ವಂಚನೆ ಪ್ರಕರಣವೊಂದರಲ್ಲಿ ಹೇಳಿಕೆ ನೀಡಲು ವಿಫಲರಾದ ಹಿನ್ನೆಲೆ ಪಂಜಾಬ್‌ನ ಲುಧಿಯಾನ ನ್ಯಾಯಾಲಯವು ಬಹುಭಾಷಾ ನಟ ಸೋನು ಸೂದ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಬಗ್ಗೆ ಬಂದ ಸುದ್ದಿಗಳಿಗೆ ಪ್ರತಿಕ್ರಿಯೆಯಾಗಿ ನಟ ಎಕ್ಸ್ ಪೋಸ್ಟ್ ಶೇರ್ ಮಾಡಿದ್ದಾರೆ.
ಸೋನು ಸೂದ್ ಎಕ್ಸ್ ಪೋಸ್ಟ್ನಲ್ಲೇನಿದೆ? ''ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಪ್ರಸಾರವಾಗುವ ಸುದ್ದಿಗಳು ಹೆಚ್ಚು ಸಂವೇದನಾಶೀಲವಾಗಿವೆ ಎಂಬುದನ್ನು ನಾವು ಸ್ಪಷ್ಟಪಡಿಸಬೇಕಾಗಿದೆ. ವಿಷಯಗಳನ್ನು ನೇರವಾಗಿ ಹೇಳುವುದಾದರೆ, ನಮಗೆ ಯಾವುದೇ ಸಂಬಂಧವಿಲ್ಲದ ಮೂರನೇ ವ್ಯಕ್ತಿಗೆ ಸಂಬಂಧಿಸಿದ ವಿಷಯದಲ್ಲಿ ಗೌರವಾನ್ವಿತ ನ್ಯಾಯಾಲಯವು ನಮ್ಮನ್ನು ಸಾಕ್ಷಿಯಾಗಿ ಸಮನ್ಸ್ ಮಾಡಿದೆ. ನಮ್ಮ ವಕೀಲರು ಪ್ರತಿಕ್ರಿಯಿಸಿದ್ದಾರೆ ಮತ್ತು ಫೆಬ್ರವರಿ 10, 2025ರಂದು ನಾವು ಈ ವಿಷಯದಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸುವ ಹೇಳಿಕೆಯನ್ನು ನೀಡುತ್ತೇವೆ.