ಬೆಂಗಳೂರು:ರಕ್ಷಣಾ ಇಲಾಖೆಯಿಂದ ದಕ್ಷಿಣ ವಲಯದ ಎಎಸ್ಸಿ ಸೆಂಟರ್ನಲ್ಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಒಟ್ಟು 71 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಎಸ್ಎಸ್ಎಲ್ಸಿ ಮತ್ತು ಪಿಯುಸಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಕೆ ಸೇರಿದಂತೆ ಇನ್ನಿತರ ವಿವರ ಇಲ್ಲಿದೆ.
ಹುದ್ದೆ ವಿವರ: ಎಎಸ್ಸಿ ಕೇಂದ್ರದಲ್ಲಿರುವ ಹುದ್ದೆಗಳ ವಿವರ ಹೀಗಿದೆ.
ಹುದ್ದೆ ವಿವರ | ಹುದ್ದೆ ಸಂಖ್ಯೆ |
ಕುಕ್ | 3 |
ಸಿವಿಲಿಯನ್ ಕ್ಯಾಟರಿಂಗ್ ಇನ್ಸ್ಟ್ರಕ್ಟರ್ | 3 |
ಎಂಟಿಎಸ್ (ಚೌಕಿದಾರ) | 2 |
ಟ್ರೇಡ್ಸ್ಮ್ಯಾನ್ ಮೇಟ್ (ಲೇಬರ್ ) | 8 |
ವೆಹಿಕಲ್ ಮೆಕಾನಿಕ್ | 1 |
ಸಿವಿಲಿಯನ್ ಮೋಟರ್ ಡ್ರೈವರ್ | 9 |
ಕ್ಲೀನರ್ | 4 |
ಲೀಡಿಂಗ್ ಫೈರ್ಮ್ಯಾನ್ | 1 |
ಫೈರ್ಮ್ಯಾನ್ | 30 |
ಫೈರ್ ಇಂಜಿನ್ ಡ್ರೈವರ್ | 10 |
ವಿದ್ಯಾರ್ಹತೆ:ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್ಎಸ್ಎಲ್ಸಿ ಮತ್ತು ಸಂಬಂಧಿಸಿದ ವಿಷಯದಲ್ಲಿ ಡಿಪ್ಲೊಮೊ ಪದವಿಯನ್ನು ಹೊಂದಿರಬೇಕು.
ಕುಕ್ ಮತ್ತು ಡ್ರೈವರ್, ವೆಹಿಕಲ್ ಮೆಕಾನಿಕ್, ಕ್ಲೀನರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ ಜ್ಞಾನವನ್ನು ಹೊಂದಿರಬೇಕು.
ವೇತನ: ಅಭ್ಯರ್ಥಿಗಳಿಗೆ ಕೆಳಗಿನ ಹುದ್ದೆಗೆ 19,900 -21,700 ರೂ. ಮಾಸಿಕ ವೇತನ ನಿಗದಿಸಲಾಗಿದೆ.
ವಯೋಮಿತಿ:ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ರಿಂದ ಗರಿಷ್ಠ 25 ವರ್ಷದ ವಯೋಮಿತಿಯನ್ನು ಮೀರಿರಬಾರದು.