ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಕುಟುಂಬದಲ್ಲಿ ಬಿರುಕು ಬಿಟ್ಟಿವೆ ಎಂಬ ಊಹಾಪೋಹಗಳು ಬಹಳ ಹಿಂದಿನಿಂದಲೂ ಹರಿದಾಡುತ್ತಿವೆ. ಆದರೆ ತಾರಾ ದಂಪತಿ ಮಾತ್ರ ಈವರೆಗೆ ಯಾವುದೇ ಅಧಿಕೃತ ಹೇಳಿಕೆ ಕೊಟ್ಟಿಲ್ಲ. ಬಿರುಕು, ಡಿವೋರ್ಸ್ ವದಂತಿಗಳು ಇತ್ತೀಚೆಗೆ ಶಾಂತವಾಗಿತ್ತು. ಅದಾಗ್ಯೂ, ನಿನ್ನೆ ಮುಂಬೈನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜೋಡಿಯ ಅದ್ಧೂರಿ ವಿವಾಹ ಸಮಾರಂಭದಲ್ಲಿ ಸಂಪೂರ್ಣ ಬಚ್ಚನ್ ಕುಟುಂಬ ಕಾಣಿಸಿಕೊಂಡಿದೆ. ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಆ ವದಂತಿಗಳು ಮತ್ತೆ ಸದ್ದು ಮಾಡಲಾರಂಭಿಸಿದೆ.
ಹೌದು, ಅಂಬಾನಿ ಮರ್ಚೆಂಟ್ ವಿವಾಹ ಮಹೋತ್ಸವದಲ್ಲಿ ಇಡೀ ಬಚ್ಚನ್ ಕುಟುಂಬ ಕಾಣಿಸಿಕೊಂಡಿತ್ತು. ಐಶ್ವರ್ಯಾ ರೈ ಬಚ್ಚನ್ ತಮ್ಮ ಮಗಳು ಆರಾಧ್ಯ ಜೊತೆ ಪ್ರತ್ಯೇಕವಾಗಿ ಆಗಮಿಸಿದರೆ, ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಪುತ್ರ ಅಭಿಷೇಕ್, ಮತ್ತು ಶ್ವೇತಾ, ನಿಖಿಲ್ ನಂದಾ, ನವ್ಯಾ ನವೇಲಿ ಅಗಸ್ತ್ಯ ಒಟ್ಟಿಗೆ ಆಗಮಿಸಿ ಕ್ಯಾಮರಾಗಳಿಗೆ ಪೋಸ್ ನೀಡಿದರು. ಸಂಪೂರ್ಣ ಬಚ್ಚನ್ ಕುಟುಂಬಸ್ಥರು ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಬಹಳ ಸೊಗಸಾಗಿ ಕಾಣಿಸಿಕೊಂಡಿದ್ದಾರೆ.
ಮುಂಬೈನಲ್ಲಿ ನಡೆದ ಈ ಅದ್ಧೂರಿ ವಿವಾಹ ಸಮಾರಂಭದಲ್ಲಿ ಮಗಳು ಆರಾಧ್ಯ ಜೊತೆ ಬಂದ ಐಶ್ವರ್ಯಾ ಆಕರ್ಷಕ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಪುತ್ರಿ ಕೂಡ ತನ್ನ ಸೌಂದರ್ಯದಿಂದ ನೆಟ್ಟಿಗರ ಗಮನ ಸೆಳೆದಿದ್ದಾಳೆ. ಕಸೂತಿ ಮಾಡಿದ ಶ್ರಗ್ ಹೊಂದಿದ್ದ ರೆಡ್ ಅನಾರ್ಕಲಿ ಸೂಟ್‌ನಲ್ಲಿ ಬಚ್ಚನ್ ಸೊಸೆ ಬಹಳ ಅದ್ಭುತ ನೋಟ ಬೀರಿದ್ದಾರೆ.