ಕರ್ನಾಟಕ

karnataka

ETV Bharat / education-and-career

ಲೈಬ್ರರಿ ಸೈನ್ಸ್​ ಪದವಿ ಆದವರಿಗೆ ಬೆಂಗಳೂರಿನ ಐಐಎಸ್ಸಿಯಲ್ಲಿದೆ ಉದ್ಯೋಗಾವಕಾಶ - Bengaluru IISC and Coffee board - BENGALURU IISC AND COFFEE BOARD

ಬೆಂಗಳೂರಿನ ಐಐಎಸ್ಸಿ ಮತ್ತು ಕಾಫಿ ಬೋರ್ಡ್​ನಲ್ಲಿ ಪದವೀಧರರ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ.

Job opportunity for Degree holders in Bengaluru IISC and Coffee board
Job opportunity for Degree holders in Bengaluru IISC and Coffee board (File Photo)

By ETV Bharat Karnataka Team

Published : May 10, 2024, 12:45 PM IST

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಲೈಬ್ರರಿ ಅಂಡ್​ ಇನ್ಫಾರ್ಮೆಷನ್​ ಮ್ಯಾನೇಜ್​ಮೆಂಟ್​ ಪ್ರಾಜೆಕ್ಟ್​ ಟ್ರೈನಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಹುದ್ದೆ ವಿವರ: ಒಟ್ಟು ಆರು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ವಿದ್ಯಾರ್ಹತೆ: ಅಭ್ಯರ್ಥಿಗಳು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ಅಥವಾ ಅದಕ್ಕೆ ತತ್ಸಮಾನದ ವಿಷಯದಲ್ಲಿ ಪದವಿಯನ್ನು 2023 -2024ರ ವರ್ಷದಲ್ಲಿ ಉತ್ತೀರ್ಣರಾಗಿರಬೇಕು.

ವೇತನ: ಮಾಸಿಕ 25 ಸಾವಿರ ರೂ

ವಯೋಮಿತಿ:ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 26 ವರ್ಷ ಮೀರಬಾರದು.

ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಎರಡಯ ವರ್ಷದ ಅವಧಿಗೆ ಭರ್ತಿ ಮಾಡಲಾಗುವುದು.

ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಐಐಎಸ್ಸಿಯ ಅಧಿಕೃತ ಜಾಲತಾಣದಲ್ಲಿ recruiitment.iisc.ac.in/temprary_positions/ ಇಲ್ಲಿ ಅರ್ಜಿ ಸಲ್ಲಿಕೆ ಮಾಡಬೇಕಿದೆ.

ಈ ಹುದ್ದೆಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ನಡೆಸಲಾಗುವುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಕಡೆಯ ದಿನ ಮೇ 20 ಆಗಿದೆ.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು iisc.ac.inಇಲ್ಲಿಗೆ ಭೇಟಿ ನೀಡಿ.

ಐಐಎಸ್ಸಿ ಅಧಿಸೂಚನೆ (ಐಐಎಸ್ಸಿ ವೆಬ್​ಸೈಟ್​​)

ಬೆಂಗಳೂರಿನ ಕಾಫಿ ಬೋರ್ಡ್​ನಲ್ಲಿ ಹುದ್ದೆ:

ಬೆಂಗಳೂರಿನಲ್ಲಿರುವ ಕಾಫಿ ಬೋರ್ಡ್​​ ಆಫ್​ ಇಂಡಿಯಾದಲ್ಲಿ ಖಾಲಿ ಇರುವ ಕಾಲ್​ ಸೆಂಟರ್​​ ಆಪರೇಟರ್​ ಹುದ್ದೆಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಪದವಿ ಆಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ಹುದ್ದೆಗಳನ್ನು ತಾತ್ಕಾಲಿಕವಾಗಿ 11 ತಿಂಗಳ ಅವಧಿಗೆ ಆಯ್ಕೆ ಮಾಡಲಾಗುವುದು.

ಪದವಿ ಆಗಿರುವ ಕನ್ನಡ ಮತ್ತು ಇಂಗ್ಲಿಷ್​ ಭಾಷೆಯಲ್ಲಿ ಉತ್ತಮ ಹಿಡಿತ ಹೊಂದಿರುವ, ಸಾಮಾನ್ಯ ಕಂಪ್ಯೂಟರ್​ ಜ್ಞಾನ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ಹುದ್ದೆಗೆ ಮಾಡಿದ 15 ರಿಂದ 18 ಸಾವಿರ ವೇತನ ನಿಗದಿಸಲಾಗಿದೆ.

ಈ ಹುದ್ದೆಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ತಮ್ಮ ಸಿವಿಯನ್ನು hpriyanka17997@gmail.com ಇಲ್ಲಿಗೆ ಕಳುಹಿಸಬೇಕು. ಅರ್ಜಿ ಸಲ್ಲಿಕೆಗೆ ಕಡೇಯ ದಿನ ಮೇ 19 ಆಗಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆindiacoffee.orgಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: ನೌಕಾ ಸೇನೆಯಲ್ಲಿ ನೇಮಕಾತಿ; ಪಿಯುಸಿ ಆಗಿದ್ರೆ, ಅಗ್ನಿವೀರ್​ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ

ABOUT THE AUTHOR

...view details