ಕರ್ನಾಟಕ

karnataka

ETV Bharat / entertainment

'ಬ್ಯಾಕ್​ ಬೆಂಚರ್​​' ಮಾನ್ಯ ಗೌಡ: 700 ಸ್ಪರ್ಧಿಗಳ ಪೈಕಿ ಸಿನಿಮಾಗೆ ಆಯ್ಕೆಯಾದ ಪ್ರತಿಭೆ! - Manya Gowda - MANYA GOWDA

'ಬ್ಯಾಕ್‍ ಬೆಂಚರ್ಸ್' ಆಡಿಷನ್‍ನಲ್ಲಿ ಭಾಗಿಯಾಗಿದ್ದ 700 ಯುವಕ-ಯುವತಿಯರ ಪೈಕಿ ಆಯ್ಕೆಯಾದ ಮಾನ್ಯ ಗೌಡ, ತಮ್ಮ ಸಿನಿಮಾ ಅನುಭವ ಹೇಳಿದರು.

Manya Gowda
ನಟಿ ಮಾನ್ಯ ಗೌಡ (ETV Bharat)

By ETV Bharat Karnataka Team

Published : Jul 19, 2024, 1:13 PM IST

ಸಿನಿಮಾ ಎಂಬ ಬಣ್ಣದ ಲೋಕಕ್ಕೆ ಹೊಸ ನಟ-ನಟಿಯರ ಆಗಮನ ಮುಂದುವರಿದಿದೆ. ರಾಜಶೇಖರ್ ನಿರ್ಮಿಸಿ-ನಿರ್ದೇಶಿಸಿರುವ 'ಬ್ಯಾಕ್‍ ಬೆಂಚರ್ಸ್' ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಈ ಚಿತ್ರದ ಮೂಲಕ ರಂಜನ್, ಜತಿನ್ ಆರ್ಯನ್, ಆಕಾಶ್ ಎಂ.ಪಿ, ಶಶಾಂಕ್ ಸಿಂಹ, ಕುಂಕುಮ್‍, ಅನುಷಾ ಸುರೇಶ್, ವಿಯೋಮಿ ವನಿತಾ ಸೇರಿದಂತೆ ಹಲವು ಯುವ ಪ್ರತಿಭೆಗಳು ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ. ಈ ಪೈಕಿ ಮಾನ್ಯ ಗೌಡ ಸಹ ಒಬ್ಬರು.

ಇಂಜಿನಿಯರಿಂಗ್‍ ಮುಗಿಸಿರುವ ಮಾನ್ಯ ಅವರೀಗ 'ಬ್ಯಾಕ್‍ ಬೆಂಚರ್ಸ್' ನಾಯಕಿಯರಲ್ಲೊಬ್ಬರು. ಮಾಯ ಎಂಬ ಪಾತ್ರ ನಿರ್ವಹಿಸಿರುವ ಇವರು, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ನಟಿ ಮಾನ್ಯ ಗೌಡ (ETV Bharat)

ತಮ್ಮ ಚಿತ್ರದ ಕುರಿತು 'ಈಟಿವಿ ಭಾರತ'ದ ಜೊತೆ ಮಾತನಾಡಿರುವ ಮಾನ್ಯ ಗೌಡ, "ಮೂಲತಃ ನಾನು ಬೆಂಗಳೂರಿನ ಹುಡುಗಿ. ಮೂರು ವರ್ಷಗಳ ಹಿಂದೆ ಇಂಜಿನಿಯರಿಂಗ್‍ ಪೂರ್ಣಗೊಳಿಸಿದ್ದೇನೆ. ಬಾಲ್ಯದಿಂದಲೂ ನಟನೆ ಬಗ್ಗೆ ಬಹಳ ಆಸಕ್ತಿ. ಶಾಸ್ತ್ರೀಯ ನೃತ್ಯ ಕಲಿತಿದ್ದೇನೆ. ರಂಗಭೂಮಿಯಲ್ಲಿಯೂ ಸಕ್ರಿಯವಾಗಿದ್ದೆ. ಹೀಗಿರುವಾಗಲೇ 'ಬ್ಯಾಕ್‍ ಬೆಂಚರ್ಸ್' ಚಿತ್ರಕ್ಕೆ ಆಡಿಷನ್‍ ಆಗುತ್ತಿರುವ ವಿಷಯ ತಿಳಿಯಿತು".

"ನಂತರ, ಆಡಿಷನ್‍ನಲ್ಲಿ ಭಾಗವಹಿಸಿದ್ದೆ. ಇದರಲ್ಲಿ ಸುಮಾರು 700 ಯುವಕ-ಯುವತಿಯರು ಭಾಗವಹಿಸಿದ್ದರು. ನಿರ್ದೇಶಕರು ಕೊಟ್ಟ ಕೆಲವು ದೃಶ್ಯಗಳನ್ನು ನಾನು ನನ್ನದೇ ರೀತಿಯಲ್ಲಿ ಅಭಿನಯಿಸಿ ತೋರಿಸಿದೆ. ಅಷ್ಟೊಂದು ಜನರ ಮಧ್ಯೆ ಆಯ್ಕೆಯಾಗುತ್ತೇನೋ? ಇಲ್ಲವೋ? ಎಂಬ ಅನುಮಾನವಿತ್ತು. ಅಂತಿಮವಾಗಿ ಚಿತ್ರತಂಡಕ್ಕ ಆಯ್ಕೆಯಾದ 30 ಜನರಲ್ಲಿ ನಾನೂ ಒಬ್ಬಳಾಗಿದ್ದೆ" ಎಂದು ತಿಳಿಸಿದರು.

ಇದನ್ನೂ ಓದಿ:ಅನು ಪ್ರಭಾಕರ್ 'ಹಗ್ಗ' ಸಿನಿಮಾಗೆ ನಿರ್ದೇಶಕ ಆರ್ ಚಂದ್ರು ಸಾಥ್; ಟೀಸರ್ ರಿಲೀಸ್ - Hagga Teaser

"ಆಡಿಷನ್‍ ಮುಗಿದ ಮೇಲೆ ನಟ ಹಾಗೂ ನಿರ್ದೇಶಕ ಸುಚೇಂದ್ರ ಪ್ರಸಾದ್‍, ಆಯ್ಕೆಯಾದ 30 ಜನರಿಗಾಗಿ ಒಂದು ಕಾರ್ಯಾಗಾರ ಇಟ್ಟುಕೊಂಡಿದ್ದರು. ಅದರಲ್ಲಿ ನಟನೆ ಕುರಿತು ಹಲವು ವಿಷಯಗಳನ್ನು ಹೇಳಿಕೊಟ್ಟಿದ್ದಾರೆ. ಆ ನಂತರ ಆರು ತಿಂಗಳ ಕಾಲ ಸಾಕಷ್ಟು ರಿಹರ್ಸಲ್‍ ಮಾಡಿ, ನಂತರ ಚಿತ್ರತಂಡ ಚಿತ್ರೀಕರಣಕ್ಕೆ ಹೊರಟಿತು."

"ಚಿತ್ರೀಕರಣದ ಅನುಭವ ಮರೆಯಲಾಗದ್ದು. ನಾನು ಹೊಸಬಳು. ಹಾಗಾಗಿ ಸಹಜವಾಗಿಯೇ ನರ್ವಸ್‍ ಆಗಿದ್ದೆ. ಆದರೆ, ನಮ್ಮ ನಿರ್ದೇಶಕರಾದ ರಾಜಶೇಖರ್ ಮತ್ತು ಛಾಯಾಗ್ರಾಹಕ ಮನೋಹರ್ ಜೋಷಿ ನನಗೂ ಸೇರಿದಂತೆ ಎಲ್ಲರಿಗೂ ಬಹಳ ಚೆನ್ನಾಗಿ ಗೈಡ್‍ ಮಾಡಿದ್ದಾರೆ. ನನಗೆ ತುಂಬಾ ಚೆನ್ನಾಗಿ ಹೇಳಿಕೊಟ್ಟಿರುವುದಷ್ಟೇ ಅಲ್ಲ, ನನ್ನನ್ನು ಬಹಳ ಚೆನ್ನಾಗಿ ತೆರೆಯ ಮೇಲೆ ತೋರಿಸಿದ್ದಾರೆ. ನಟನೆ ಅಷ್ಟೇ ಅಲ್ಲ, ಚಿತ್ರದ ಪೋಸ್ಟ್ ಪ್ರೊಡಕ್ಷನ್‍ ಮತ್ತು ಮಾರ್ಕೆಟಿಂಗ್‍ ವಿಭಾಗಗಳಲ್ಲೂ ನನ್ನನ್ನು ತೊಡಗಿಸಿಕೊಂಡಿದ್ದೇನೆ. ಒಟ್ಟಾರೆ ಈ ಚಿತ್ರದ ಮೂಲಕ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ಅವರಿಗೆ ನಾನು ಸದಾ ಋಣಿ" ಎಂದು ತಿಳಿಸಿದರು.

ಇದನ್ನೂ ಓದಿ:ಟ್ರೇಲರ್ ಇಲ್ಲ, ಡೈರೆಕ್ಟ್ ಸಿನಿಮಾ ಬಿಡುಗಡೆ: ಇದು ಗೋಲ್ಡನ್ ಸ್ಟಾರ್ ಗಣಿ ಸೂತ್ರ - Krishnam Pranaya Sakhi

ತಮ್ಮ ಪಾತ್ರ ಬಗ್ಗೆ ಮಾತನಾಡಿದ ಮಾನ್ಯ, "ಚಿತ್ರದಲ್ಲಿ 4 ಪ್ರಮುಖ ನಾಯಕಿಯರ ಪಾತ್ರವಿದೆ. ರಿಹರ್ಸಲ್‍ ಸಮಯದಲ್ಲಿ ಈ ನಾಲ್ಕೂ ಪಾತ್ರಗಳನ್ನು ಮಾಡಿದ್ದೆ. ಅದರಲ್ಲಿ ನನಗೆ ಮಾಯ ಪಾತ್ರ ಬಹಳ ಇಷ್ಟವಾದ ಪಾತ್ರ. ಈ ಪಾತ್ರ ನನಗೆ ಸೂಟ್‍ ಆಗುತ್ತದೆ, ನಾನಿದನ್ನು ನಿಭಾಯಿಸಬಲ್ಲೆ ಎಂಬ ನಂಬಿಕೆಯಿಂದ ಈ ಪಾತ್ರ ಕೊಟ್ಟಿದ್ದಾರೆ. ನಾನಿಲ್ಲಿ ಬಜಾರಿಯಾಗಿ ಕಾಣಿಸಿಕೊಂಡಿದ್ದೇನೆ. ಬಹಳ ಬೋಲ್ಡ್ ಪಾತ್ರ. ನನಗಿಷ್ಟವಾದ ಪಾತ್ರ ಸಿಕ್ಕ ಖುಷಿ ಇದೆ. ಅದು ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾನ್ಯ, ಮಾನ್ಸೂನ್ ರಾಗ ಮತ್ತು ವೀರಂ ಚಿತ್ರಗಳಲ್ಲೂ ನಟಿಸಿದ್ದಾರೆ. ಈ ಮಧ್ಯೆ, ಒಂದಿಷ್ಟು ಪಾತ್ರಗಳು ಹುಡುಕಿಕೊಂಡು ಬರುತ್ತಿದ್ದು, 'ಬ್ಯಾಕ್‍ ಬೆಂಚರ್ಸ್‍' ಯಶಸ್ಸಿನ ಮೇಲೆ ಮುಂದಿನ ಸಿನಿಮಾ ಯಾವುದೆಂದು ಡಿಸೈಡ್ ಮಾಡುತ್ತೇನೆಂದು ತಿಳಿಸಿದ್ದಾರೆ.

ABOUT THE AUTHOR

...view details