ಹೈದರಾಬಾದ್: ಜನಪ್ರಿಯ ತಾರಾ ಜೋಡಿ ಅದಿತಿ ರಾವ್ ಹೈದರಿ ಹಾಗೂ ಸಿದ್ಧಾರ್ಥ್ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಇತ್ತೀಚೆಗೆ ಹಸೆಮಣೆ ಏರಿದ್ದು, ಇಂದು ತಮ್ಮ ವೈವಾಹಿಕ ಬಂಧನವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸುಂದರ ಫೋಟೋಗಳೊಂದಿಗೆ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ ಇಬ್ಬರಿಗೂ ಇದು ಎರಡನೇ ಮದುವೆ. ಹಾಗಾಗಿ ಸೋಷಿಯಲ್ ಮೀಡಿಯಾದಲ್ಲಿ ನವಾರಂಭಕ್ಕೆ ಶುಭ ಕೋರಲಾಗುತ್ತಿದೆ.
ಚಿತ್ರರಂಗದಲ್ಲಿ ಬಹುಕಾಲದಿಂದ ಗುರುತಿಸಿಕೊಂಡಿದ್ದ ಸಿದ್ಧಾರ್ಥ್ ಹೈದರಿ ತಮ್ಮ ಬಹುಕಾಲದ ಪ್ರೀತಿಗೆ ಮದುವೆ ಎಂಬ ಅಧಿಕೃತ ಮುದ್ರೆ ಒತ್ತಿದ್ದಾರೆ. ನವದಂಪತಿ ಹಂಚಿಕೊಂಡಿರುವ ಫೋಟೋಗಳು ಬಹಳ ಆಕರ್ಷಕವಾಗಿದ್ದು, "ನೀವು ನನ್ನ ಸೂರ್ಯ, ನನ್ನ ಚಂದ್ರ ಮತ್ತು ನನ್ನ ಎಲ್ಲಾ ನಕ್ಷತ್ರಗಳು. ಸಾರ್ವಕಾಲಕ್ಕೂ ಸೋಲ್ಮೇಟ್ಗಳಾಗಿರಲು, ನಗಲು, ಶಾಶ್ವತ ಪ್ರೀತಿಗೆ, ಬೆಳಕಿಗೆ ಮತ್ತು ಮ್ಯಾಜಿಕ್ಗೆ ಪಯಣವೊಂದು ಆರಂಭ". "ಶ್ರೀಮತಿ ಮತ್ತು ಶ್ರೀ ಅದು-ಸಿದ್ದ"ಗೆ ಸಹಿ ಹಾಕುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಲವ್ ಬರ್ಡ್ಸ್ ತಮ್ಮ ಪ್ರೀತಿಯನ್ನು ಹೇಳಿಕೊಂಡಿದ್ದು, ಅಭಿಮಾನಿಗಳು ಮತ್ತು ಸ್ನೇಹಿತರ ಸಂತಸಕ್ಕೆ ಕಾರಣರಾಗಿದ್ದಾರೆ.
ಅದಿತಿ ಮತ್ತು ಸಿದ್ಧಾರ್ಥ್ ಅವರ ಮದುವೆ ಎಂಬ ಸಂತೋಷಕರ ಪ್ರಯಾಣ ಮಾರ್ಚ್‌ನಲ್ಲಿನ ಎಂಗೇಜ್ಮೆಂಟ್ ಅನೌನ್ಸ್ಮೆಂಟ್ ಮೂಲಕ ಪ್ರಾರಂಭವಾಯಿತು. ನಿಶ್ಚಿತಾರ್ಥದ ಸಿಹಿ ಸುದ್ದಿಯನ್ನು ಇದೇ ವರ್ಷದ ಮಾರ್ಚ್ನಲ್ಲಿ ಕೊಟ್ಟಿದ್ದರು. ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಪ್ರೇಮಪಕ್ಷಿಗಳು ತಮ್ಮ ಎಂಗೇಜ್ಮೆಂಟ್ ಉಂಗುರಗಳನ್ನು ಪ್ರದರ್ಶಿಸಿದ್ದರು. ನಟಿ ಅದಿತಿ ರಾವ್ ಹೈದರಿ ತಮ್ಮ ಪೋಸ್ಟ್‌ನಲ್ಲಿ, "ಹಿ ಸೆಡ್ ಯೆಸ್! E. N. G. A. G. E. D" ಎಂದು ಬರೆದುಕೊಂಡಿದ್ದರು. ಆದ್ರೆ ಸಿದ್ಧಾರ್ಥ್ "ಶಿ ಸೆಡ್ ಎಸ್" ಎಂದು ಪ್ರತಿಕ್ರಿಯಿಸಿದ್ದರು.
ಅದಿತಿ ಕುಟುಂಬದ 400 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ದೇವಾಲಯದಲ್ಲಿ ನಿಶ್ಚಿತಾರ್ಥ ನಡೆದಿತ್ತು. ಇದೊಂದು ಖಾಸಗಿ ಸಮಾರಂಭ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲೂ ಕ್ಯಾಶುವಲ್ ಲುಕ್ನ ಫೋಟೋ ಹಂಚಿಕೊಂಡಿದ್ದರು. ಆದ್ರೆ ನಿಶ್ಚಿತಾರ್ಥದ ಕ್ಷಣಗಳಿಗಾಗಿ ಅಪಾರ ಸಂಖ್ಯೆಯ ಅಭಿಮಾನಿಗಳು ಕಾತರರಾಗಿದ್ದರು. ಇದಕ್ಕೂ ಮುನ್ನ ಹಲವು ತಿಂಗಳುಗಳಿಂದ ಇವರಿಬ್ಬರ ರಿಲೇಶನ್ಶಿಪ್ ಬಗ್ಗೆ ವದಂತಿಗಳಿದ್ದವು. ಸೋಷಿಯಲ್ ಮೀಡಿಯಾ ಸುಳಿವುಗಳ ಹೊರತಾಗಿಯೂ ತಮ್ಮ ಬಾಂಧವ್ಯವನ್ನು ಖಾಸಗಿಯಾಗಿ ಇರಿಸಿಕೊಂಡಿದ್ದರು.