ಬೆಂಗಳೂರು: ಮೈಸೂರು ಮತ್ತು ಕೊಪ್ಪಳ ಜಿಲ್ಲೆಯ ವಿವಿಧೆಡೆ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅರ್ಜಿ ಆಹ್ವಾನಿಸಿದೆ.
ಮೈಸೂರು ಜಿಲ್ಲೆಯಲ್ಲಿರುವ ಹುದ್ದೆಗಳ ವಿವರ: ಒಟ್ಟು 412 ಹುದ್ದೆಗಳಿಗೆ ನೇಮಕಾತಿ.
- ಅಂಗನವಾಡಿ ಕಾರ್ಯಕರ್ತರು - 83
- ಅಂಗನವಾಡಿ ಸಹಾಯಕರು - 329
ಕೊಪ್ಪಳ ಜಿಲ್ಲೆಯ ಹುದ್ದೆಗಳ ವಿವರ: ಒಟ್ಟು 461 ಹುದ್ದೆಗಳ ನೇಮಕಾತಿ.
- ಅಂಗನವಾಡಿ ಕಾರ್ಯಕರ್ತರು- 87
- ಅಂಗನವಾಡಿ ಸಹಾಯಕಿಯರು- 374
ವಿದ್ಯಾರ್ಹತೆ: ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅಭ್ಯರ್ಥಿಗಳು ಪಿಯುಸಿ ಪೂರ್ಣಗೊಳಿಸಿರಬೇಕು. ಸಹಾಯಕರ ಹುದ್ದೆಗಳಿಗೆ ಎಸ್ಎಸ್ಎಲ್ಸಿ ಮುಗಿಸಿರಬೇಕು.
ವಯೋಮಿತಿ: ಕನಿಷ್ಠ 19ರಿಂದ 35 ವರ್ಷ. ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.
ಅರ್ಜಿ ಸಲ್ಲಿಸುವ ಮುನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಲಭ್ಯವಿರುವ ಅಧಿಸೂಚನೆಯನ್ನು ಪರಿಶೀಲಿಸಿ, ಆನ್ಲೈನ್ ಮೂಲಕ ಅರ್ಜಿ ಭರ್ತಿ ಮಾಡುವಂತೆ ತಿಳಿಸಲಾಗಿದೆ. ಯಾವುದೇ ಅರ್ಜಿ ಶುಲ್ಕ ನಿಗದಿಯಾಗಿಲ್ಲ. ಅಭ್ಯರ್ಥಿಗಳನ್ನು ಮೆರಿಟ್ ಪಟ್ಟಿ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವವರು ಅಂಗನವಾಡಿ ಕೇಂದ್ರದ ಆಯಾ ತಾಲೂಕು, ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿಸುವ ಸ್ಥಳೀಯರೇ ಆಗಿರಬೇಕು.
ಈ ಕುರಿತು ಹೆಚ್ಚಿನ ಮಾಹಿತಿಗೆ ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಸಂಪರ್ಕಿಸಬಹುದು.
ಮೈಸೂರು ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕಡೇಯ ದಿನಾಂಕ ಅಕ್ಟೋಬರ್ 19 ಆಗಿದ್ದರೆ, ಕೊಪ್ಪಳದ ಹುದ್ದೆಗಳ ಭರ್ತಿಗೆ ಕಡೇಯ ದಿನಾಂಕ ಅಕ್ಟೋಬರ್ 23.
ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು http://karnemakaone.kar.nic.in/abcd/ಜಾಲತಾಣಕ್ಕೆ ಭೇಟಿ ನೀಡಿ. ಇಲ್ಲಿ ಜಿಲ್ಲೆ ಮತ್ತು ಹುದ್ದೆಗಳನ್ನು ಆಯ್ಕೆ ಮಾಡಿ, ಅಗತ್ಯ ಪ್ರಮಾಣಪತ್ರ ಸೇರಿದಂತೆ ಮತ್ತಿತರ ವಿವರ ಸಲ್ಲಿಸಿ, ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: ಬಳ್ಳಾರಿಯಲ್ಲಿದೆ ಸ್ಟಾಫ್ ನರ್ಸ್ ಉದ್ಯೋಗ: ನೀವು ಅರ್ಹರೆ, ಈಗಲೇ ಅರ್ಜಿ ಗುರಾಯಿಸಿ!