ಕರ್ನಾಟಕ

karnataka

ETV Bharat / entertainment

ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಗೆ ಆಹ್ವಾನ ನೀಡಿದ ನಟಿ ವರಲಕ್ಷ್ಮಿ ಶರತ್‌ಕುಮಾರ್ - VARALAXMI INVITES MODI FOR WEDDING - VARALAXMI INVITES MODI FOR WEDDING

ನಟಿ ವರಲಕ್ಷ್ಮಿ ಶರತ್‌ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ ಮದುವೆಯ ಆರತಕ್ಷತೆ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನಿಸಿದ್ದಾರೆ. ವರಲಕ್ಷ್ಮಿ ಅವರು ಪ್ರಧಾನಿ ಮೋದಿಯೊಂದಿಗಿನ ಭೇಟಿಯ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

VARALAXMI INVITES MODI FOR WEDDING  VARALAXMI SARATHKUMAR WEDDING
ತಮ್ಮ ಮದುವೆಯ ಆರತಕ್ಷತೆ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಗೆ ಆಹ್ವಾನಿಸಿದ ನಟಿ ವರಲಕ್ಷ್ಮಿ ಶರತ್‌ಕುಮಾರ್ (Screen grab)

By ETV Bharat Karnataka Team

Published : Jun 29, 2024, 2:19 PM IST

ಹೈದರಾಬಾದ್: ನಟಿ ವರಲಕ್ಷ್ಮಿ ಶರತ್‌ಕುಮಾರ್ ಅವರು ಮುಂಬೈ ಮೂಲದ ಗ್ಯಾಲರಿಸ್ಟ್ ನಿಕೊಲಾಯ್ ಸಚ್‌ದೇವ್ ಅವರನ್ನು ವಿವಾಹವಾಗಲು ಸಜ್ಜಾಗುತ್ತಿದ್ದಾರೆ. ನಟಿ ತಮ್ಮ ಮದುವೆಯ ಆಮಂತ್ರಣವನ್ನು ಸಿನಿಮಾ ಉದ್ಯಮದ ಸೆಲೆಬ್ರಿಟಿಗಳು ಮತ್ತು ಸಹೋದ್ಯೋಗಿಗಳಿಗೆ ಮಾತ್ರವಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವರಲಕ್ಷ್ಮಿ ಅವರು ಪ್ರಧಾನಿ ಮೋದಿ ಅವರೊಂದಿಗಿನ ಭೇಟಿಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. "ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಜೀ ಅವರನ್ನು ಭೇಟಿ ಮಾಡಿ ಆಹ್ವಾನಿಸಿದ್ದು, ಎಂತಹ ಸೌಭಾಗ್ಯ. ತುಂಬಾ ಧನ್ಯವಾದಗಳು ನಿಮಗೆ ಆತ್ಮೀಯ ಸ್ವಾಗತ. ನಿಮ್ಮ ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿಯೂ ನಿಮ್ಮ ಅಮೂಲ್ಯ ಸಮಯವನ್ನು ನಮ್ಮೊಂದಿಗೆ ಕಳೆದರು. ನಿಜವಾಗಿಯೂ ಹೆಮ್ಮೆ ಅನಿಸುತ್ತಿದೆ ಸರ್. ಇದನ್ನು ನೆರವೇರಿಸಿದ ಅಪ್ಪ @realsarathkumar ಅವರಿಗೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.

ವರಲಕ್ಷ್ಮಿ ತನ್ನ ಮದುವೆ ಕಾರ್ಯಕ್ರಮದ ಆಚರಣೆಗಳಿಗಾಗಿ ದೇಶಾದ್ಯಂತ ಹಲವಾರು ವಿಐಪಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದಾರೆ. ಅವರು ಮೊದಲು ರಜನಿಕಾಂತ್ ಅವರನ್ನು ಭೇಟಿ ಮಾಡಿದ್ದಾರೆ. ಅವರಿಗೆ ಮತ್ತು ಅವರ ಕುಟುಂಬಕ್ಕೆ ಆಹ್ವಾನವನ್ನು ನೀಡಿದರು. ಬಳಿಕ ನಂದಮೂರಿ ಬಾಲಕೃಷ್ಣ, ಕಮಲ್ ಹಾಸನ್, ಅಲ್ಲು ಅರ್ಜುನ್, ನಯನತಾರಾ, ವಿಘ್ನೇಶ್ ಶಿವನ್, ಸಿದ್ಧಾರ್ಥ್, ಸಮಂತಾ, ನಿರ್ದೇಶಕರಾದ ಎ.ಆರ್. ಮುರುಗದಾಸ್, ಬಾಲಾ, ಮುರಳಿ ಶರ್ಮಾ, ರವಿತೇಜ ಮತ್ತು ಅನೇಕರನ್ನು ಭೇಟಿಯಾದ್ದಾರೆ.

ನಿಖರವಾದ ಮದುವೆಯ ದಿನಾಂಕವನ್ನು ಬಹಿರಂಗಪಡಿಸಿಲ್ಲವಾದರೂ ವರಲಕ್ಷ್ಮಿ ಇತ್ತೀಚೆಗೆ ಮದುವೆಯ ಶಾಪಿಂಗ್‌ಗಾಗಿ ತನ್ನ ನಿಶ್ಚಿತ ವರನೊಂದಿಗೆ ದುಬೈಗೆ ತೆರಳಿದ್ದಾರೆ. ಮದುವೆ ಆರತಕ್ಷತೆ ಕಾರ್ಯಕ್ರಮಕ್ಕಾಗಿ ಈಗಾಗಲೇ ವಿವಿಧ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ನಟಿ ವರಲಕ್ಷ್ಮಿ ಅವರು ಹನುಮಾನ್​ ಚಿತ್ರದ ಯಶಸ್ಸಿನ ನಂತರ, ನಿಕೋಲಾಯ್ ಸಚ್‌ದೇವ್ ಅವರ ನಿಶ್ಚಿತಾರ್ಥದಿಂದ ಎಲ್ಲರ ಗಮನಸೆಳೆದಿದ್ದರು. ತಮಿಳು ತಾರೆ ಶರತ್‌ಕುಮಾರ್ ಮತ್ತು ಅವರ ಮೊದಲ ಪತ್ನಿ ಛಾಯಾ ಅವರ ಹಿರಿಯ ಪುತ್ರಿ ವರಲಕ್ಷ್ಮಿ, ದಕ್ಷಿಣ ಭಾರತದ ಚಿತ್ರರಂಗದ ಎಲ್ಲರನ್ನೂ ಒಟ್ಟಿಗೆ ಸೇರಿಸುವ ಮೂಲಕ ತನ್ನ ಮದುವೆಯಲ್ಲಿ ಸ್ಟಾರ್ - ಸ್ಟಾಡ್ಡ್ ಸಂಬಂಧವನ್ನು ನಿರೀಕ್ಷೆ ಮಾಡಿದ್ದಾರೆ ನಟಿ ವರಲಕ್ಷ್ಮಿ.

ಇದನ್ನೂ ಓದಿ:ಹೀನಾ ಖಾನ್​ಗೆ ಸ್ತನ ಕ್ಯಾನ್ಸರ್: ಬ್ರೆಸ್ಟ್​​ ಕ್ಯಾನ್ಸರ್​ ವಿರುದ್ಧ ಹೋರಾಡಿದ ನಟಿಮಣಿಯರಿವರು - Breast Cancer

ABOUT THE AUTHOR

...view details