ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ಸಿಇಆರ್ಟಿ)ಯಿಂದ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಒಟ್ಟು 170 ಹುದ್ದೆಗಳ ಭರ್ತಿಗೆ ಪದವೀಧರರಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಹುದ್ದೆಗಳ ವಿವರ: ಎನ್ಸಿಆರ್ಟಿಯಿಂದ ಅರ್ಜಿ ಆಹ್ವಾನಿಸಲಾದ ಹುದ್ದೆಗಳ ಮಾಹಿತಿ ಹೀಗಿದೆ.
- ಸಹಾಯಕ ಸಂಪಾದಕರು: 60
- ಪ್ರೂಫ್ ರೀಡರ್ : 60
- ಡಿಟಿಪಿ ಆಪರೇಟರ್ : 50
ವಿದ್ಯಾರ್ಹತೆ: ಅಭ್ಯರ್ಥಿಗಳು ಪದವಿಯನ್ನು ಹೊಂದಿರಬೇಕು. ಅಭ್ಯರ್ಥಿಗಳು ಎಡಿಟಿಂಗ್, ಪ್ರೂಫ್ ರೀಡಿಂಗ್ ಅನುಭವವನ್ನು ಹೊಂದಿರಬೇಕು. ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಹಿಡಿತವನ್ನು ಹೊಂದಿರಬೇಕು. ಪುಸ್ತಕ ಪ್ರಕಟಣೆ ತಂತ್ರ, ಪ್ರಕಟಣೆಯ ಆಧುನಿಕ ಪ್ರಕ್ರಿಯೆ, ಸೇರಿದಂತೆ ಇತರೆ ಕೌಶಲ್ಯವನ್ನು ಹೊಂದಿರಬೇಕು.
ಹುದ್ದೆ ಅವಧಿ: ಈ ಹುದ್ದೆಗಳ ಅವಧಿ ಕೇವಲ ನಾಲ್ಕು ತಿಂಗಳಾಗಿದ್ದು, ಒಂದು ವರ್ಷದವರೆಗೆ ಹುದ್ದೆ ವಿಸ್ತರಣೆ ನಡೆಯಲಿದೆ
ವೇತನ
- ಸಹಾಯಕ ಸಂಪಾದಕರು: 80 ಸಾವಿರ ರೂ.
- ಪ್ರೂಫ್ ರೀಡರ್ : 37 ಸಾವಿರ ರೂ.
- ಡಿಟಿಪಿ ಆಪರೇಟರ್ : 50 ಸಾವಿರ ರೂ.
ವಯೋಮಿತಿ : ಸಹಾಯಕ ಸಂಪಾದಕರ ಹುದ್ದೆಗೆ ಗರಿಷ್ಠ- 50 ವರ್ಷ, ಪ್ರೂಫ್ ರೀಡರ್ ಹುದ್ದೆಗೆ ಗರಿಷ್ಠ 42 ವರ್ಷ, ಡಿಟಿಪಿ ಆಪರೇಟರ್ ಹುದ್ದೆಗೆ 45 ವರ್ಷ ವಯೋಮಿತಿ ನಿಗದಿಸಲಾಗಿದೆ.
ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅಭ್ಯರ್ಥಿಗಳನ್ನು ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.