ಕರ್ನಾಟಕ

karnataka

ETV Bharat / education-and-career

ಯುಪಿಎಸ್​ಸಿಯಿಂದ NDA-NA ನೇಮಕಾತಿ ಪರೀಕ್ಷೆ; ಪಿಯುಸಿ ಆದವರಿಗೆ ಸುವರ್ಣಾವಕಾಶ - National Defence Academy - NATIONAL DEFENCE ACADEMY

ರಾಷ್ಟ್ರೀಯ ರಕ್ಷಣಾ ಅಕಾಡೆಮಿ- ನೌಕಾ ಅಕಾಡೆಮಿಯಲ್ಲಿ 863 ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಅಧಿಸೂಚನೆ ಪ್ರಕಟಿಸಲಾಗಿದೆ.

National Defence Academy and Naval Academy Exam Notification by UPSC
National Defence Academy and Naval Academy Exam Notification by UPSC (File Photo)

By ETV Bharat Karnataka Team

Published : May 16, 2024, 12:02 PM IST

ಬೆಂಗಳೂರು: ಕೇಂದ್ರ ಲೋಕ ಸೇವಾ ಆಯೋಗದಿಂದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (National Defense Academy - NDA) ಮತ್ತು ನೌಕಾ ಅಕಾಡೆಮಿ (Naval Academy-NA) ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಪಿಯುಸಿ, ಪದವಿ ಅರ್ಹತೆ ಹೊಂದಿರುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಯುಪಿಎಸ್​ಸಿಯಿಂದ NDA-NA ನೇಮಕಾತಿ (ಯುಪಿಎಸ್​ಸಿ ವೆಬ್​ಸೈಟ್​​)

ಹುದ್ದೆ ವಿವರ: ಒಟ್ಟ 863 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಯಾವ ವಿಭಾಗದಲ್ಲಿ ಎಷ್ಟು ಹುದ್ದೆಗಳು ಎಂಬ ಮಾಹಿತಿ ಇಲ್ಲಿದೆ.

  • ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಸೇನೆ) - 208
  • ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ನೌಕೆ) - 42
  • ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ವಾಯು ಸೇನೆ- ಹಾರಾಟ) - 92
  • ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ವಾಯು ಸೇನೆ- ಗ್ರೌಂಡ್​ ಡ್ಯೂಟಿ) - 18
  • ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ವಾಯು ಸೇನೆ -ಗ್ರೌಂಡ್​ ಡ್ಯೂಟಿ-ತಾಂತ್ರಿಕೇತರ) - 10
  • ನೌಕಾ ಅಕಾಡೆಮಿ - 34
  • ಭಾರತೀಯ ಸೇನಾ ಅಕಾಡೆಮಿ - 100
  • ಭಾರತೀಯ ನೌಕಾ ಅಕಾಡೆಮಿ -32
  • ವಾಯು ಸೇನಾ ಅಕಾಡೆಮಿ - 32
  • ಆಫೀಸರ್​ ಟ್ರೈನಿಂಗ್​ ಅಕಾಡೆಮಿ (ಪುರುಷ)- 276
  • ಆಫೀಸರ್​ ಟ್ರೈನಿಂಗ್​ ಅಕಾಡೆಮಿ (ಮಹಿಳಾ) -19

ವಿದ್ಯಾರ್ಹತೆ: ಎನ್​ಡಿಎ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ಪೂರ್ಣಗೊಳಿಸಿರಬೇಕು. ಭಾರತೀಯ ಸೇನಾ ಅಕಾಡೆಮಿ ಹುದ್ದೆಗೆ ಪದವಿ, ಭಾರತೀಯ ನೌಕಾ ಅಕಾಡೆಮಿಗೆ ಇಂಜಿನಿಯರಿಂಗ್​ ಪದವಿ, ವಾಯು ಸೇನಾ ಅಕಾಡೆಮಿಗೆ ಪದವಿ, ಇಂಜಿನಿಯರಿಂಗ್​ ಪದವಿ, ಆಫೀಸರ್​ ಟ್ರೈನಿಂಗ್​ ಅಕಾಡೆಮಿಗೆ ಪದವಿ ಪೂರ್ಣಗೊಳಿಸಿರಬೇಕು

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2 ಜನವರಿ​ 2006 ಮತ್ತು 1 ಜನವರಿ 2009ರ ನಡುವೆ ಜನಿಸಿರಬೇಕು.

ಐಎಂಎ ಮತ್ತು ಭಾರತೀಯ ನೌಕಾ ಸೇನೆಗೆ ಅಭ್ಯರ್ಥಿಗಳು 2 ಜುಲೈ 2001 ಮತ್ತು 1 ಜುಲೈ 2006ರ ನಡುವೆ ಜನಿಸಿರಬೇಕು.

ವಾಯು ಸೇನಾ ಅಕಾಡೆಮಿಗೆ ಕನಿಷ್ಠ 20 ಮತ್ತು ಗರಿಷ್ಠ 24 ವರ್ಷ ವಯೋಮಿತಿ ಹೊಂದಿರಬೇಕು.

ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಉದ್ಯೋಗಾಕಾಂಕ್ಷಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಎನ್​ಡಿಎ ಮತ್ತು ನೌಕಾ ಅಕಾಡೆಮಿ ಪರೀಕ್ಷೆಗೆ ಪ.ಜಾ, ಪ.ಪಂ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದ್ದು, ಇತರ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ತುಂಬಬೇಕು.

ಕಂಬೈನ್ಡ್​​ ಡಿಫೆನ್ಸ್​ ಸರ್ವೀಸ್​ ಪರೀಕ್ಷೆಗೆ ಪ.ಜಾ, ಪ.ಪಂ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದ್ದು, ಇತರ ಅಭ್ಯರ್ಥಿಗಳಿಗೆ 200 ರೂ. ಅರ್ಜಿ ಶುಲ್ಕ ನಿಗದಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ, ಬೌದ್ಧಿಕ ಮತ್ತು ವ್ಯಕ್ತಿತ್ವ ಪರೀಕ್ಷೆ, ಪೈಲಟ್​ ಆಪ್ಟಿಟ್ಯೂಡ್​​ ಪರೀಕ್ಷೆ ಜೊತೆಗೆ ಸಂದರ್ಶನ ಇರುತ್ತದೆ.

ಈ ಹುದ್ದೆಗೆ ಮೇ 15 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್​ 4 ಆಗಿದೆ. ಅರ್ಜಿ ಪರಿಷ್ಕರಣೆಗೆ ಜೂನ್​ 5 ರಿಂದ 11ರ ವರೆಗೆ ಅವಕಾಶ ಇದೆ. ಸೆಪ್ಟೆಂಬರ್​ 1ರಂದು ಪರೀಕ್ಷೆ ನಡೆಯಲಿದೆ.

ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಆಕಾಂಕ್ಷಿಗಳು upsc.gov.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: ಬಿಎಸ್​ಎಫ್​​ ನೇಮಕಾತಿ: ಗ್ರೂಪ್​ ಬಿ ಮತ್ತು ಸಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ABOUT THE AUTHOR

...view details