ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ ಇಂಜಿನಿಯರಿಂಗ್ ಸೇವಾ ಪರೀಕ್ಷೆ -2025ನ್ನು ಮುಂದೂಡಿದೆ. ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಆಯೋಗ ಭಾರತೀಯ ರೈಲ್ವೆ ನಿರ್ವಹಣಾ ಸೇವಾ ಅಧಿಕಾರಿಗಳ ನೇಮಕಾತಿಯ ಯೋಜನೆಯಲ್ಲಿ ಬದಲಾವಣೆಯಿಂದಾಗಿ ಅಭ್ಯರ್ಥಿಗಳಿಗೆ ತಯಾರಿಗೆ ಸಮಯ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದೆ.
ಐಆರ್‌ಎಂಎಸ್‌ಗೆ ನೇಮಕಾತಿಯನ್ನು ನಾಗರಿಕ ಸೇವಾ ಪರೀಕ್ಷೆ ಮತ್ತು ಇಎಸ್ಇ ಎರಡ ಮೂಲಕ ಮಾಡಲಾಗುವುದು ಎಂಬ ನಿರ್ಧಾರದ ಬಳಿಕ ಸರ್ಕಾರ ಈ ಮುಂದೂಡಿಕೆ ಮಾಡಲಾಗಿದೆ.
ಇಎಸ್ಇ-20025ರ ಆಕಾಂಕ್ಷಿಗಳಿಗೆ ಪರೀಕ್ಷೆ ತಯಾರಿಗೆ ಕಾಲಾವಕಾಶ ನೀಡುವ ಉದ್ದೇಶದಿಂದ ಇಎಸ್ಇಯ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಯುಪಿಎಸ್ಸಿ ತಿಳಿಸಿದೆ.
ಮುಂದೂಡಿಕೆ ನಂತರ ಇದೀಗ ಇಎಸ್ಇ ಪೂರ್ವಭಾವಿ ಪರೀಕ್ಷೆ 2025ರ ಜೂನ್ 8 ಮತ್ತು ಆಗಸ್ಟ್ 10ರಂದು ನಡೆಸಲು ಯುಪಿಎಸ್ಸಿ ನಿರ್ಧರಿಸಿದೆ.
ಈ ಇಎಸ್ಇ ನೇಮಕಾತಿಗಾಗಿ 2024ರ ಸೆಪ್ಟೆಂಬರ್ 18ರಂದು ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 2024ರ ಅಕ್ಟೋಬರ್ 8 ಆಗಿತ್ತು. ಈ ಅಧಿಸೂಚನೆ ಅನುಸಾರ ಇಎಸ್ಇ ಪೂರ್ವಭಾವಿ ಪರೀಕ್ಷೆಯನ್ನು ಫೆ 9 2025ಕ್ಕೆ ನಡೆಸಲು ನಿರ್ಧರಿಸಲಾಗಿತ್ತು.
ಈ ನಡುವೆ ಐಆರ್ಎಂಎಸ್ ಪರೀಕ್ಷೆ ಮತ್ತು ಇಎಸ್ಇ ಎರಡನ್ನೂ ನಾಗರೀಕ ಸೇವಾ ಪರೀಕ್ಷೆ ನಡೆಸಲು ನಿರ್ಧರಿಸಿದೆ. 2024ರ ಅಕ್ಟೋಬರ್ 9ರಂದು ಭಾರತೀಯ ರೈಲ್ವೆ ನಿರ್ವಹಣಾ ಸೇವೆ (ತಿದ್ದುಪಡಿ) ನಿಯಮಗಳು, 2024 ಅನ್ನು ರೈಲ್ವೆ ಸಚಿವಾಲಯವೂ ಸೂಚಿಸಿದೆ.
2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ರೈಲ್ವೆಯ ಎಂಟು ಗ್ರೂಪ್ ಎ ಸೇವೆಗಳನ್ನು ಕೇಂದ್ರ ಸೇವೆಯಾಗಿ ಏಕೀಕರಿಸಲು ಅನುಮೋದಿಸಿತು. ಇದರ ಅನುಸಾರ ಭಾರತೀಯ ರೈಲ್ವೆ ಸಂಚಾರ ಸೇವೆ, ಭಾರತೀಯ ರೈಲ್ವೆ ಖಾತೆಗಳ ಸೇವೆ, ಭಾರತೀಯ ರೈಲ್ವೆ ಸಿಬ್ಬಂದಿ ಸೇವೆ, ಇಂಜಿನಿಯರ್‌ಗಳ ಭಾರತೀಯ ರೈಲ್ವೆ ಸೇವೆ, ಭಾರತೀಯ ರೈಲ್ವೆ ಸ್ಟೋರ್ಸ್ ಸೇವೆ, ಮೆಕ್ಯಾನಿಕಲ್ ಇಂಜಿನಿಯರ್‌ಗಳ ಭಾರತೀಯ ರೈಲ್ವೆ ಸೇವೆ, ಎಲೆಕ್ಟ್ರಿಕಲ್ ಎಂಜಿನಿಯರ್‌ಗಳ ಭಾರತೀಯ ರೈಲ್ವೆ ಸೇವೆ ಮತ್ತು ಸಿಗ್ನಲ್‌ನ ಭಾರತೀಯ ರೈಲ್ವೆ ಸೇವೆ ಇಂಜಿನಿಯರುಗಳು ಹುದ್ದೆಗಳ ನೇಮಕಾತಿ ಇಎಸ್ಇ ಮೂಲಕವೇ ನಡೆಯಲಿದೆ.
ಇದರ ಅನುಸಾರ ಇಎಸ್ಇ ಮೂಲಕವೇ ಐಆರ್ಎಂಎಸ್ (ಸಿವಿಲ್), ಐಆರ್ಎಂಎಸ್) ಸ್ಟೋರ್ಸ್, ಐಆರ್ಎಂಎಸ್ (ಮೆಕಾನಿಕಲ್), ಐಆರ್ಎಂಎಸ್ (ಸಿಗ್ನಲ್ ಅಂಡ್ ಟೆಲಿಕಮ್ಯುನಿಕೇಶನ್) ಅನ್ನು ನಡೆಸಲಾಗುವುದು.
ಈ ಐಆರ್ಎಂಎಸ್ ಹುದ್ದೆಗಳನ್ನು ಇಎಸ್ಇ- 2025ರಲ್ಲಿ ಸೇರಿಸುವ ಸರ್ಕಾರದ ನಿರ್ಧಾರ ಗಮನಲ್ಲಿರಿಸಿಕೊಂಡು ಇದೀಗ ಇಎಸ್ಇಗೆ ಹೊರಡಿಸಲಾಗಿದ್ದ ಅರ್ಜಿಯ ತಿದ್ದುಪಡಿ ವಿಂಡೋವನ್ನು ಕೂಡ ತೆರೆಯಲಾಗಿದೆ.
ಇದನ್ನೂ ಓದಿ:ಜೆಇಇ ಮುಖ್ಯ ಪರೀಕ್ಷೆ ಮಾದರಿ ಬದಲಾವಣೆ: ಹಳೆ ಮಾದರಿಗೆ ಮರಳಿದ ಎನ್ಟಿಎ