ಕರ್ನಾಟಕ

karnataka

ETV Bharat / education-and-career

ಬೆಂಗಳೂರು ನಗರ ವಿಶ್ವವಿದ್ಯಾಲಯದಿಂದ ವಿದೇಶಿ ಭಾಷೆಗಳ ಕಲಿಕೆಗೆ ಅವಕಾಶ - Benglauru City University - BENGLAURU CITY UNIVERSITY

ದ್ವಿತೀಯ ಪಿಯುಸಿ ಅಥವಾ ಸಮಾನಾಂತರ ಶಿಕ್ಷಣದಲ್ಲಿ ಪಾಸಾಗಿರುವವರು ವಿದೇಶಿ ಭಾಷೆಗಳ ಕಲಿಕೆಗೆ ಅರ್ಜಿ ಸಲ್ಲಿಸಬಹುದು.

BENGLAURU CITY UNIVERSITY
ಬೆಂಗಳೂರು ನಗರ ವಿಶ್ವವಿದ್ಯಾಲಯ (ETV Bharat)

By ETV Bharat Karnataka Team

Published : Aug 7, 2024, 1:16 PM IST

ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯದ ಜಾಗತಿಕ ಭಾಷೆಗಳ ಅಧ್ಯಯನ ಕೇಂದ್ರ ವಾರಾಂತ್ಯದಲ್ಲಿ ವಿದೇಶಿ ಭಾಷೆಗಳ ಕಲಿಕೆಗೆ ಅವಕಾಶ ಕಲ್ಪಿಸುತ್ತಿದೆ. ಫ್ರೆಂಚ್‌, ಜರ್ಮನ್‌, ಸ್ಪ್ಯಾನಿಷ್, ಜಪಾನೀಸ್‌, ಕೊರಿಯನ್‌, ಚೈನೀನ್‌, ಇಟಾಲಿಯನ್‌, ಪೋರ್ಚುಗೀಸ್‌ ಭಾಷಾ ತರಗತಿಗಳು ಆರಂಭವಾಗುತ್ತಿವೆ. ದ್ವಿತೀಯ ಪಿಯುಸಿ ಅಥವಾ ಸಮಾನಾಂತರ ಶಿಕ್ಷಣದಲ್ಲಿ ಪಾಸಾಗಿರುವವರು ಅರ್ಜಿ ಸಲ್ಲಿಸಬಹುದಾಗಿದೆ.

ಉನ್ನತ ಶಿಕ್ಷಣ ಇಲಾಖೆಯ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್‌) ಅಡಿ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಬಹುದು. ಪ್ರತಿಯೊಂದು ಭಾಷೆಗಳಿಗೆ 1 ವರ್ಷದ ಸರ್ಟಿಫಿಕೇಟ್‌ ಕೋರ್ಸ್​, 1 ವರ್ಷದ ಯುಜಿ ಡಿಪ್ಲೊಮಾ ಕೋರ್ಸ್ ಹಾಗೂ 1 ವರ್ಷದ ಪಿಜಿ ಡಿಪ್ಲೊಮಾ ಕೋರ್ಸ್ ವ್ಯಾಸಂಗದ ಆಧಾರದಲ್ಲಿ ಸರ್ಟಿಫಿಕೇಟ್‌‌ ನೀಡಲಾಗುತ್ತದೆ. ಆಸಕ್ತರು ದೂ: 080- 29572019/9353251761ಗೆ ಕರೆ ಮಾಡಬಹುದು. ಅಥವಾ ವಿವಿಯ ಜಾಲತಾಣ www.bcu.ac.inಗೆ ಭೇಟಿ ನೀಡಬಹುದು ಎಂದು ವಿವಿಯ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ:ದೆಹಲಿ ವಿಶ್ವವಿದ್ಯಾಲಯ ಪ್ರವೇಶಾತಿ: ಕಾಲೇಜು​, ಕೋರ್ಸ್‌ಗಳ ಆದ್ಯತೆಗಳನ್ನು ಭರ್ತಿ ಮಾಡಲು ಇಂದು ಕೊನೆಯ ದಿನ - Delhi University Admission

ABOUT THE AUTHOR

...view details