ಬೆಂಗಳೂರು: ಕರ್ನಾಟಕ ವಿಧಾನಸಭೆ ಸಚಿವಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ವರದಿಗಾರರು, ದಲಾಯತ್ ಸೇರಿದಂತೆ ಹಲವು ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಹುದ್ದೆ ವಿವರ:
- ಕನ್ನಡ ವರದಿಗಾರರು - 3
- ಆಂಗ್ಲ ವರದಿಗಾರರು - 1
- ಕಂಪ್ಯೂಟರ್ ಆಪರೇಟರ್ - 3
- ದಲಾಯತ್ - 16
- ಸ್ವೀಪರ್ - 1
ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಗುರುತಿಸಲಾದ ಹುದ್ದೆಗಳ ವಿವರ ಹೀಗಿದೆ.
- ಜ್ಯೂನಿಯರ್ ಪ್ರೋಗ್ರಾಮರ್ - 1
- ಕನ್ನಡ ವರದಿಗಾರರು - 3
- ಕಂಪ್ಯೂಟರ್ ಆಪರೇಟರ್ - 1
- ಕಿರಿಯ ಸಹಾಯಕರು - 1
- ಕಿರಿಯ ಗ್ರಂಥಾಲಯ ಸಹಾಯಕರು - 1
- ಮಸಾಜರ್ - 1
- ಬಡಗಿ - 1
- ದಲಾಯತ್ - 1
- ಸ್ವೀಪರ್ - 1
ವಿದ್ಯಾರ್ಹತೆ:
- ಜ್ಯೂನಿಯರ್ ಪ್ರೋಗ್ರಾಮರ್: ಕಂಪ್ಯೂಟರ್ ಸೈನ್ಸ್, ಮಾಹಿತಿ ವಿಜ್ಞಾನ, ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ನಲ್ಲಿ ಎಂಸಿಎ ಪದವಿ ಹೊಂದಿರಬೇಕು
- ಕನ್ನಡ ವರದಿಗಾರರು: ಪದವಿ ಜೊತೆಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರವೀಣ ದರ್ಜೆಯ ಕನ್ನಡ ಶೀಘ್ರಲಿಪಿ ಹಾಗೂ ಫ್ರೌಢ ದರ್ಜೆಯ ಕನ್ನಡ ಬೆರಳಚ್ಚು ಪರೀಕ್ಷೆ ಉರ್ತೀರ್ಣರಾಗಿರಬೇಕು.
- ಕಂಪ್ಯೂಟರ್ ಆಪರೇಟರ್:ಬಿಸಿಎ ಅಥವಾ ಕಂಪ್ಯೂಟರ್ ಸೈನ್ಸ್ನಲ್ಲಿ ಬಿಎಸ್ಸಿ ಪದವಿ
- ಕಿರಿಯ ಸಹಾಯಕರು: ಪದವಿ
- ಕಿರಿಯ ಗ್ರಂಥಾಲಯ ಸಹಾಯಕರು : ಲೈಬ್ರರಿ ಸೈನ್ಸ್ನಲ್ಲಿ ಪದವಿ, ಗಣಕ ಯಂತ್ರದ ಜ್ಞಾನ
- ಮಸಾಜರ್: 7ನೇ ತರಗತಿ, ಹೆಲ್ತ್ ಕ್ಲಬ್ನಲ್ಲಿ 5 ವರ್ಷ ಮಸಾಜರ್ ಆಗಿ ಕಾರ್ಯ ನಿರ್ವಹಿಸಿದ ಅನುಭವ.
- ಬಡಗಿ: ಎಸ್ಎಸ್ಎಲ್ಸಿ ಅಥವಾ ಐಟಿಐ
- ದಲಾಯತ್: 7ನೇ ತರಗತಿ
- ಸ್ವೀಪರ್ 4ನೇ ತರಗತಿ
ವಯೋಮಿತಿ: ಅಭ್ಯರ್ಥಿಗಳು ಕನಿಷ್ಠ 18 ಮತ್ತು ಗರಿಷ್ಠ 35 ವರ್ಷ. ಪ.ಜಾ, ಪ.ಪಂ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 40 ವರ್ಷ, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 38 ವರ್ಷ