ಕರ್ನಾಟಕ

karnataka

ETV Bharat / entertainment

'ಅರ್ಜುನ್​ ಕಪೂರ್​ ಮನಸ್ಸನ್ನು ಸಲ್ಮಾನ್​​ ಅರ್ಥಮಾಡಿಕೊಂಡಿದ್ದರು': ವಿವಾದದ ನಡುವೆ ಬೋನಿ ಕಪೂರ್ ಹೇಳಿಕೆ - Salman Arjun Rift - SALMAN ARJUN RIFT

ಸಂದರ್ಶನವೊಂದರಲ್ಲಿ ನಿರ್ಮಾಪಕ ಬೋನಿ ಕಪೂರ್, ಮಗ ಅರ್ಜುನ್​ ಕಪೂರ್​ ಹಾಗೂ ಸೂಪರ್ ಸ್ಟಾರ್ ಸಲ್ಮಾನ್​ ಖಾನ್​ ಬಗ್ಗೆ ಮಾತನಾಡಿದ್ದಾರೆ.

Boney Kapoor talks about Arjun Kapoor and Salman Khan's rift
ಅರ್ಜುನ್​ ಕಪೂರ್​ ಬೆಳವಣಿಗೆಯಲ್ಲಿ ಸಲ್ಮಾನ್​​ ಸಹಾಯವಿದೆ: ವಿವಾದದ ನಡುವೆ ಬೋನಿ ಕಪೂರ್ ಹೇಳಿಕೆ

By ETV Bharat Karnataka Team

Published : Apr 2, 2024, 6:58 PM IST

ಬೋನಿ ಕಪೂರ್ ನಿರ್ಮಾಣದ ಮುಂದಿನ ಚಿತ್ರ ಮೈದಾನ್​​. ಬಿಡುಗಡೆಗೆ ಸಜ್ಜಾಗಿರೋ ಈ ಸಿನಿಮಾದ ಅಧಿಕೃತ ಫೈನಲ್​​ ಟ್ರೇಲರ್ ಇಂದು ಅನಾವರಣಗೊಂಡಿತು. ಈ ಮೂಲಕ ಸಿನಿಮಾದ ಪ್ರಚಾರವೂ ಪ್ರಾರಂಭವಾಗಿದೆ.

ಸಂದರ್ಶನವೊಂದರಲ್ಲಿ ಬೋನಿ ಕಪೂರ್, ಪುತ್ರ ಅರ್ಜುನ್ ಕಪೂರ್ ಮತ್ತು ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಡುವಿನ ಬಿರುಕಿನ ಬಗ್ಗೆ ಮಾತನಾಡಿದ್ದಾರೆ. ಸಲ್ಮಾನ್ ಮತ್ತು ಅರ್ಜುನ್ ನಡುವಿನ ಮೌನದಿಂದಾಗಿ ಸೂಪರ್‌ ಸ್ಟಾರ್‌ ಸಲ್ಲು ಜತೆಗಿನ ತಮ್ಮ ಬಾಂಧವ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಬೋನಿ ಬಹಿರಂಗಪಡಿಸಿದರು. ಹಲವು ವರ್ಷಗಳಿಂದ ವಿವಿಧ ವಿಚಾರವಾಗಿ ಸಲ್ಮಾನ್ ಮತ್ತು ಅರ್ಜುನ್ ನಡುವೆ ಮನಸ್ತಾಪಗಳಿರುವುದು ನಿಮಗೆ ತಿಳಿದಿರುವ ವಿಚಾರವೇ.

ಡಿಜಿಟಲ್ ಪ್ಲಾಟ್‌ಫಾರ್ಮ್‌ ಒಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ, ಅರ್ಜುನ್ ಮತ್ತು ಸಲ್ಮಾನ್ ನಡುವಿನ ಬಿರುಕನ್ನು ಬೋನಿ ಕಪೂರ್ ಖಚಿತಪಡಿಸಿದ್ದಾರೆ. ಮನಸ್ತಾಪಗಳ ಹೊರತಾಗಿಯೂ, ಸಲ್ಮಾನ್ ಜತೆಗಿನ ತಮ್ಮ ಬಾಂಧವ್ಯ ಹಾಗೇ ಉಳಿದಿದೆ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಅರ್ಜುನ್‌ನ ವೃತ್ತಿಜೀವನದ ಮೇಲೂ ಸಲ್ಮಾನ್​​ ಉತ್ತಮ ಪ್ರಭಾವ ಬೀರಿದ್ದಾರೆಂಬುದನ್ನು ಖಚಿತಪಡಿಸಿದರು. ಮಗನ ನಟನಾ ಪ್ರಯಾಣ ರೂಪಿಸುವಲ್ಲಿ ಸಲ್ಮಾನ್‌ ಅವರ ಪ್ರಮುಖ ಪಾತ್ರವನ್ನು ಈ ಸಂದರ್ಶನದಲ್ಲಿ ಬೋನಿ ನೆನಪಿಸಿಕೊಂಡರು.

ಹಿಂದಿನ ದಿನಗಳನ್ನು ನೆನಪಿಸಿಕೊಂಡ ನಿರ್ಮಾಪಕ, "ನಾನು ಮೋನಾ (ಮೊದಲ ಪತ್ನಿ)ರಿಂದ ಬೇರ್ಪಟ್ಟ ನಂತರ ಮಗ ಅರ್ಜುನ್ ನಟನೆಯನ್ನು ಮುಂದುವರಿಸುತ್ತಾನೆ ಎಂದು ಯೋಚಿಸಿರಲಿಲ್ಲ. ಆ ಸಂದರ್ಭ ಸಲ್ಮಾನ್ ನನಗೆ ಭರವಸೆ ನೀಡಿದರು. ಅರ್ಜುನ್ ನಟನಾಗಬೇಕೆಂದು ಬಯಸಿದ್ದಾನೆಂಬುದು ನನ್ನ ತಲೆಯಲ್ಲಿರಲಿಲ್ಲ. ಆದ್ರೆ ಸಲ್ಮಾನ್ ಈ ವಿಚಾರವನ್ನು ನನ್ನ ಅರಿವಿಗೆ ತಂದರು. ಬೋನಿ ಸರ್, ಅರ್ಜುನ್​​ ನಟರಾಗುತ್ತಾರೆ. ಅವರಲ್ಲಿ ಆ ಕಲೆ ಇದೆ. ತಮ್ಮನ್ನು ನಟನಾಗಿ ರೂಪಿಸಿಕೊಳ್ಳಲಿದ್ದಾರೆ'' ಎಂದು ತಿಳಿಸಿದರು.

ಇದನ್ನೂ ಓದಿ:ಏ.8ಕ್ಕೆ 'ಪುಷ್ಪ 2' ಟೀಸರ್: ಕುತೂಹಲ ಕೆರಳಿಸಿದ ಗೆಜ್ಜೆ ತೊಟ್ಟ ಅಲ್ಲು ಅರ್ಜುನ್ ಪೋಸ್ಟರ್ - Pushpa 2 Teaser

ಅರ್ಜುನ್ ಮತ್ತು ಸಲ್ಮಾನ್ ನಡುವಿನ ಮನಸ್ತಾಪ ನಿಮ್ಮ ಮೇಲೆ ಪರಿಣಾಮ ಬೀರಿದೆಯೇ ಎಂಬ ಪ್ರಶ್ನೆ ಎದುರಾಯಿತು. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೋನಿ, ಇಲ್ಲ. ನನ್ನ ಮತ್ತು ಸಲ್ಮಾನ್​​ ನಡುವಿನ ಬಾಂಧವ್ಯ ಉತ್ತಮವಾಗೆಯೇ ಇದೆ ಎಂದು ಸ್ಪಷ್ಟಪಡಿಸಿದರು. ನಾನು ಸಲ್ಮಾನ್​ನನ್ನು ಪ್ರೀತಿಸುತ್ತೇನೆ. ಅವರಂತೆ ಕೆಲವೇ ಕೆಲವರು ಇದ್ದಾರೆಂದು ನಾನು ಭಾವಿಸುತ್ತೇನೆ. ದೊಡ್ಡ ಮನಸ್ಸು, ಆತ್ಮೀಯರು, ನಾವು ಭೇಟಿಯಾದಾಗಲೆಲ್ಲಾ ಪರಸ್ಪರ ಪ್ರೀತಿಯಿಂದ ಮಾತನಾಡುತ್ತೇವೆ. ಅವರು ನನಗೆ ಬಹಳ ಗೌರವ ಕೊಡುತ್ತಾರೆ ಮತ್ತು ನಾನು ಅವರನ್ನು ಪ್ರೀತಿಸುತ್ತೇನೆ ಎಂದರು.

ಇದನ್ನೂ ಓದಿ:ಕಮಲ್ ಹಾಸನ್​ 'ಥಗ್ ಲೈಫ್‌': ಜಯಂ ರವಿ ಬದಲು ಅರವಿಂದ್ ಸ್ವಾಮಿ ನಟನೆ? - Thug Life

ಇನ್ನು ಅರ್ಜುನ್ ಕಪೂರ್ ಅವರ ವೈಯಕ್ತಿಕ ಜೀವನವೂ ನೆಟ್ಟಿಗರ ಗಮನ ಸೆಳೆದಿದೆ. ನಟಿ-ಡ್ಯಾನ್ಸರ್ ಮಲೈಕಾ ಅರೋರಾ ಅವರೊಂದಿಗೆ ರಿಲೇಶನ್​​​ಶಿಪ್​ನಲ್ಲಿದ್ದಾರೆ. ಮಲೈಕಾ, ಸಲ್ಮಾನ್ ಸಹೋದರ ಅರ್ಬಾಜ್ ಖಾನ್ ಅವರಿಂದ ವಿಚ್ಛೇದನ ಪಡೆದಿರೋದು ಹೊಸ ವಿಚಾರವಲ್ಲ. ಮತ್ತೊಂದೆಡೆ ಅರ್ಜುನ್, ಸಲ್ಮಾನ್ ಅವರ ಸಹೋದರಿ ಅರ್ಪಿತಾ ಖಾನ್ ಅವರೊಂದಿಗೆ ಸಂಬಂಧ ಹೊಂದಿದ್ದರೆಂಬುದು ಬಹಳ ಹಳೇ ವಿಷಯ. 2005ರಲ್ಲಿ ಇದು ಕೊನೆಗೊಂಡಿತು ಎಂದು ವರದಿಯಾಗಿದೆ. ನಂತರ ಅರ್ಪಿತಾ ಅವರು ನಟ ಆಯುಷ್ ಶರ್ಮಾ ಅವರನ್ನು ಮದುವೆ ಆಗಿದ್ದು, ಈ ದಂಪತಿಗೀಗ ಇಬ್ಬರು ಮಕ್ಕಳಿದ್ದಾರೆ. ಅರ್ಜುನ್ ಮತ್ತು ಮಲೈಕಾ ಸುಮಾರು ಐದು ವರ್ಷಗಳಿಂದ ಡೇಟಿಂಗ್​​ನಲ್ಲಿದ್ದಾರೆ. ಮಲೈಕಾ ಅವರಿಂದ ವಿಚ್ಛೇದನ ಪಡೆದಿರೋ ಅರ್ಬಾಜ್ ಖಾನ್ ಇತ್ತೀಚೆಗಷ್ಟೇ ಶುರಾ ಖಾನ್​ ಅವರನ್ನು ಮದುವೆಯಾಗಿದ್ದಾರೆ.

ABOUT THE AUTHOR

...view details