ಕರ್ನಾಟಕ

karnataka

ETV Bharat / education-and-career

ಬಿಡಿಎಯಲ್ಲಿ ಉದ್ಯೋಗಾವಕಾಶ: ಎಫ್​ಡಿಎ, ಎಸ್​ಡಿಎ ಹುದ್ದೆಗಳ ಭರ್ತಿಗೆ KEA ಅಧಿಸೂಚನೆ - SDA FDA Recruitment

ಒಟ್ಟು 101 ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಧಿಸೂಚನೆ ಹೊರಡಿಸಿದೆ.

KEA Notification for 101 post recruitment in BDA and GTTC
KEA Notification for 101 post recruitment in BDA and GTTC

By ETV Bharat Karnataka Team

Published : Mar 6, 2024, 11:53 AM IST

ಹೈದರಾಬಾದ್​: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿರುವ(ಬಿಡಿಎ) ಎಫ್​ಡಿಎ ಮತ್ತು ಎಸ್​ಡಿಎ ಹಾಗೂ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ ಖಾಲಿ ಇರುವ ಇತರೆ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಧಿಸೂಚನೆ ಪ್ರಕಟಿಸಿದೆ. ಒಟ್ಟು 101 ಹುದ್ದೆಗಳ ನೇಮಕಾತಿಗೆ ಅರ್ಹ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ:

  • ಬಿಡಿಎಯಲ್ಲಿರುವ ಎಫ್​ಡಿಎ, ಎಸ್​​ಡಿಎ ಹುದ್ದೆಗಳು- 25
  • ಜಿಟಿಟಿಸಿಯಲ್ಲಿ ಖಾಲಿ ಇರುವ ಹುದ್ದೆಗಳು - 76

ಪದವಿ ಹಾಗು ಪಿಯುಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಕೆಇಎ ಪರೀಕ್ಷೆ ನಡೆಸಲಿದೆ.

ಅಧಿಸೂಚನೆ

ವಯೋಮಿತಿ, ಅರ್ಜಿ ಶುಲ್ಕ ಸೇರಿದಂತೆ ವಿವರವಾದ ಅರ್ಜಿಯನ್ನು ಕೆಇಎ ಮಾರ್ಚ್​ 24ರಂದು ಬಿಡುಗಡೆ ಮಾಡಲಿದೆ. ಅದೇ ದಿನ ಅರ್ಜಿ ಭರ್ತಿ ಪ್ರಕ್ರಿಯೆ ಕೂಡ ನಡೆಯಲಿದೆ. ಅರ್ಜಿ ಸಲ್ಲಿಕೆಗೆ ಏಪ್ರಿಲ್​ 25 ಕಡೇಯ ದಿನವಾಗಿದೆ. ಅಧಿಸೂಚನೆ ಸೇರಿದಂತೆ ಅಗತ್ಯ ವಿವರಗಳಿಗೆ ಅಭ್ಯರ್ಥಿಗಳುkea.kar.nic.inಇಲ್ಲಿಗೆ ಭೇಟಿ ನೀಡಬಹುದು.

ಕೆಎಎಸ್‌ ಪ್ರೊಬೆಷನರ್ಸ್​​ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ:ಕರ್ನಾಟಕ ಗೆಜೆಟೆಡ್​ ಪ್ರೊಬೇಷನರ್ಸ್​​​​ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮಾರ್ಚ್​3ರಿಂದ ಆರಂಭವಾಗಿದೆ. ಗ್ರೂಪ್​ ಎ- 159, ಗ್ರೂಪ್​ ಬಿ- 225 ಹುದ್ದೆಗಳಿಗೆ ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕನಿಷ್ಟ 21, ಗರಿಷ್ಠ 38 ವರ್ಷ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ಮತ್ತು ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂ. ಮತ್ತು ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು 300 ರೂ., ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂ. ಅರ್ಜಿ ಶುಲ್ಕ ವಿಧಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1 ಮತ್ತು ವಿಶೇಷಚೇತನ ಅಭ್ಯರ್ಥಿಗಳಿಗೆ ಶುಲ್ಕ ಪಾವತಿ ವಿನಾಯಿತಿ ನೀಡಲಾಗಿದೆ. ಅರ್ಜಿ ಸಲ್ಲಿಕೆಗೆ ಏಪ್ರಿಲ್​ 3 ಕಡೇಯ ದಿನ. ಹೆಚ್ಚಿನ ಮಾಹಿತಿಗೆ kpsc.kar.nic.inಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ:ಕರ್ನಾಟಕ ವಿಧಾನ ಪರಿಷತ್ ಸಚಿವಾಲಯದಲ್ಲಿ ಚಾಲಕ​​, ಗ್ರೂಪ್​ ಡಿ ಹುದ್ದೆಗೆ ಅರ್ಜಿ ಆಹ್ವಾನ

ABOUT THE AUTHOR

...view details