದ್ದಾಗ ಪ್ರೀತಿ, ಅನಾರೋಗ್ಯಗೊಂಡಾಗ ಕೋಪ; ಇದು ದೇಶಕ್ಕೂ ಅನ್ವಯ': ಉಪೇಂದ್ರ

ಫೆಬ್ರವರಿ 16 ರಂದು ಡಾಲಿ ಧನಂಜಯ್​ ಅವರ ಮದುವೆ ಮೈಸೂರಿನ ಅಂಬಾವಿಲಾಸ ಅರಮನೆಯ ಮುಂಭಾಗದ ವಸ್ತು ಪ್ರದರ್ಶನ ಮೈದಾನದಲ್ಲಿ ನಡೆಯಲಿದೆ. ಶನಿವಾರ ಆರತಕ್ಷತೆ, ಭಾನುವಾರ ವಿವಾಹ ನೆರವೇರಲಿದೆ.

ಇದನ್ನೂ ಓದಿ:ಹುಸಿಯಾಯ್ತು ಅಭಿಮಾನಿಗಳ ನಿರೀಕ್ಷೆ! 2024ರಲ್ಲಿ ಸಿನಿಮಾ ಮಾಡದ ಸ್ಯಾಂಡಲ್​​ವುಡ್​ ಸೂಪರ್​​ಸ್ಟಾರ್​ಗಳಿವರು

ಪತ್ರಿಕೆ ಹಂಚಲು ಶುರು ಮಾಡಿದ್ದು, ಮದುವೆಗೆ ಕೇವಲ ಸಿನಿಗಣ್ಯರು ಮಾತ್ರವಲ್ಲದೇ ರಾಜಕೀಯ ಗಣ್ಯರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.

Last Updated : Dec 16, 2024, 5:31 PM IST

ABOUT THE AUTHOR

...view details