ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ 11ರ ಆಟ ಶುರುವಾಗಿದೆ. ಸ್ಪರ್ಧಿಗಳು ಈಗಾಗಲೇ ಮನೆಯೊಳಗೆ ಬಲಗಾಲಿಟ್ಟಿದ್ದಾರೆ. ವಿವಿಧ ರಂಗಗಳಲ್ಲಿ ಗುರುತಿಸಿಕೊಂಡಿರುವವರನ್ನು ಸುದೀಪ್, ಬಿಗ್ ಬಾಸ್ ತಂಡ ಮತ್ತು ಕನ್ನಡಿಗರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಅಸಲಿ ಆಟ ಇಂದಿನಿಂದ ಪ್ರಸಾರ ಕಾಣಲಿದೆ. ಈ ಮಧ್ಯೆ, ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ನಟಿ ಗೌತಮಿ ಕಣ್ಣೀರಿಟ್ಟಿದ್ದಾರೆ.
''ಗೌತಮಿಯ ಹೊಸ ಅಧ್ಯಾಯ ಶುರು. ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ'' ಎಂಬ ಕ್ಯಾಪ್ಷನ್ನೊಂದಿಗೆ ಕಲರ್ಸ್ ಕನ್ನಡ ಸೋಷಿಯಲ್ ಮೀಡಿಯಾದಲ್ಲಿ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಳಿಸಿದೆ. ವಿಡಿಯೋ ಸಂಪೂರ್ಣ ಸಂಚಿಕೆ ವೀಕ್ಷಿಸುವ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.
'ಸತ್ಯ'ಳ ಅಸಲಿ ನೋಟ:'ಸತ್ಯ' ಧಾರವಾಹಿ ಮೂಲಕ ಗೌತಮಿ ಈಗಾಗಲೇ ಕರುನಾಡಿನಾದ್ಯಂತ ಜನಪ್ರಿಯರಾಗಿದ್ದಾರೆ. ಬಾಯ್ ಕಟ್ ಲುಕ್ನಲ್ಲೇ ನಟಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮಕ್ಕೂ ಕೂಡಾ ನಟಿ ಈ ಲುಕ್ನಲ್ಲೇ ಎಂಟ್ರಿ ಕೊಟ್ಟಿದ್ದಾರೆ. ತಾರೆಯ ಈ ನೋಟ ಸಖತ್ ಫೇಮಸ್ ಕೂಡಾ ಆಗಿದೆ. ಬಿಗ್ ಬಾಸ್ ಮನೆಯೊಳಗೆ ಮೊದಲ ದಿನವೇ ಈ ಬಗ್ಗೆ ಮಾತುಕತೆ ಬಂದಿದೆ. ಫೈನಲಿ, ನಟಿ ತಮ್ಮ ವಿಗ್ ತೆಗೆದು ಮನೆಮಂದಿ ಮತ್ತು ಪ್ರೇಕ್ಷಕರೆದುರು ತಮ್ಮ ಅಸಲಿ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ.
''ಜನರು ನನ್ನನ್ನು ಇದೇ ರೀತಿ ನೋಡಿ, ಪ್ರೀತ್ಸಿ, ಇಲ್ಲಿವರೆಗೂ ಕರೆತಂದಿದ್ದಾರೆ. ನಿಮಗೆ ಕಾಣೋ ಅಂಥ ನಾನು ನಾನಾಗಿ ಬದಲಾಗುತ್ತೇನೆ ಅಂತಾ ಅನಿಸುತ್ತದೆ. ಗೌತಮಿಯ ಹೊಸ ಅಧ್ಯಾಯ ಈಗ ಶುರುವಾಗ್ತಿದೆ'' - ನಟಿ ಗೌತಮಿ.