ಕರ್ನಾಟಕ

karnataka

ETV Bharat / entertainment

ದಿಲ್ಜಿತ್​ ದೊಸಾಂಜ್​ - ಪರಿಣಿತಿ ಚೋಪ್ರಾ ಅಭಿನಯದ 'ಚಮ್ಕಿಲಾ' ಒಟಿಟಿಯಲ್ಲಿ ರಿಲೀಸ್​: ಎಲ್ಲಿ, ಯಾವಾಗ ಗೊತ್ತಾ? - ಚಮ್ಕಿಲಾ

ದಿಲ್ಜಿತ್​ ದೊಸಾಂಜ್​ ಹಾಗೂ ಪರಿಣಿತಿ ಚೋಪ್ರಾ ಅಭಿನಯದ ಚಮ್ಕಿಲಾ ಸಿನಿಮಾ ಏಪ್ರಿಲ್​ನಲ್ಲಿ ಒಟಿಟಿ ಫ್ಲ್ಯಾಟ್​ಫಾರ್ಮ್​ನಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.

Amar Singh Chamkila movie release date announce
ದಿಲ್ಜಿತ್​ ದೊಸಾಂಜ್​- ಪರಿಣಿತಿ ಚೋಪ್ರಾ ಅಭಿನಯದ 'ಚಮ್ಕಿಲಾ' ಒಟಿಟಿಯಲ್ಲಿ ರಿಲೀಸ್​: ಎಲ್ಲಿ, ಯಾವಾಗ ಗೊತ್ತಾ?

By ETV Bharat Karnataka Team

Published : Feb 26, 2024, 1:39 PM IST

ದಿಲ್ಜಿತ್​ ದೊಸಾಂಜ್​ ಹಾಗೂ ಪರಿಣಿತಿ ಚೋಪ್ರಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಬಹುನಿರೀಕ್ಷಿತ ಸಿನಿಮಾ 'ಚಮ್ಕಿಲಾ' ಒಟಿಟಿ ಫ್ಲ್ಯಾಟ್ಫಾರ್ಮ್​ನಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದ್ದು, ಇದೀಗ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ. ಸೋಮವಾರ ನೆಟ್​ಫ್ಲಿಕ್ಸ್​ನ ಅಧಿಕೃತ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಚಿತ್ರದ ತಯಾರಕರು ಚಮ್ಕಿಲಾ ಬಿಡುಗಡೆ ದಿನಾಂಕವನ್ನು ಅನೌನ್ಸ್​ ಮಾಡಿದ್ದಾರೆ. ಬಹುನಿರೀಕ್ಷಿತ ಬಯೋಪಿಕ್ ಚಮ್ಕಿಲಾ​ ಏಪ್ರಿಲ್​ 12 ರಂದು ಒಟಿಟಿ ಫ್ಲ್ಯಾಟ್​ಫಾರ್ಮ್​ ನೆಟ್​ಫ್ಲಿಕ್ಸ್​ನಲ್ಲಿ ಮಾತ್ರ ರಿಲೀಸ್​ ಆಗಲಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಚಿತ್ರತಂಡ "ವಾದ್ಯ ನುಡಿಸುವಾಗ ಒಂದು ವಾತಾವರಣ ನಿರ್ಮಾಣವಾಗುತ್ತದೆ, ಅಂತಹುದೇ ಸ್ಟೈಲ್​ನಲ್ಲಿ ಚಮ್ಕಿಲಾ ಇರಲಿದೆ,@imtiazaliofficial ಅವರ #AmarSinghChamkila ಏಪ್ರಿಲ್ 12 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಮಾತ್ರ ತೆರೆಗೆ ಬರುತ್ತಿದೆ" ಎಂದು ಬರೆದು ಕೊಂಡಿದ್ದಾರೆ.

ಸಿನಿಮಾದ ಅಪ್ಡೇಟ್​ ​ ಬಗ್ಗೆ ಅಭಿಮಾನಿಗಳು ಖುಷಿ​ ಆಗಿದ್ದು, ಕೆಲವು ಅಭಿಮಾನಿಗಳು ಸಿನಿಮಾವನ್ನು ಥಿಯೇಟರ್​ಗಳಲ್ಲಿ ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದಾರೆ. ಪೋಸ್ಟ್​ಗೆ ಪ್ರತಿಕ್ರಿಯಿಸಿರುವ ಅಭಿಮಾನಿಯೊಬ್ಬರು, "ರೆಹಮಾನ್​- ಇಮ್ತಿಯಾಜ್​-ಇರ್ಷಾದ್​​, ಹೈವೇ, ತಾಮಾಶಾ ಸಿನಿಮಾಗಳಿಗೆ ಜೊತೆಯಾಗಿದ್ದರು. ಈಗ ರಾಕ್​ಸ್ಟಾರ್​, ಇದಕ್ಕೆ ದಿಲ್ಜಿತ್​ ಕೂಡ ಸೇರಿಕೊಂಡಿದ್ದಾರೆ" ಎಂದು ಕಮೆಂಟ್​ ಮಾಡಿದ್ದಾರೆ.

ಇಮ್ತಿಯಾಜ್​ ಅಲಿ ನಿರ್ದೇಶನದ 'ಅಮರ್​ ಸಿಂಗ್​ ಚಮ್ಕಿಲಾ' ಬಯೋಪಿಕ್​ನಲ್ಲಿ ಬಾಲಿವುಡ್​ ನಟಿ ಪರಿಣಿತಿ ಚೋಪ್ರಾ ಹಾಗೂ ದಿಲ್ಜಿತ್​ ದೋಸಾಂಜ್​ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇದು ಪಂಜಾಬ್​ ಮೂಲದ ರಾಕ್​ಸ್ಟಾರ್​ ​ ಅಮರ್​ ಸಿಂಗ್​ ಚಮ್ಕಿಲಾ ಅವರ ಜೀವನದ ಇದುವರೆಗೆ ಹೇಳದ ನೈಜ ಕಥೆಯನ್ನು ಹೊಂದಿದೆ. 1980ರ ದಶಕದಲ್ಲಿ ಕಡು ಬಡತನದಿಂದ ಜನಪ್ರಿಯತೆಯ ಉತ್ತುಂಗಕ್ಕೆ ಏರಿದ ಸಾಧನೆ, ಹಾಗೂ 27ನೇ ವಯಸ್ಸಿಗೆ ಹತ್ಯೆಯಾಗಿ ಜೀವನ ಅಂತ್ಯಗೊಂಡ ಪರಿಯನ್ನು ಸಿನಿಮಾದಲ್ಲಿ ಹೇಳಲಾಗಿದೆ.

ಅವರ ಕಾಲದಲ್ಲಿ ಚಮ್ಕಿಲಾ ಅವರು ಹೈಯೆಸ್ಟ್​ ಸೆಲ್ಲಿಂಗ್​ ಸಂಗೀತಗಾರರಾಗಿದ್ದರು. ಮಾತ್ರವಲ್ಲ ಈಗಲೂ ಪಂಜಾಬ್​ನ ಉತ್ತನ ಲೈವ್​ ಸ್ಟೇಜ್​ ಪ್ರದರ್ಶಕರನ್ನು ಒಬ್ಬರು ಎಂದೇ ಪರಿಗಣಿಸಲಾಗಿದೆ.

ಚಿತ್ರದ ಬಗ್ಗೆ ಹೇಳಿರುವ ನಿರ್ದೇಶಕ ಇಮ್ತಿಯಾಜ್​ ಅಲಿ, "ಅಮರ್​ ಸಿಂಗ್​ ಚಮ್ಕಿಲಾನ, ಒಬ್ಬ ಮಾಸ್​ ಅಪ್ರತಿಮ ಸಂಗೀತ ತಾರೆಯ ಜೀವನವನ್ನು ತೆರೆಯ ಮೇಲೆ ತರುವುದು ನನಗೆ ಒಂದು ಅನನ್ಯ ಪ್ರಯಾಣವಾಗಿತ್ತು. ಪ್ರತಿಭಾವಂತ ದಿಲ್ಜಿತ್​ ದೋಸಾಂಜ್​ನನ್ನು ಬಿಟ್ಟು ಬೇರೆ ನಟರನ್ನು ಕೇಳಲು ಸಾಧ್ಯವಿಲ್ಲ. ಅದಲ್ಲದೇ ಪ್ರತಿಭಾವಂತ ನಟಿ ಪರಿಣಿತಿ ಚೋಪ್ರಾ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇದರಲ್ಲಿ ಕೆಲವು ಲೈವ್​ ಹಾಡುಗಳನ್ನು ಸೇರಿಸಲಾಗಿದೆ. ಜನ ಇಂದಿಗೂ ಮರೆಯದ ಚಮ್ಕಿಲಾ ಅವರ ಜನಪ್ರಿಯ ಹಾಡುಗಳನ್ನು ಇದರಲ್ಲಿ ಸೇರಿಸಲಾಗಿದೆ. ನೆಟ್​ಫ್ಲಿಕ್ಸ್ ಚಿತ್ರ ಬಿಡುಗಡೆಗೆ ನಮ್ಮ ಜೊತೆ ಕೈಜೋಡಿಸಿದ್ದು, ಈ ಮೂಲಕ ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ಲಕ್ಷಾಂತರ ವೀಕ್ಷಕರ ಬಳಿ ನಮ್ಮ ಸಿನಿಮಾ ತಲುಪಲಿದೆ. ಇದಕ್ಕೆ ನಾನು ನೆಟ್​ಫ್ಲಿಕ್ಸ್​ಗೆ ಧನ್ಯವಾದ ಹೇಳುತ್ತೇನೆ​' ಎಂದು ಹೇಳಿದ್ದಾರೆ.

ಇದನ್ನೂ ಓದಿ:ವರುಣ್​ ತೇಜ್​​ ಸಿನಿಮಾ ಆಯ್ಕೆ ಬಗ್ಗೆ ಚಿರಂಜೀವಿ ಮೆಚ್ಚುಗೆ; ಸೋದರಳಿಯನ ದಶಕದ ಜರ್ನಿ ಮೆಲುಕು ಹಾಕಿದ ಮೆಗಾಸ್ಟಾರ್

ABOUT THE AUTHOR

...view details