ಹೈದರಾಬಾದ್: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯಮದಲ್ಲಿ ಅಗತ್ಯತೆಗಳು ಬದಲಾಗುತ್ತಿರುತ್ತವೆ. ಅದರಂತೆ ಉದ್ಯೋಗ ಪಡೆಯಲು ಕೇವಲ ಶೈಕ್ಷಣಿಕ ಅರ್ಹತೆಯೊಂದೇ ಸಾಕಾಗುವುದಿಲ್ಲ. ಅದಕ್ಕೆ ಅನುಸಾರವಾದ ಇತರೆ ಕೌಶಲ್ಯಗಳು ಕೂಡ ಅಭ್ಯರ್ಥಿ ಮೈಗೂಡಿಸಿಕೊಳ್ಳಬೇಕಾಗುತ್ತದೆ. ಈ ಕೌಶಲ್ಯಗಳು ಕಲಿಕೆಯ ಬದಲಾಗಿ ವ್ಯಕ್ತಿಗತವಾಗಿ ರೂಢಿಸಿಕೊಳ್ಳಿವುದು ಅವಶ್ಯ. ಇಂತಹ ವಿಶೇಷ ಕೌಶಲ್ಯಗಳನ್ನು ಸಂದರ್ಶಕರು ಕೂಡ ಗಮನಿಸಿ, ಪ್ರಶ್ನಿಸುತ್ತಾರೆ. ಈ ರೀತಿಯ ಕೌಶಲ್ಯಗಳು ಕೇವಲ ಸಂಸ್ಥೆಗಳಿಗೆ ಮಾತ್ರವಲ್ಲ, ಅಭ್ಯರ್ಥಿಗಳ ವೈಯಕ್ತಿಕ ಬೆಳವಣಿಗೆಗೆ ಕೂಡ ಪ್ರಯೋಜನಕಾರಿ ಆಗುತ್ತವೆ.
ಹೊಸ ವಿಷಯಗಳ ಕಲಿಕೆ: ಉನ್ನತ ಶಿಕ್ಷಣದ ಪಡೆದವರು ನಂತರ ಉದ್ಯೋಗದ ಹುಡುಕಾಟಕ್ಕೆ ಮುಂದಾಗುವುದು ಸಹಜ. ಈ ವೇಳೆ ಸರಿಯಾದ ಕೌಶಲ್ಯಗಳು ನಿಮಗಿಲ್ಲದೆ ಹೋದಲ್ಲಿ ವರ್ಷಾನುಗಟ್ಟಲೇ ಕೆಲಸವನ್ನು ಪಡೆಯಲು ಹರಸಾಹಸ ಪಡಬೇಕಾಗುತ್ತದೆ. ಬದಲಾಗುತ್ತಿರುವ ತಂತ್ರಜ್ಞಾನಗಳನ್ನು ಅಪ್ಪಿಕೊಂಡಲ್ಲಿ ಮಾತ್ರ ಕ್ಷೇತ್ರದಲ್ಲಿ ಉಳಿಯಲು ಸಾಧ್ಯ. ಬದಲಾಗುತ್ತಿರುವ ತಂತ್ರಜ್ಞಾನವನ್ನು ನಿರಂತರವಾಗಿ ಕಲಿಯುವ ವಿದ್ಯಾರ್ಥಿ ಆಗಿರಬೇಕು. ಹೊಸ ವಿಷಯಗಳನ್ನು ಕಲಿಕೆ ಸಾಗಿದಂತೆ, ಅದರ ಕುರಿತು ಮಾಹಿತಿ ಪಡೆದಾಗ ಉದ್ಯೋಗದಲ್ಲಿ ಅವಕಾಶಗಳನ್ನು ಕಾಣಬಹುದಾಗಿದೆ.
ಕುತೂಹಲ ಹೊಂದಿರಿ: ಜಗತ್ತಿನಲ್ಲಿ ಉದ್ಯೋಗ ಸಂಬಂಧ ಆಗುತ್ತಿರುವ ಹೊಸ ಹೊಸ ಟ್ರೆಂಡ್ಗಳ ಕುರಿತು ಕಲಿಯುವ ಆಸಕ್ತಿಯನ್ನು ಹೊಂದಿರಬೇಕು. ಹೊಸ ಚಿಂತನೆ ಕೌಶಲ್ಯ ಮತ್ತು ಅವಿಷ್ಕಾರಗಳು ನಿಮಗೆ ಉದ್ಯೋಗದ ಅವಕಾಶವನ್ನು ನೀಡುತ್ತವೆ. ಕೆಲವು ಮಾನವ ಸಂಪನ್ಮೂಲಗಳಿಗೆ ಬೇಡಿಕೆ ಇದ್ದು, ಈ ನಿಟ್ಟಿನಲ್ಲಿ ಹೊಸ ಹೊಸ ವಿಚಾರಗಳು ಗೊತ್ತಿರಬೇಕಾಗುತ್ತದೆ.