ಕರ್ನಾಟಕ

karnataka

ETV Bharat / entertainment

ಅಮಿತಾಭ್​​ ಬಚ್ಚನ್ ವೃತ್ತಿಜೀವನಕ್ಕೆ 55 ವರ್ಷಗಳ ಸಂಭ್ರಮ; ಪ್ರಯಾಣ ಪ್ರತಿನಿಧಿಸುವ 'ಎಐ' ಫೋಟೋ ಶೇರ್ - ಅಮಿತಾಭ್​​ ಬಚ್ಚನ್

ಸೂಪರ್​ ಸ್ಟಾರ್ ಅಮಿತಾಭ್​​ ಬಚ್ಚನ್ ವೃತ್ತಿಜೀವನಕ್ಕೆ 55 ವರ್ಷಗಳು ಸಂದಿವೆ. ಇದು ಅವರ ಅಭಿಮಾನಿಗಳ ಸಂಭ್ರಮಕ್ಕೂ ಕಾರಣವಾಗಿದೆ.

Amitabh Bachchan
ಅಮಿತಾಭ್​​ ಬಚ್ಚನ್

By ETV Bharat Karnataka Team

Published : Feb 17, 2024, 12:34 PM IST

ಭಾರತೀಯ ಚಿತ್ರರಂಗದ ಹಿರಿಯ, ಹೆಸರಾಂತ ನಟ ಅಮಿತಾಭ್​​ ಬಚ್ಚನ್ ವೃತ್ತಿಜೀವನಕ್ಕೆ 55 ವರ್ಷಗಳ ಸಂಭ್ರಮ. ಬಾಲಿವುಡ್‌ನಲ್ಲಿ ತಮ್ಮ ಪ್ರಯಾಣವನ್ನು ಪ್ರತಿನಿಧಿಸುವಂತಹ ಎಐ (ಕೃತಕ ಬುದ್ಧಿಮತ್ತೆ) ಫೋಟೋವನ್ನು ಬಿಗ್​ ಬಿ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳೊಂದಿಗೆ ತಮ್ಮ ಉತ್ಸಾಹ ಹಂಚಿಕೊಳ್ಳಲು ಲೆಜೆಂಡರಿ ಆ್ಯಕ್ಟರ್​​ 'ಎಐ'ನ ಮೊರೆ ಹೋಗಿದ್ದಾರೆ. ಈ ಒಂದು ಫೋಟೋ ಸಂಪೂರ್ಣ ಸಿನಿ ಪ್ರಯಾಣವನ್ನು ಒಳಗೊಂಡಿದ್ದು, ಚಿತ್ರರಂಗದಲ್ಲಿ ತಮ್ಮ 55 ವರ್ಷಗಳ ಮೈಲಿಗಲ್ಲಿಗೆ ಕೃತಜ್ಞತೆ ಅರ್ಪಿಸಿದ್ದಾರೆ.

ನಟ ಶೇರ್ ಮಾಡಿರುವ ಎಐ ಫೋಟೋ ಸಿನಿಮಾ ಎಂಬ ಕಲೆಯಲ್ಲಿ ಮುಳುಗಿರುವ ಅಮಿತಾಭ್ ಬಚ್ಚನ್​​ ಅವರ ಮನಸ್ಸನ್ನು ಮತ್ತು ಅದರ ಜಟಿಲತೆಗಳನ್ನು ವಿವರಿಸುವಂತಿದೆ. ಇದು ಚಿತ್ರರಂಗದಲ್ಲಿ ಅವರ ಗಮನಾರ್ಹ ಅವಧಿಯನ್ನು ಪ್ರತಿಬಿಂಬಿಸುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ವಿಶಿಷ್ಟ ಫೋಟೋ ಹಂಚಿಕೊಂಡ ಬಿಗ್ ಬಿ, "ಅದ್ಭುತ ಸಿನಿ ಜಗತ್ತಿನಲ್ಲಿ 55 ವರ್ಷಗಳು ಪೂರ್ಣ. AI ನನಗೆ ಅದರ ವಿವರಣೆ ನೀಡಿದೆ" ಎಂದು ಬರೆದುಕೊಂಡಿದ್ದಾರೆ.

ಬಿಗ್ ಬಿ ಪೋಸ್ಟ್ ಶೇರ್ ಆಗುತ್ತಿದ್ದಂತೆ, ಅಪಾರ ಸಂಖ್ಯೆಯ ಅಭಿಮಾನಿಗಳು ಸಂತಸಪಟ್ಟಿದ್ದಾರೆ. ನಟನ ಪೋಸ್ಟ್​​ನ ಕಾಮೆಂಟ್​ ಸೆಕ್ಷನ್​ ಸೇರಿದಂತೆ ಇಡೀ ಸೋಷಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳ ಅಭಿನಂದನೆಯ ಸಂದೇಶಗಳು ಸದ್ದು ಮಾಡುತ್ತಿವೆ. ಹಿರಿಯ ನಟನ ಪ್ರತಿಭೆ ಮತ್ತು ಭಾರತೀಯ ಚಿತ್ರರಂಗಕ್ಕೆ ಅವರ ಅಪ್ರತಿಮ ಕೊಡುಗೆಯನ್ನು ಸ್ಮರಿಸಿ ಶ್ಲಾಘಿಸಿದರು. ಶ್ರೇಷ್ಠತೆಯ ಪ್ರತಿರೂಪ ಮತ್ತು ಭರಿಸಲಾಗದ ಐಕಾನ್ ಎಂಬರ್ಥದಲ್ಲಿ ವರ್ಣಿಸುತ್ತಿದ್ದಾರೆ. ಬಿಗ್​ ಬಿ ಪುತ್ರಿ ಶ್ವೇತಾ ಬಚ್ಚನ್, ಬ್ರಹ್ಮಾಸ್ತ್ರ ಸಹನಟಿ ಮೌನಿ ರಾಯ್, ನಟ ಕುನಾಲ್ ಕಪೂರ್, ಸಿದ್ಧಾರ್ಥ್ ಮಲ್ಹೋತ್ರಾ ಸೇರಿದಂತೆ ಹಲವು ಸಿನಿ ಸ್ನೇಹಿತರು ಕೂಡ ಅಮಿತಾಭ್​ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ.

ಬಚ್ಚನ್​ ನಡೆಸಿಕೊಡುವ ಜನಪ್ರಿಯ 'ಕೌನ್ ಬನೇಗಾ ಕರೋಡ್ಪತಿ 13'ರ ಕಾರ್ಯಕ್ರಮದಲ್ಲಿ ಅಮಿತಾಭ್ ಅವರು ತಮ್ಮ ಚೊಚ್ಚಲ ಚಿತ್ರ ಸಾತ್ ಹಿಂದೂಸ್ತಾನಿ ಬಗ್ಗೆ ಮೆಲುಕು ಹಾಕಿದ್ದರು. ಖ್ಯಾತ ಕವಿ ಹರಿವಂಶ್ ರೈ ಬಚ್ಚನ್ ಅವರ ಮಗ ಅಮಿತಾಭ್​​ ಬಗ್ಗೆ ತಿಳಿದ ನಂತರ, ನಿರ್ದೇಶಕ ಖ್ವಾಜಾ ಅಹ್ಮದ್ ಅಬ್ಬಾಸ್ ಅವರು ಆಡಿಷನ್ ಪ್ಲ್ಯಾನ್ಸ್ ಖಚಿತಪಡಿಸಿಕೊಳ್ಳಲು ಅಮಿತಾಭ್​​ ತಂದೆಗೆ ಕರೆ ಮಾಡಿದ್ದರು. ಈ ಮೂಲಕ ಆ ಸಮಯದಲ್ಲಿ ಸಿನಿ ಉದ್ಯಮದಲ್ಲಿದ್ದ ಗೌರವ ಮತ್ತು ಶಿಸ್ತನ್ನು ಪ್ರದರ್ಶಿಸಿದ್ದರು ಎಂದು ಸ್ವತಃ ಬಿಗ್​ ಬಿ ತಿಳಿಸಿ, ತಮ್ಮ ಗೌರವ ಸೂಚಿಸಿದ್ದರು.

ಇದನ್ನೂ ಓದಿ:'ಟಾಕ್ಸಿಕ್'​​ ಸಿನಿಮಾದಲ್ಲಿ ಶಾರುಖ್​​ ಖಾನ್​​? 'ಅಧಿಕೃತ ಮಾಹಿತಿ ನಂಬಿ' ಎಂದು ಯಶ್ ಸಲಹೆ​​

ಬಿಗ್​ ಬಿ ತಮ್ಮ ಯಶಸ್ವಿ ವೃತ್ತಿಜೀವನದ ಉದ್ದಕ್ಕೂ, ಹಲವು ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನು ನೀಡಿದ್ದಾರೆ. ಹಿಂದಿ ಚಿತ್ರರಂಗದ "ಆ್ಯಂಗ್ರಿ ಯಂಗ್ ಮ್ಯಾನ್" ಎಂಬ ಬಿರುದನ್ನೂ ಗಳಿಸಿದ್ದಾರೆ. ಪ್ರಸ್ತುತ 81ರ ಹರೆಯದಲ್ಲೂ ಸಿನಿಮಾಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಪ್ರೇಕ್ಷಕರನ್ನು ಆಕರ್ಷಿಸೋ ಕೆಲಸ ಮುಂದುವರಿಸಿದ್ದು, ಸಾಕಷ್ಟು ಯುವ ಪ್ರತಿಭೆಗಳಿಗೆ ಸ್ಪೂರ್ತಿಯಾಗಿದ್ದಾರೆ. ನಟನ ಮುಂದಿನ ಬಹುನಿರೀಕ್ಷಿತ ಚಿತ್ರ 'ಕಲ್ಕಿ 2898 ಎಡಿ'. ಭಾರತೀಯ ಚಿತ್ರರಂಗ ಬಹುಬೇಡಿಕೆ ಕಲಾವಿದರಾದ ಪ್ರಭಾಸ್​, ದೀಪಿಕಾ ಪಡುಕೋಣೆ, ಕಮಲ್​ ಹಾಸನ್​​, ದಿಶಾ ಪಟಾನಿ ಜೊತೆ ಸ್ಕ್ರೀನ್​ ಶೇರ್ ಮಾಡಿದ್ದಾರೆ. ಇನ್ನೂ ವೆಟ್ಟೈಯನ್ ಚಿತ್ರದಲ್ಲಿ ಸೂಪರ್​ ಸ್ಟಾರ್ ರಜನಿಕಾಂತ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೇ ನಟನ ಕೈಯಲ್ಲಿ ಇನ್ನೂ ಎರಡ್ಮೂರು ಪ್ರಾಜೆಕ್ಟ್​ಗಳಿದ್ದು, ಸಿನಿಪ್ರಿಯರು ಉತ್ಸುಕರಾಗಿದ್ದಾರೆ.

ಇದನ್ನೂ ಓದಿ:'ಜೈ ಶ್ರೀ ರಾಮ್'​​​ ಎನ್ನುತ್ತಾ ಗದೆ ಹಿಡಿದ ದರ್ಶನ್​; ಕುತೂಹಲ ಕೆರಳಿಸಿತು ಹೊಸ ಸಿನಿಮಾದ ಗ್ಲಿಂಪ್ಸ್

ABOUT THE AUTHOR

...view details