ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ)ವು ರಾಷ್ಟ್ರೀಯ ರಕ್ಷಣಾ ಅಕಾಡೆಮಿ (National Defense Academy - NDA) ಮತ್ತು ನೌಕಾ ಅಕಾಡೆಮಿ (Naval Academy-NA) ಪರೀಕ್ಷೆಗೆ ಅರ್ಜಿ ಆಹ್ವಾನಿಸಿದೆ. ಪಿಯುಸಿ, ಪದವಿ ಅರ್ಹತೆ ಹೊಂದಿರುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಒಟ್ಟು ಹುದ್ದೆಗಳು:406
ಎನ್ಡಿಎ
- ಭೂ ಸೇನೆ- 208 ಹುದ್ದೆಗಳಲ್ಲಿ 10 ಮಹಿಳಾ ಅಭ್ಯರ್ಥಿಗಳಿಗೆ.
- ನೌಕಾ ಸೇನೆ- 42 ಹುದ್ದೆಗಳಲ್ಲಿ 6 ಮಹಿಳಾ ಅಭ್ಯರ್ಥಿಗಳಿಗೆ.
- ವಾಯು ಸೇನೆ- ಫ್ಲೈಯಿಂಗ್ನಲ್ಲಿ 92 ಹುದ್ದೆಗಳಲ್ಲಿ 2 ಮಹಿಳೆಯರಿಗೆ, ಗ್ರೌಂಡ್ ಡ್ಯೂಟಿ (ತಾಂತ್ರಿಕ): 18 ಹುದ್ದೆಗಳಿಗೆ 2 ಮಹಿಳಾ ಅಭ್ಯರ್ಥಿಗಳಿಗೆ, ಗ್ರೌಂಡ್ ಡ್ಯೂಟಿ (ತಾಂತ್ರಿಕೇತರ) 10 ಹುದ್ದೆಗಳಲ್ಲಿ 2 ಮಹಿಳೆಯರಿಗೆ.
- ನೌಕಾ ಅಕಾಡೆಮಿ- 36 ಹುದ್ದೆಗಳಲ್ಲಿ 5 ಮಹಿಳಾ ಅಭ್ಯರ್ಥಿಗಳಿಗೆ.
ವಿದ್ಯಾರ್ಹತೆ: ಪಿಯುಸಿ ಪೂರ್ಣಗೊಳಿಸಿರಬೇಕು. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತವನ್ನು ಅಭ್ಯಾಸ ಮಾಡಿರಬೇಕು.
ವಯೋಮಿತಿ: ಅಭ್ಯರ್ಥಿಗಳು ಅವಿವಾಹಿತರಾಗಿದ್ದು, 2006ರ ಜುಲೈ 2ರಿಂದ 2009 ಜುಲೈ 1ರೊಳಗೆ ಜನಿಸಿರಬೇಕು.