ಕಳೆದ ಗುರುವಾರ ಚಿತ್ರಮಂದಿರ ಪ್ರವೇಶಿಸಿದ'ಪುಷ್ಪ 2: ದಿ ರೂಲ್' ಚಿತ್ರದ ಬಾಕ್ಸ್ ಆಫೀಸ್ ಪ್ರಯಾಣ ಅದ್ಭುತವಾಗಿದೆ. ದೊಡ್ಡ ಮಟ್ಟದ ಯಶಸ್ಸು ಕಂಡಿದ್ದ 'ಪುಷ್ಪ: ದಿ ರೈಸ್'ನ ಮುಂದುವರಿದ ಭಾಗವಾಗಿ ಬಂದ 'ಪುಷ್ಪ 2: ದಿ ರೂಲ್' ನಿರೀಕ್ಷೆಯಂತೆ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಟಿದೆ. ಬಿಗ್ ಬಜೆಟ್ ಸಿನಿಮಾ ದೊಡ್ಡ ಅಭಿಮಾನಿ ಬಳಗವನ್ನು ತಲುಪುವಲ್ಲಿ ಯಶ ಕಂಡಿದೆ. ಸಿನಿಮಾ ಸುತ್ತಲಿದ್ದ ಸದ್ದು, ಆಕರ್ಷಣೆಯನ್ನು ನಿಜವೆಂದು ತನ್ನ ವ್ಯವಹಾರದ ಮೂಲಕ ಸಾಬೀತುಪಡಿಸಿದೆ. ಸಿನಿಮಾ ತನ್ನ ಆರಂಭಿಕ ವಾರಾಂತ್ಯದಲ್ಲಿ ಹಲವು ದಾಖಲೆಗಳನ್ನು ಬ್ರೇಕ್ ಮಾಡೋ ಮೂಲಕ ಗ್ರ್ಯಾಂಡ್ ಎಂಟ್ರಿಕೊಟ್ಟು ಬಾಕ್ಸ್ ಆಫೀಸ್ನಲ್ಲಿ ತನ್ನ ಉತ್ತಮ ಪ್ರಯಾಣ ಮುಂದುವರಿಸಿದೆ. ದಿನ ಕಳೆದಂತೆ ಕಲೆಕ್ಷನ್‌ನಲ್ಲಿ ಕೊಂಚ ಕುಸಿತವಾಗಿದ್ದರೂ ಒಟ್ಟು ವ್ಯವಹಾರ ಅದ್ಭುತ ಎನ್ನಬಹುದು.
6 ದಿನಗಳಲ್ಲಿ ಚಿತ್ರದ ಒಟ್ಟು ಕಲೆಕ್ಷನ್: 'ಪುಷ್ಪ 2: ದಿ ರೂಲ್' ತನ್ನ ಮೊದಲ ಸೋಮವಾರ ಕಲೆಕ್ಷನ್‌ನಲ್ಲಿ ಭಾರಿ ಕುಸಿತ ಎದುರಿಸಿತು. ಭಾರತದಲ್ಲಿನ ವ್ಯವಹಾರವನ್ನು ಗಮನಿಸಿದರೆ ಶೇ.54.31 ರಷ್ಟು ಇಳಿಕೆ ಆಗಿತ್ತು. ಯಾವುದೇ ಸಿನಿಮಾವಾದ್ರೂ ಕೂಡಾ ಇಂತಹ ಕುಸಿತ ಸಾಮಾನ್ಯ ಎನ್ನಬಹುದು. ದಿನ ಕಳೆದಂತೆ ಈ ಅಂಕಿ ಅಂಶಗಳು ಇಳಿಕೆ ಆಗುತ್ತಾ ಹೋಗೋದು ಸಹಜ. ಮರುದಿನ ಅಂದರೆ ಮಂಗಳವಾರ ಶೇ.18.70 ರಷ್ಟು ಇಳಿಕೆಯಾಗಿದೆ. ಈ ಕುಸಿತದ ಹೊರತಾಗಿಯೂ, 6 ದಿನಗಳಲ್ಲಿ ಚಿತ್ರದ ಒಟ್ಟು ಕಲೆಕ್ಷನ್ 1,000 ಕೋಟಿ ರೂಪಾಯಿ ಆಗಿದೆ. ಕೆಲವೇ ದಿನಗಳಲ್ಲಿ ಸಾವಿರ ಕೋಟಿ ದಾಟಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪುಷ್ಪ 2 ಪಾತ್ರವಾಗಿದೆ.
ದೇಶಿಯ ಕಲೆಕ್ಷನ್? ಇನ್ನು, ಭಾರತದ ವ್ಯವಹಾರ ಗಮನಿಸಿದ್ರೆ 6 ದಿನಗಳಲ್ಲಿ ಬರೋಬ್ಬರಿ 645.95 ಕೋಟಿ ರೂಪಾಯಿ (ನೆಟ್ ಕಲೆಕ್ಷನ್) ಕಲೆಕ್ಷನ್ ಆಗಿದೆ.